ಪಾಂಡವಪುರ : ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನು ನಾಡ ಪಿಸ್ತೂಲಿನಿಂದ ವ್ಯಕ್ತಿಯೊಬ್ನರಿಗೆ ಸಿನಿಮೀಯ ರೀತಿಯಲ್ಲಿ ಶೂಟೌಟ್ ಮಾಡಿ ಹತ್ಯೆಗೆ ಯತ್ನ ನಡೆಸಿರುವ ಘಟನೆ ತಾಲೂಕಿನ ಶಂಭೂನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎಸ್.ಸಿ.ಕಾಲನಿ
ನಿವಾಸಿ ಶಿವರಾಜು ಎಂಬಾತನೇ ಅದೇ
ಕಾಲನಿಯ ಮಂಜುನಾಥ್ ಎಂಬಾತನ ಮೇಲೆ ಶೂಟೌಟ್ ನಡೆಸಿದ್ದಾನೆ. ಅದೃಷ್ಟವಶಾತ್ ಗುಂಡಿನ ದಾಳಿಗೊಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಮುಂಬೈನಲ್ಲಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶಿವರಾಜು ಎರಡು ನಾಡ ಪಿಸ್ತೂಕಿನಿಂದ ಶಂಭೂನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಅವರ ಭಾವ ಜಗುಳಿ ಮೇಲೆ ಕುಳಿತಿದ್ದ ವೇಳೆ ಏಕಾಏಕಿ ದಾಳಿ ನಡೆಸಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ತಲೆ ಹಾಗೂ ಕಂಕುಳ ಬಳಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಮಂಜುನಾಥ್ ಅವರನ್ನು ರವಾನಿಸಲಾಗಿದೆ.
ಹಿಂದೆಯೂ ಹತ್ಯೆಗೆ ಯತ್ನಿಸಿದ್ದ : ಇದೇ ಆರೋಪಿ ಎರಡು ವರ್ಷಗಳ ಹಿಂದೆ ಕೂಡ ಮಂಜುನಾಥ್ ಮೇಲೆ ಹತ್ಯೆಗೆ ಯತ್ನಿಸಿ ಚಾಕುವಿನಿಂದ ಇರಿದಿದ್ದ ಎನ್ನಲಾಗಿದೆ.
ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.