:ಕಾರ್ಮಿಕರಿಗೆ ರಜೆ ನಿರಾಕರಣೆ:ಕನ್ನಡಪರ ಸಂಘಟನೆಗಳ ಆಕ್ರೋಶ
ಎಪ್ರಿಲ್ ೧೪ ಅಂಬೇಡ್ಕರ್ ಜನ್ಮ ದಿನದಂದು ಸರಕಾರಿ ರಜೆ ಘೋಷಿಸಿದ್ದರು ಅಕ್ರಮವಾಗಿ ಕಾರ್ಮಿಕರಿಂದ ದುಡಿಮೆ ಮಾಡಿಸಿಕೊಂಡ ಗೆಜ್ಜಲಗೆರೆ ಕೈಗಾರಿಕೆಗಳ ವಿರುದ್ದ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಎ ೧೪ ರಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ರಜೆ ಘೋಷಿಸಿವೆ.ಆದಾಗಿಯು ಮದ್ದೂರು ತಾಲೋಕಿನ ಗೆಜ್ಜಲಗೆರೆ ಕೈಗಾರಿಕಾ ವಲಯದ ಕಾರ್ಖಾನೆಗಳು
ರಜೆ ನೀಡದೆ ನಿಯಮ ಮೀರಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಕಂಡು ಬಂದಿತು.
ಈ ಸಂಧರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕರುನಾಡ ಸೇವಕರು ಸಂಘಟನೆ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ಮುದ್ದೇಗೌಡ.ದ್ರಾವಿಡ ಕನ್ನಡ ಸಂಘಟನೆ ಅಭೀಗೌಡ ಸೇರಿದಂತೆ ಹಲವರು
ಷಾಹೀ ಎಕ್ಸ್ ಪೋರ್ಟ್ ಕಂಪನಿ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಕಂಪನಿಯ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಎಂ.ಬಿ.ನಾಗಣ್ಣಗೌಡ ಇಡೀ ದೇಶಕ್ಕೆ ರಜೆ ಘೋಷಿಸಲಾಗಿದೆ.ಗೆಜ್ಜಲಗೆರೆ ಕೈಗಾರಿಕಾ ವಲಯ ರಿಪಬ್ಲಿಕ್ ಇಂಡಿಯಾ ದಲ್ಲಿ ಇದೆಯೋ.ಇಲ್ಲವೆ ಜೆಕ್ ರಿಪಬ್ಲಿಕ್ ನಲ್ಲಿ ಇದೆಯೋ.ನಿಯಮ ಮೀರಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಕಂಪನಿ ಹಾಗೂ ಇದಕ್ಕೆ ಸಹಕಾರ ನೀಡಿರುವ ಕಾರ್ಮಿಕ ಇಲಾಖೆಯ ವಿರುದ್ದ ಕ್ರಮ ಜರುಗಬೇಕು ಎಂದರು.
ಕಂಪನಿ ಪ್ರತಿನಿಧಿ ರಜೆ ಘೋಷಣೆ ಬಗ್ಗೆ ಕಾರ್ಮಿಕ ಇಲಾಖೆಯಿಂದ ನಮಗೆ ಯಾವುದೆ ಸೂಚನೆ ಬಂದಿಲ್ಲ.ಕಾರ್ಮಿಕ ಇಲಾಖೆ ಸೂಚನೆ ಕೊಟ್ಟರೆ ತಾವು ಪಾಲಿಸುವುದಾಗಿ ಹೇಳಿದ್ದು.ಸಂಘಟನೆಗಳ ಮುಖಂಡರನ್ನು ಕೆರಳಿಸಿತು.ಕಡೇಗೆ ಇದೇ ಉತ್ತರವನ್ನು ಲಿಖಿತವಾಗಿ ಬರೆದುಕೊಡುವಂತೆ ಮುಖಂಡರು ಒತ್ತಾಯಿಸಿದರು.
ಅಂತಿಮವಾಗಿ ಕಂಪನಿ ಪ್ರತಿನಿಧಿಗೆ ಆಗ್ರಹ ಪತ್ರ ನೀಡಿ ರಜೆ ನೀಡದಿರುವ ಕುರಿತು ಅಗತ್ಯ ವಿವರಣೆ ನೀಡುವಂತೆ ಕೇಳಲಾಯಿತು. ಆರಂಭದಲ್ಲಿ ಸೋಷಿಯಲ್ ಮೀಡಿಯಾ ಲೈವ್ ಮಾಡುವುದಕ್ಕೆ ವಿರೋಧ ತೋರಿದ ಕಂಪನಿ ಪ್ರತಿನಿಧಿಗಳು ಮುಖಂಡರ ಆಗ್ರಹಕ್ಕೆ ತಣ್ಣಗಾದರು.ಈ ಸಂಧರ್ಭದಲ್ಲಿ ದಸಂಸದ ವೆಂಕಟೇಶ್. ಕುಮಾರ್.ಕನ್ನಡ ಪರ ಸಂಘಗಳ ಎಸ್ ಕೆ ಶಿವರಾಂ ಸೌದನಹಳ್ಳಿ.ಮಲ್ಲೇಶ್ ಕಬ್ಬನಹಳ್ಳಿ.ಆಟೋ ಗುರು.ಸಮ ಸಮಾಜದ ನರಸಿಂಹಮೂರ್ತಿ ಶಂಕರ್.ಮೊದಲಾದವರಿದ್ದರು.