Tuesday, February 10, 2026
spot_img

ಗ್ರಾಪಂ ಆಡಳಿತಾಧಿಕಾರಿಗೆ ಜೈ ಎಂದ ಬೂದನೂರು ಗ್ರಾಮಸ್ಥರು

ಮಂಡ್ಯ: ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿ ಎಂ. ಕೆ. ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಸ್ವಾಗತಿಸಿ ಅಭಿನಂದಿಸಿದರು.
ಹಿಂದಿನ ಗ್ರಾಪಂ ಆಡಳಿತದಿಂದ ಬೇಸತ್ತಿರುವ ಗ್ರಾಮಸ್ಥರು, ಹೋರಾಟಗಾರರು ಜನಪ್ರತಿನಿಧಿಗಳ ಅಧಿಕಾರಕ್ಕಿಂತ ಅಧಿಕಾರಿಗಳ ಆಡಳಿತವೇ ಮೇಲು ಎಂದು ವಿಷಾದಿಸಿದರು. ಬೂದನೂರು ಗ್ರಾಮ ಪಂಚಾಯತಿ ಕಚೇರಿ ಮುಂದೆ ತೋರಣ ಕಟ್ಟಿ, ರಂಗೋಲಿ ಬಿಡಿಸಿ ಆಡಳಿತಾಧಿಕಾರಿಗೆ ಸ್ವಾಗತ ಕೋರಿದರು.

ಆಡಳಿತಾಧಿಕಾರಿಯಾಗಿ ಶಿಶು ಅಭಿವೃದ್ಧಿ ಅಧಿಕಾರಿ ಎಂ. ಕೆ. ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಬಳಿಕ ಶಾಲು ಹೊದಿಸಿ, ಮೈಸೂರು ಪೇಟಾ ಹಾಕಿ ಅಭಿನಂದಿಸಿ ನೆರೆದವರಿಗೆ ಸಿಹಿ ವಿತರಿಸಲಾಯಿತು.
ಇನ್ನೂ ಒಂದು ವರ್ಷ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದರು.
ಕಳೆದ ಐದು ವರ್ಷಗಳ ಆಡಳಿತದಲ್ಲಿ ಜನಪ್ರತಿನಿಧಿಗಳ ಅಕ್ರಮ, ಜನವಿರೋಧಿ ನೀತಿಯಿಂದಾಗಿ ಬೇಸತ್ತಿರುವುದಾಗಿ ಸ್ವಂತಮನೆ ನಮ್ಮ ಹಕ್ಕು ಹೋರಾಟಗಾರ್ತಿ ಸವಿತಾ ಅಳಲು ತೋಡಿಕೊಂಡರು.
ಬಡ ಜನರ ವಿರುದ್ಧ ಇರುವ ಆಡಳಿತಗಾರ ಜನಪ್ರತಿನಿಧಿಗಳ ಬದಲು ಅಧಿಕಾರಿಗಳ ಆಡಳಿತ ಉತ್ತಮವಾಗಿದೆ. ಚುನಾವಣೆಗಳು ಬೇಸರ ಮೂಡಿಸಿದೆ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಿ. ಸಿ. ಪುಟ್ಟಸ್ವಾಮಿ ಮಾತನಾಡಿ, ಜನರ ಪರವಾದ ಕೆಲಸ ಮಾಡಲು ಕಳೆದ ಆಡಳಿತ ಮಂಡಳಿ ವಿಫಲವಾಗಿದೆ. ಪ್ರಶ್ನಿಸಿದವರ ವಿರುದ್ಧ ಕಾನೂನು ಕ್ರಮ ವಹಿಸಲು ಮುಂದಾದ ಆಡಳಿತಗಾರರು ನಿಜವಾದ ಪ್ರಜಾಪ್ರಭುತ್ವ ವಿರೋಧಿಗಳು ಎಂದು ಬಣ್ಣಿಸಿದರು.
ಈ ವೇಳೆ ತಾಪಂ ಯೋಜನಾಧಿಕಾರಿ ವೆಂಕಟರಾವ್, ಪಿಡಿಒ ಸ್ವಾಮಿ, ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್, ಮುಖಂಡರಾದ ರಾಜೇಂದ್ರ, ಕುಳ್ಳ, ಜಯಮ್ಮ, ಶಿವರಾಜ್, ಸುನೀಲ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!