ಕೊಲೆ ಬೆದರಿಕೆ .ನವವಿವಾಹಿತ ಆತ್ಮಹತ್ಯೆ:ಐವರ ಮೇಲೆ ದೂರು
ಪ್ರೇಮವಿವಾಹವಾಗಿದ್ದ ಯುವಕನೋರ್ವನಿಗೆ ಯುವತಿಯ ಸಂಬಂದಿಕರು ಕೊಲೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂದ ಬನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಸೀಹಳ್ಳಿ ಗ್ರಾಮದ ನಾಗೇಂದ್ರ ಎಂಬ ಯುವಕನೋರ್ವ ಯುವತಿಯೊಬ್ಬಳನ್ನು ಪ್ರೇಮಿಸಿ ವಿವಾಹವಾಗಿದ್ದ ಎನ್ನಲಾಗಿದೆ.
ಯುವಕ ಹಾಗೂ ಯುವತಿ ಒಂದೇ ಕೋಮಿನವರಾಗಿದ್ದು
ಈರ್ವರ ಪ್ರೇಮವಿವಾಹದಿಂದ ಕೆರಳಿದ್ದ ಗ್ರಾಪಂ ಅಧ್ಯಕ್ಷ ಜೈಕುಮಾರ ಹಾಗೂ ಆತನ ಭಂಟ ಮಂಜು ಸೇರಿದಂತೆ ಐವರು ಡಿ ೨೭ ರಂದು ಯುವಕನಿಗೆ ಮನಸೋಇಚ್ಚೆ ಥಳಿಸಿದ್ದು.ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದು.ಇದರಿಂದ ಬೆದರಿದ ಯುವಕ ಡಿ ೨೮ ರಂದು ತನ್ನ ಮನೆಯಲ್ಲೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ತನ್ನ ಮಗನ ಸಾವಿಗೆ ಮೇಲ್ಕಂಡ ಆರೋಪಿಗಳು ಸೇರಿದಂತೆ ಐವರ ಮೇಲೆ ಮೃತ ಯುವಕನ ತಾಯಿ ಮಂಜುಳಾ ದೂರು ದಾಖಲಿಸಿದ್ದಾರೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಆರಂಭಿಸಿದ್ದಾರೆ.


