ಪಾಂಡವಪುರ : ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ಹಾರೋಹಳ್ಳಿ ಗ್ರಾಮದ ಯುವಕರು ಬಹಳ ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮದ ಕೆಂಪೇಗೌಡರ ಬೀದಿಯಲ್ಲಿ (ದೊಡ್ಡಬೀದಿ) ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜತೆಗೆ ಹಾರೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೂ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಿಸಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಚಿಕನ್ ಪಲಾವ್ ಊಟ ಬಡಿಸಲಾಯಿತು.
ಮುಖ್ಯ ಶಿಕ್ಷಕ ಚಿದಾನಂದ್ ನಾಡಪ್ರಭು ಕೆಂಪೇಗೌಡರ ಆಡಳಿತ ವೈಭವ ಹಾಗೂ
ಇತಿಹಾಸ ತಿಳಿಸಿದರಲ್ಲದೇ, ಯುವ ಮುಖಂಡ ಎಚ್.ಡಿ.ಶ್ರೀಧರ್ ಮಾತನಾಡಿ, ಇಡೀ ವಿಶ್ವವೇ ಬೆರಗಿನಿಂದ ನೋಡುವ ರೀತಿ ಬೆಂಗಳೂರು ನಗರವನ್ನು ನಾಡಪ್ರಭು ಕೆಂಪೇಗೌಡರು ಅಭಿವೃದ್ಧಿ ಮಾಡಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ಸಾವಿರ ಕೆರೆಗಳನ್ನು ನಿರ್ಮಿಸಿದ್ದರಲ್ಲದೇ, ವಿವಿಧ ಜಾತಿಯ ಸಮುದಾಯವರು ವ್ಯಾಪಾರ-ವಹಿವಾಟು ನಡೆಸಲು ಅನುಕೂಲವಾಗುವಂತೆ ಪೇಟೆಗಳನ್ನು ನಿರ್ಮಿಸಿದ್ದರು. ಆದರೆ ಇಂದಿನ ರಾಜಕಾರಣಿಗಳು ಕೆರೆ-ಕಟ್ಟೆಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಕೆಂಪೇಗೌಡರ ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಗ್ರಾಮದ ಯುವಕರಾದ ಪ್ರದೀಪ (ಕುನ್ನಾ), ಡೈಮಂಡ್ ರವಿ, ಅಂಬಿ ಸತೀಶ್, ಯೋಗೇಶ್, ಪವನ್, ಎಚ್.ಡಿ.ಶ್ರೀಧರ್, ಎಚ್.ಸಿ.ಕೃಷ್ಣೇಗೌಡ (ಪಟೇಲ್), ದಿಲೀಪ್, ಸಾಗರ್, ಪಾಲ್ಕನ್ ನಾಗೇಗೌಡ, ಅಲೆಮನೆ ಮಂಜು, ಹಾರೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಚಿದಾನಂದ್, ಸಹ ಶಿಕ್ಷಕರಾದ ಸುವರ್ಣ, ಸವಿತಾ ಇತರರಿದ್ದರು.