Thursday, February 19, 2026
spot_img

ಪೌರಚಾಲಕರ ಮೇಲೆ ಹಲ್ಲೇ:ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಕ್ಕೆ ಆಗ್ರಹ

ಪೌರಚಾಲಕರ ಮೇಲೆ ಹಲ್ಲೆ:ಜಾತಿ ದೌರ್ಜನ್ಯ ಕಾಯ್ದೆ ಅನ್ವಯಕ್ಕೆ ಆಗ್ರಹ

ಮೆಹಬೂಬ್ ನಗರದಲ್ಲಿ ಕಸ ಸಂಗ್ರಹಿಸುವ ದಾವಣಗೆರೆ ನಗರಪಾಲಿಕೆಯ ಆಟೋ ಚಾಲಕರ ಮೇಲೆ ಹಲ್ಲೇ ನಡೆಸಿದ ಆರೋಪಿಗಳ ವಿರುದ್ದ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೋಲಿಸ್ ವರಿಷ್ಡಾಧಿಕಾರಿ ಶೇಖರ್ ರವರಿಗೆ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ಮನವಿ ಸಲ್ಲಿಸಿದೆ.

ಈ ಸಂಬಂದ ಸಂಘದ ರಾಜ್ಯಧ್ಯಕ್ಷ ಎಂ.ಬಿ.ನಾಗಣ್ಣಗೌಡರ ನೇತೃತ್ವದಲ್ಲಿ ವರಿಷ್ಟಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ ಉಡುಪಿ ಚನ್ನಪಟ್ಟಣ ಸೇರಿದಂತೆ ರಾಜ್ಯದ ಹಲವೆಡೆ ಪೌರಚಾಲಕರ ಮೇಲೆ ಹಲ್ಲೇಗಳಾಗುತ್ತಿವೆ.ಯಾವುದೆ ಸೇವಾ ಭದ್ರತೆ ಇಲ್ಲದೆ ದುಡಿವ ಕಾರ್ಮಿಕರಿಗೆ ಯಾವುದೆ ರಕ್ಷಣೆ ಇಲ್ಲವಾಗಿದೆ.ಮೆಹಬೂಬ್ ನಗರದಲ್ಲಿ ಈಗಾಗಲೇ ಎರಡು ಬಾರಿ ಹಲ್ಲೇಗಳಾಗಿದ್ದು ಸ್ಥಳೀಯರ ರಾಜೀ ಪಂಚಾಯತಿಯೊಂದಿಗೆ ಕೊನೆಗೊಂಡಿವೆ.

ಈಗ ಹಲ್ಲೇಗೊಳಗಾದ ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು ನಿಯಮಾನುಸಾರ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ರಕ್ಷಣೆ ನೀಡಬೇಕಿದೆ.ಹಲ್ಲೇ ನಡೆಸಿದ ಆರೋಪಿಗಳಿಗೆ ಸ್ಟೇಶನ್ ಜಾಮೀನು ನೀಡಲಾಗಿದೆ.ಇದರಿಂದ ಸಂತ್ರಸ್ತರ ಮಾನಸಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡಲಾಗಿದೆ.ಜಾಮೀನು ದೊರೆಯಬಹುದಾದ ಕಲಂಗಳನ್ನು ಅನ್ವಯಿಸಿ ಸಂತ್ರಸ್ತ ಪೌರಚಾಲಕರಿಗೆ ಅನ್ಯಾಯ ಎಸಗಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಹಸಿ ಕಸ ಒಣ ಕಸ ಬೇರ್ಪಡಿಸಿ ನೀಡುವುದು ನಾಗರೀಕರ ಜವಾಬ್ದಾರಿಯಾಗಿದೆ‌.ಇದನ್ನು ಜಾರಿಗೊಳಿಸುವಲ್ಲಿ ಬಡ ಕಾರ್ಮಿಕರು ಹಲ್ಲೇಗಿಡಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.

ಈ ಕುರಿತು ಪೋಲಿಸ್ ಇಲಾಖೆ ನಗರಪಾಲಿಕೆ ನಾಗರೀಕರಲ್ಲಿ ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.

ಮನವಿ ಸ್ವೀಕರಿಸಿದ ಪೋಲಿಸ್ ವರಿಷ್ಡಾಧಿಕಾರಿ ಶೇಖರ್ ಈಗಾಗಲೇ ಆರೋಪಿಗಳ ವಿರುದ್ದ ಅಗತ್ಯ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವ ಸಂಬಂದ ಪರೀಶೀಲಿಸಲಾಗುವುದು ಎಂದು ನಿಯೋಗ ಕ್ಕೆ ಭರವಸೆ ನೀಡಿದರು.

ನಿಯೋಗದಲ್ಲಿ ಸಂಘದ ಗೌರವಾಧ್ಯಕ್ಷ ವಿರೇಶ್.ಜಿಲ್ಲಾಧ್ಯಕ್ಷ ದುಗ್ಗೇಶ್.ನವೀನ್. ಚಂದ್ರು.ಸುನೀಲ್.ಪ್ರಭಾಕರ್. ಎಂ.ಎನ್ ಚಂದ್ರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!