ಮಂಡ್ಯ:ತಮ್ಮ ಜನ್ಮದಿನದ ಸಂಭ್ರಮದ ಅಂಗವಾಗಿ ಅಭಿಮಾನಿಗಳ ಬಳಗದ ವತಿಯಿಂದ ವಿವಿಧ ಬೃಹತ್ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸರಾಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕ್ಟೋಬರ್ ೧೯ ರ ಭಾನುವಾರ ಬೆಳಿಗ್ಗೆ ೧೦ ಗಂಟೆಯಿಂದ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಂಆರ್ ಗ್ರೂಪ್ಸ್, ಶ್ರೀಮತಿ ತಾಯಮ್ಮ ರಾಮೇಗೌಡ ಚಾರಿಟಬಲ್ ಟ್ರಸ್ಟ್ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಆದಿಚುಂಚನಗಿರಿ ಪೀಠಾಧಿಪತಿಗಳಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ನಂಜಾವದೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸುತ್ತೂರು ದೇಶಿಕೇಂದ್ರ ಶಿವರಾತ್ರಿ ಸ್ವಾಮೀಜಿ, ಬೇಬಿ ಬೆಟ್ಟದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ, ಆಶಿರ್ವಚನ ನೀಡುವರು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಗಡೆ, ಶಿವಮೊಗ್ಗದ ಕುವೆಂಪು ವಿವಿಯ ಉಪಕುಲಪತಿ ಶರತ್ ಆನಂದ ಮೂರ್ತಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಲನಚಿತ್ರ ನಿರ್ಮಾಪಕ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಅವರ ಸಹೋದರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಸಮಾಜದ ಗುರುಗಳಿಗೆ ಗುರುವಂದನೆ ಮತ್ತು ನಾಡಿನ ಗಣ್ಯರಿಗೆ ಅಭಿನಂದನೆ, ಎಂ.ಎಂ ಫೌಂಡೇಶನ್ “ಜೀವ ರತ್ನಾ” ಸೇವೆಯಡಿ “ಅಂಬ್ಯುಲೆನ್ಸ್ ವಾಹನ ಲೋಕಾರ್ಪಣೆ, ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಬಾಲ ಗಂಗಾಧರನಾಥ ಮಹಾಸ್ವಾಮೀಜಿ ಸ್ಮರಣಾರ್ಥ “ಕಲ್ಪವೃಕ್ಷ ಸೇವೆಯಡಿ ಜಿಲ್ಲೆಯ ರೈತರಿಗೆ ೨೫ ಸಾವಿರ ತೆಂಗಿನ ಸಸಿಗಳ ವಿತರಣೆ ನಡೆಯಲಿದೆ ಎಂದರು.
ಜಿಲ್ಲೆಯ ೭ ತಾಲ್ಲೂಕುಗಳ ಮಾದರಿ ರೈತರಿಗೆ “ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಉತ್ತಮ ರೈತ ಪ್ರಶಸ್ತಿ , ಪ್ರದಾನ ಮಾಜಿ ಸೈನಿಕರಿಗೆ ಸ್ವಾತಂತ್ರ್ಯ ಹೋರಾಟಗಾರ “ದಿ ಕಾಳಭೈರೇಗೌಡ ವೀರ ಪ್ರಶಸ್ತಿ, ಬೃಹತ್ ಉದ್ಯೋಗ ಮೇಳ,ಆರೋಗ್ಯ ತಪಾಸಣಾ ಶಿಬಿರ ಪೌರಕಾರ್ಮಿಕರು, ಆಟೋಚಾಲಕರು, ವಾಟರ್ ಮ್ಯಾನ್ ಹಾಗೂ ಗಾರೆ ಕಾರ್ಮಿಕರುಗಳಿಗೆ ಸಮವಸ್ತ್ರ ವಿತರಣೆ ಮತ್ತು ಶ್ರೀಮತಿ ತಾಯಮ್ಮ ಮತ್ತು ಶ್ರೀ ರಾಮೇಗೌಡ “ಉತ್ತಮ ಸೇವಾ ಪ್ರಶಸ್ತಿ” ಪ್ರದಾನ. ಮಹಿಳೆಯರಿಗೆ “ಹೊಲಿಗೆ ಯಂತ್ರ ಉತ್ತಮ ಶಿಕ್ಷಕರಿಗೆ “ಕುವೆಂಪು ವಿಶ್ವಮಾನವ ಪ್ರಶಸ್ತಿ” ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅನಿಕೇತನ ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣೆ ಮಾಡಲಾಗುವುದು ಎಂದರು.
ದ್ವಿಚಕ್ರ ವಾಹನ ಸವಾರರಿಗೆ “ರಕ್ಷಾ ಕವಚ” ಸೇವೆಯಡಿ “ವಿಮಾ ಪಾಲಿಸಿ” ಮತ್ತು ೧೦೦೦ ಹೆಲೈಟ್ ವಿತರಣೆ ಸಾಧಕರಿಗೆ ಮತ್ತು ಜಿಲ್ಲೆಯ ಯಶಸ್ವಿ ಉದ್ಯಮಿಗಳಿಗೆ “ಕೆಂಪೇಗೌಡ ಮಂಡ್ಯ ಪುರಸ್ಕಾರ” ಪ್ರದಾನ ಆಸಕ್ತ ಪೊಲೀಸ್ ಸಿಬ್ಬಂದಿಗಳಿಗೆ ಜರ್ಕಿನ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ನ್ಯಾಯಮೂರ್ತಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣೇಗೌಡ,ಅನಿಲ್,ಮಹೇಶ್,ಜಗದೀಶ್,ಚಂದ್ರು ಇದ್ದರು.