ಒಕ್ಕಲಿಗರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಆತ್ಮಾನಂದರಿಗೆ ಅಭಿನಂದನೆ
ಮಂಡ್ಯ:ಆ.೬. ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕವಾದ ಮಾಜಿ ಸಚಿವ ಎಂ ಎಸ್ ಆತ್ಮಾನಂದರನ್ನು ಅವರ ನಿವಾಸದಲ್ಲಿ ಸ್ಟೇಡಿಯಂ ವಾಕರ್ ಅಸೋಸಿಯೇಷನ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಅಭಿನಂದಿಸಿ ಮಾತನಾಡಿದ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ನಗರಸಭಾ ಸದಸ್ಯರಾಗಿ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಆತ್ಮನಂದಾರವರು ಶಾಸಕರು ಸಚಿವರು ಆಗಿ ಕಾರ್ಯನಿರ್ವಹಿಸಿದ್ದಾರೆ.
ಕಾವೇರಿ ಚಳುವಳಿ ಸಂಧರ್ಭದಲ್ಲಿ ಬಹುತೇಕ ರಾಜಕೀಯ ನಾಯಕರು ಆಡಳಿತದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಚಳುವಳಿಗೆ ಗೈರಾಗುವುದು ವಿರೋಧ ಪಕ್ಷದಲ್ಲಿದ್ದಾಗ ಚಳುವಳಿಯಲ್ಲಿ ಸಕ್ರಿಯಗೊಳ್ಳುತ್ತಿದ್ದರು.
ಆದರೆ ಮಾದೇಗೌಡರು ಆತ್ಮಾನಂದರು ಸ್ವತಃ ತಮ್ಮ ಪಕ್ಷದ ಸರಕಾರ ಮುಖ್ಯಮಂತ್ರಿಗಳು ಇದ್ದು ತಾವೇ ಶಾಸಕರಾಗಿದ್ದರು ಹೋರಾಟಕ್ಕೆ ಬೆನ್ನು ತೋರಲಿಲ್ಲ ಎಂದು ಶ್ಲಾಘಿಸಿದರು.
ಆತ್ಮನಂದಾರ ಅಧ್ಯಕ್ಷತೆಯಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳು.ಯೋಜನೆಗಳು ಸಮುದಾಯಕ್ಕೆ ತಲುಪಿಸುವ ಕೆಲಸವಾಗಬೇಕಿದೆ.
ನಿಗಮದ ಕಾರ್ಯಚಟುವಟಿಕೆಗಳು ಯೋಜನೆಗಳ ಕುರಿತು ಸಮುದಾಯದಲ್ಲಿ ಮಾಹಿತಿ ಕೊರತೆಯಿದೆ ಅದನ್ನು ಹೋಗಲಾಡಿಸುವ ಕೆಲಸವಾಗಬೇಕಿದೆಯೆಂದರು.
ಅಭಿನಂದನೆ ಸ್ವೀಕರಿಸಿದ ಮಾತನಾಡಿದ ನಿಗಮದ ನೂತನ ಅಧ್ಯಕ್ಷ ಆತ್ಮಾನಂದಾ ಎಲ್ಲರ ಸಲಹೆ ಸೂಚನೆಗಳೊಂದಿಗೆ ನಿಗಮವನ್ನು ಮುನ್ನೆಡೆಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ಎಂ ಎಸ್ ಅಭಿಲಾಷ್ ಉದ್ಯಮಿಗಳಾದ ಸುರೇಶ್ ಬಾಬು.ಅಶೋಕ್ ದೇವಿಪುರ ನಿವೃತ್ತ ಇಂಜಿನಿಯರ್ ಚನ್ನಯ್ಯ.ಚಂದ್ರು.ತಿಮ್ಮಯ್ಯ.ಮಾಜಿ ನಗರಸಭಾ ಸದಸ್ಯ ಮಹೇಶ್ ಹೊಸಳ್ಳಿ ಶೇಖರ.ಸಿದ್ದರಾಜ ಅರಸು .ಕೃಷ್ಣಮೂರ್ತಿ.ಗುರು.ಚಂದ್ರಧರ್ ಸೇರಿದಂತೆ ಅಸೋಸಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು