ಪ್ರಜ್ವಲ್ ರೇವಣ್ಣ ಕಾಮಕಾಂಡದ ಪೆನ್ ಡ್ರೈವ್ ಹಂಚಿಕೆ ವಿರುದ್ದ ಭಾರೀ ಪ್ರತಿಭಟನೆ
ಕೃಷ್ಣರಾಜ ಪೇಟೆ:ಮೇ.೯.ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭಾಗೀಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣದ ಪೆನ್ ಟ್ರೈವ್ ನ್ನು ಹಂಚಿಕೆ ಮಾಡಿರುವುದನ್ಮು ಖಂಡಿಸಿ ಜ್ಯಾದಳ ವತಿಯಿಂದ ಕೃಷ್ಣರಾಜ ಪೇಟೆಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಎಚ್ ಟಿ ಮಂಜು.ನಾಗಮಂಗಲದ ಮಾಜಿ ಶಾಸಕ ಎಲ್ ಆರ್ .ಶಿವರಾಮೇಗೌಡ ರವರ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದರು
ಹಾಸನ ಸಂಸದ ಪ್ರಜ್ವಲ್ ರೇವಣ್ಣರವರ ಕಾಮಕಾಂಡದ ಪೆನ್ ಡ್ರೈವನ್ನು ಬೃಹತ್ ಮಟ್ಟದಲ್ಲಿ ಸಾರ್ವಜನಿಕವಾಗಿ ಹಂಚಿದ ಆರೋಪ ಎದುರಿಸುತ್ತಿರುವ ಎಲ್.ಆರ್.ಶಿವರಾಮೇಗೌಡ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಮೇಲೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು .
ಪ್ರಜ್ವಲ್ ರೇವಣ್ಣ ಭಾಗೀಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣಕ್ಕೆ ಸಂಬಂದಿಸಿದ ಪೆನ್ ಡ್ರೈವ್ ಹಾದಿ ಬೀದಿಯಲ್ಲಿ ಹಂಚಿಕೆ ಮಾಡಿಸಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬದ ಮಾನಿಹಾನಿಯನ್ನು ಶಿವರಾಮೇಗೌಡ ಮತ್ತು ಡಿ.ಕೆ.ಶಿವಕುಮಾರ್ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ .
ಹಾಲೀ ಬಿಜೆಪಿಯಲ್ಲಿರುವ ಶಿವರಾಮೇಗೌಡ ಹಾಸನದ ಬಿಜೆಪಿ ಮುಖಂಡ ದೇವರಾಜೆಗೌಡನಿಗೆ ಡಿಕೆ ಶಿವಕುಮಾರ್ ಮೂಲಕ ಸಚಿವ ಪದವಿಯ ಆಮಿಷ ತೋರಿಸಿ ಪೆನ್ ಡ್ರೈವ್ ಪಡೆದು ಬಹುದೊಡ್ಡ ಪ್ರಮಾಣದಲ್ಲಿ ಹಂಚಿ ದೇವೆಗೌಡರ ಕುಟುಂಬದ ಮಾನಹಾನಿ ಮಾಡಲು ಹೊರಟಿದ್ದಾರೆ. ಸರ್ಕ ದೇವೇಗೌಡರ ಕುಟುಂಬದ ಮೇಲೆ ಕೀಳು ಮಟ್ಟದ ಅಪಪ್ರಚಾರ ಮಾಡುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಇವರ ವಿರುದ್ದ ತನಿಖೆ ಮಾಡಬೇಕು . ಇದರ ಜತೆಗೆ ಶಾಸಕ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ತಪ್ಪು ಮಾಡಿದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು . ಪೆನ್ ಡ್ರೈವ್ ನಲ್ಲಿ ಸಂತ್ರಸ್ತೆಯರ ಮುಖ ಮರೆಮಾಚದೇ ಅವರ ಮಾನಹಾನಿಯನ್ನು ಮಾಡಿದ್ದಾರೆ . ಇದರಿಂದಾಗಿ ಸಂತ್ರಸ್ತೆ ಮಹಿಳೆಯರು ಸಾರ್ವಜನಿಕವಾಗಿ ತಿರುಗಾಡಲು ಆಗದಂತೆ ಮಾಡಿದ್ದಾರೆ. ಇವರು ವ್ಯವಸ್ಥಿತವಾಗಿ ಹಾಸನದ ಹಾದಿ ಬೀದಿಯಲ್ಲಿ ಪೆನ್ ಡ್ರೈವ್ ಬೃಹತ್ ಪ್ರಮಾಣದಲ್ಲಿ ಹಂಚಿರುವ ವಿಚಾರವಾಗಿ ವಿಶೇಷ ತನಿಖಾ ತಂಡ ಯಾವುದೇ ತನಿಖೆಯನ್ನು ಮಾಡುತ್ತಿಲ್ಲ . ಈ ತನಿಖಾ ತಂಡ ರಾಜ್ಯ ಸರ್ಕಾರದ ಪ್ರಭಾವಿಗಳ ಅಣತಿಯಂತೆ ಕೆಲಸ ಮಾಡುತ್ತಿದೆ. ಆದ್ದರಿಂದ ನಮಗೆ ಈ ತನಿಖಾ ತಂಡದ ನಂಬಿಕೆ ಇಲ್ಲ .ಈ ಪ್ರಕರಣವನ್ನು CBI ಗೆ ವಹಿಸುವಂತೆ ಆಗ್ರಹಿಸುತ್ತೇನೆ ಎಂದರು.
ಇದೇ ಸಂಧರ್ಭದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಶಿವರಾಮೇಗೌಡ ರವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಲು ಯತ್ನಿಸಿದಾಗ ಪ್ರತಿಭಟನಾಕಾರರು ಮತ್ತು Dysp ಡಾ.ಸುಮೀತ್ ನಡುವೆ ವಾಗ್ವಾದ ನಡೆದು , ಕಡೆಗೆ ಪ್ರತಿಭಟನಾಕಾರರು ಪ್ರತಿಕೃತಿಗಳಿಗೆ ಬೆಂಕಿಹಚ್ಚಿ ಧಿಕ್ಕಾರ ಕೂಗಿದರು .
ಪ್ರತಿಭಟನೆಯಲ್ಲಿ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಡಿ.ರಮೇಶ್ , ತಾಲ್ಲೂಕು ಅಧ್ಯಕ್ಷ ಜಾನಕಿರಾಂ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್,ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ ಅಶೋಕ್,ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನೆಗೋಳ ಬಿ. ಎಂ ಕಿರಣ್,ತಾ ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಜೆಡಿಎಸ್ ಕಾನೂನು ಘಟಕದ ತಾಲೂಕು ಅಧ್ಯಕ್ಷ ವಿ. ಎಸ್ ಧನಂಜಯ್ ಕುಮಾರ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.