Monday, December 23, 2024
spot_img

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಆರೋಪಿ ಬಂಧನ.ಬಿಡುಗಡೆ

ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ ಪ್ರಕರಣದ ಆರೋಪಿ ಸೆರೆ
ಕೃಷ್ಣರಾಜ ಪೇಟೆ:ಮೇ.೧೦.ನಾಡಪ್ರೇಮಿ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ವಿರೂಪಗೊಳಿಸಿದ ಆರೋಪಿಯನ್ನು ಬಂಧಿಸುವಲ್ಲಿ ಕೃಷ್ಣರಾಜ ಪೇಟೆ ಪೋಲಿಸರು ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೇ 08 ರ ರಾತ್ರಿ ದುಷ್ಕರ್ಮಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣರ ಪ್ರತಿಮೆಯ ಖಡ್ಗ, ಖಡ್ಗದ ಪಟ್ಟಿ ಮತ್ತು ಕಾಲಿನ ಪಾದವನ್ನು ಮುರಿದು ಪರಾರಿಯಾಗಿದ್ದ.

ಮಾರನೆಯ ದಿನ ಬೆಳಿಗ್ಗೆ ಗ್ರಾಮಸ್ಥರು ರಾಯಣ್ಣರ ಪ್ರತಿಮೆ ಭಗ್ನಗೊಂಡಿರುವುದನ್ನು ಕಂಡು ಆಕ್ರೋಶಕ್ಕೆ ಒಳಗಾಗಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು.

ಇದರ ಜತೆಗೆ ರಾಜ್ಯಮಟ್ಟದ ಕುರುಬ ಜನಾಂಗ ಮುಖಂಡರು ಸ್ಥಳಕ್ಕೆ ಭೇಟಿ ಕೊಟ್ಟು ದುಷ್ಕರ್ಮಿಯನ್ನು ಬಂಧಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸ್ ಇಲಾಖೆ ಅದೇ ದಿನ ಬೆರಳಚ್ಚು ತಂತ್ರಜ್ಞರು ಮತ್ತು ಪೋಲಿಸ್ ನಾಯಿಪಡೆ ತರಬೇತುದಾರ ನಾಗರಾಜ್ ರವರ ಗರಡಿಯಲ್ಲಿ ಪಳಗಿರುವ ಭೈರವ ನಾಯಿಯನ್ನು ಕರೆಸಿ ಆರೋಪಿಯ ಪತ್ತೆಗೆ ತಡಕಾಡಿದರು.
ಈ ಸಂಧರ್ಭದಲ್ಲಿ ಭೈರವ ಬೀಕನಹಳ್ಳಿ ಗ್ರಾಮದ ಮೋಹನ್ ಅಲಿಯಾಸ್ ಗುಂಡ ರವರ ಮನೆಗೆ ಮನೆ ಬಳಿ ಸಾಗಿ ಆತನ ಗುರುತನ್ನು ಪೋಲೀಸರಿಗೆ ಸಾಕ್ಷ್ಯ ಒದಗಿಸಿತ್ತು . ಇದರ ಆಧಾರದ ಮೇಲೆ ತನಿಖೆ ಆರಂಭಿಸಿದ ಪೋಲೀಸರು.

ಸದರಿ ಆರೋಪಿಯು ಬೆಂಗಳೂರಿನ ಹೋಟೆಲ್ ನಲ್ಲಿ ಅಡುಗೆ ಭಟ್ಟನಾಗಿರುವುದು ತಿಳಿದು ಬಂದಿದ್ದು, ತನಿಖಾ ಸಂಧರ್ಭದಲ್ಲಿ ಆತ ಊರಿನಲ್ಲಿ ಇಲ್ಲದಿರುವುದು ಕಂಡು ಬಂದಿದೆ . ಈ ನಡುವೆ ಘಟನೆ ನಡೆದ ಎರಡು ದಿನದ ನಂತರ ಆತ ತಾಲ್ಲೂಕಿನ ಅಕ್ಕಿ ಹೆಬ್ಬಾಳು ಗ್ರಾಮದಲ್ಲಿರುವುದು ಪೋಲಿಸ್ ಬಾತ್ಮಿದಾರರಿಂದ ತಿಳಿದು ಬಂದಿದೆ . ತಕ್ಷಣ ಗ್ರಾಮಾಂತರ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ಆನಂದೇಗೌಡ ಮತ್ತು ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ನೇತೃತ್ವದ ತಂಡ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಆತನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ .

ಪ್ರಕರಣದ ಹಿನ್ನೆಲೆ – ಸದರಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆ ಮಾಡಿದ್ದಾಗ ಈತನನ್ನು ಗ್ರಾಮಸ್ಥರು ಪರಿಗಣನೆ ಮಾಡಲಿಲ್ಲ ಎಂಬ ಅಸಮಾಧಾನ ಈತನಿಗೆ ಇತ್ತು . ಈತ ಕಳೆದ ಎಂಟನೇ ತಾರೀಖು ಊರಿಗೆ ಬಂದಾಗ ಅದೇ ಕೋಪದಲ್ಲಿ ಮದ್ಯಪಾನ ಮಾಡಿ ರಾತ್ರಿ ಸಮಯದಲ್ಲಿ ಸದರಿ ಪ್ರತಿಮೆಯನ್ನು ವಿರೂಪಗೊಳಿಸಿ ಪ್ರತಿಮೆಯ ಖಡ್ಗ , ಖಡ್ಗದ ಪಟ್ಟಿಯನ್ನು ‌ಮುರಿದುಕೊಂಡು ತನ್ನ ಮನೆಯ ಬಳಿಯ ಇರುವ ಹುಲ್ಲಿನ‌ ಮೆದೆಯಲ್ಲಿ ಅಡಗಿಸಿ ಇಟ್ಟಿದನು . ಇದನ್ನು ತನಿಖಾ ಸಂಧರ್ಭದಲ್ಲಿ ವಶ ಪಡಿಸಿಕೊಂಡಿದ್ದಾರೆ .


ಸದರಿ ಆರೋಪಿಯನ್ನು ಪೋಲೀಸರು ಬಂಧಿಸಿ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ .


ಸದರಿ ತನಿಖಾ ತಂಡವಾದ ಗ್ರಾಮಾಂತರ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದೇಗೌಡ , ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ‌, ತನಿಖಾ ಸಹಾಯಕ ರಾದ ವೈರಮುಡಿ‌, ಜಯವರ್ಧನ ಮತ್ತು ಅರುಣ್ ಕುಮಾರ್ ರವರನ್ನು ಜಿಲ್ಲಾ ವರಿಷ್ಟಾಧಿಕಾರಿಗಳಾದ ಯತೀಶ್ ರವರು ಅಭಿನಂದಿಸಿದ್ದಾರೆ .

ವರದಿ:ಮಾಕವಳ್ಳಿ ಕುಮಾರಸ್ವಾಮಿ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!