ಸಿಎಸ್ ಪಿ ಬಗ್ಗೆ ಅಪಪ್ರಚಾರ :
ಕಾನೂನು ಕ್ರಮದ ಎಚ್ಚರಿಕೆ
ಮಂಡ್ಯ : ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಇರುವ ಹಳೆಯ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ರಾಜಕೀಯ ವಿರೋಧಿಗಳ ಕುಚೋದ್ಯವನ್ನು ಮೇಲುಕೋಟೆ ಕ್ಷೇತ್ರ ಜೆಡಿಎಸ್ ಖಂಡಿಸಿದೆ.
2020ರ ಮಾರ್ಚ್ ತಿಂಗಳಲ್ಲಿ ಡಿಕೆಶಿ ಅವರನ್ನು ಪುಟ್ಟರಾಜು ಭೇಟಿ ಆಗಿದ್ದರು. ಅ ವೇಲೆ ಹೂಗುಚ್ಚದೊಂದಿಗೆ ಇಬ್ಬರೂ ನಾಯಕರಿರುವ ಫೋಟೊ ಮುಂದಿಟ್ಟುಕೊಂಡು ನಿನ್ನೆಯಷ್ಟೇ ಭೇಟಿ ನಡೆದಿದೆ ಎನ್ನುವ ಕಟ್ಟುಕತೆ ಹೆಣೆದಿರುವುದನ್ನು ಪಕ್ಷ ಕಟುವಾಗಿ ಟೀಕಿಸಿದೆ.
ಈ ರೀತಿಯ ಅಪಪ್ರಚಾರದ ಮೂಲಕ ಪುಟ್ಟರಾಜು ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಷಡ್ಯಂತ್ರವನ್ನು ನಡೆಸಲಾಗಿದೆ.ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹಳೆಯ ಫೋಟೋ ಬಲಸಿಕೊಂಡು, ಗೊಂದಲ ಸೃಷ್ಟಿಸಲು ಕೆಲವರು ಸಂಚು ರೂಪಿಸಿದ್ದಾರೆ. ನಾಗರಿಕರು ಅಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಪಕ್ಷ ಮನವಿ ಮಾಡಿದೆ.