Tuesday, March 3, 2026
spot_img

ಎಸ್ ಎಸ್ ಎಲ್ ಸಿ ಪರೀಕ್ಷೇಯಲ್ಲಿ ಹಿಂದಿ ಕೈಬಿಡಲು ಆಗ್ರಹ

 

 

ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷೆ ರದ್ದು ಪಡಿಸುವ ಬಗ್ಗೆ ಎಡಿಸಿಗೆ ಮನವಿ

ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೇಯ ತೇರ್ಗಡೆಯಲ್ಲಿ ಹಿಂದಿ ಪರೀಕ್ಷೆ ತೇರ್ಗಡೆ ಕಡ್ಡಾಯಗೊಳಿಸದಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಅಪರ ಜಿಲ್ಲಾಧಿಕಾರಿ ಬಿ.ಸಿ‌.ಶಿವಾನಂದಾಮುರ್ತಿಯವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಹಿಂದಿ ಕಲಿಕೆ ಮತ್ತು ಹಿಂದಿ 100 ಅಂಕಗಳ ಪರೀಕ್ಷೆ ವಿಷಯವಾಗಿರುವುದು ಹಿಂದಿ ಹೇರಿಕೆಗೆ ಮುಖ್ಯ ನೆಲೆಯಾಗಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಬರುವ ಬಿಹಾರ ರಾಜ್ಯದಲ್ಲಿ PWE – Pass Without English ಎಂಬ ಕಾನೂನಿದೆ. ಕರ್ನಾಟಕ ಕೂಡ ಭಾರತ ಸಂವಿಧಾನ ಅಡಿಯಲ್ಲಿ ಇರುವ ಮತ್ತೊಂದು ರಾಜ್ಯ ಆಗಿರುವುದರಿಂದ PWE ರೀತಿಯೇ ಇಲ್ಲಿ PWH ಅಂದರೆ Pass Without Hindi ಕಾನೂನು ಮಾಡಲು ಸಾಧ್ಯವಿರುವುದರಿಂದ ಈ ಕೂಡಲೇ PWH ಕಾನೂನು ಜಾರಿ ಮಾಡಿ 2026 ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷೆ ರದ್ದು ಪಡಿಸಬೇಕು.

ಕರ್ನಾಟಕದಲ್ಲಿ ಕಳೆದ ಬಾರಿ ಎಸ್ ಎಸ್ ಎಲ್ ಸಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ನಪಾಸಾಗಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಹಿಂದಿ ತೊಡಕಾಗಿದೆ.ತ್ರಿಭಾಷ ಸೂತ್ರದ ಹೆಸರಲ್ಲಿ ಹಿಂದಿ ಹೇರಿಕೆ ಸರಿಯಾದುದಲ್ಲ.

ಶಿಕ್ಷಣ ನೀತಿಯಲ್ಲಿ ಸಹ ತ್ರಿಭಾಷ ಸೂತ್ರದ ಬದಲು ದ್ವಿಭಾಷ ನೀತಿ ಅಳವಡಿಸಲು ಸಲಹೆ ನೀಡಲಾಗಿದೆ.ರಾಜ್ಯ ಸರಕಾರ ಕೂಡಲೇ ಹಿಂದಿ ಕೈಬಿಟ್ಟು ದ್ವಿಭಾಷ ನೀತಿ ಜಾರಿಗೊಳಿಸಬೇಕು.
ಇಲ್ಲವಾದಲ್ಲಿ ಕನ್ನಡದ ಬೆಳವಣಿಗೆಗಾಗಿ ರಾಜ್ಯಾದ್ಯಂತ ಹಿಂದಿ ಪರೀಕ್ಷಾ ಕೊಠಡಿಗೆ ನುಗ್ಗಿ ಪರೀಕ್ಷೆ ನಡೆಸುವುದನ್ನು ತಡೆಯುತ್ತೇವೆಂದು ಈ ಮೂಲಕ ಎಚ್ಚರಿಸುತ್ತಿದ್ದೆವೆ.

ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ. ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಸಚಿನ್.ಕರುನಾಡ ಸೇವಕರು ಸಂಘಟನೆಯ ರಾಜ್ಯವಕ್ತಾರ ಎಂ.ಬಿ.ನಾಗಣ್ಣಗೌಡ. ಎಸ್ ಕೆ ರಾಜೂಗೌಡ.ರಾಜೇಂದ್ರ ಬಾಬು ಮೊದಲಾದವರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!