#ಉಗ್ರಾಣದ_ಮೇಲೆ_ದಾಳಿ_147_ಟನ್_ರಸಗೊಬ್ಬರ_ವಶ
ಮದ್ದೂರು: ತಾಲ್ಲೂಕಿನ ಸೋಮನಹಳ್ಳಿ ಸಮೀಪದ ಸೋಮೇಶ್ವರ  ಫರ್ಟಿಲೈಸರ್ಸ್ ಪ್ರೈವೇಟ್ ಲಿಮಿಟೆಡ್, ಸೋಮೇಶ್ವರ ಟ್ರೇಡಿಂಗ್ ಕಾಪೋರೇಷನ್ ಸಂಸ್ಥೆಯ ರಸಗೊಬ್ಬರ ಮಿಶ್ರಣ ತಯಾರಿಕ ಘಟಕದ ಮೇಲೆ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಗೋದಾಮಿನಲ್ಲಿದ್ದ 147 ಟನ್ ರಸಗೊಬ್ಬರವನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಐಪಿಎಲ್ ಸಂಸ್ಥೆಯ ರಸಗೊಬ್ಬರದ ಲೇಬಲ್ ಇರುವ 64,750 ಹೊಸ ಖಾಲಿ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ರಸಗೊಬ್ಬರ (ನಿರವಯವ, ಸಾವಯವ, ಹಾಗೂ ಮಿಶ್ರಿತ) ನಿಯಂತ್ರಣ ಆದೇಶ 1985 ಹಾಗೂ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಸಾಮಗ್ರಿಗಳನ್ನು ಜಪ್ತಿ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕುರುಬೂರು ಖಂಡನೆ:ಕೃಷಿ ಸಚಿವರ ತವರೂರಲ್ಲಿ ಸ್ವತಃ ಬಿಜೆಪಿ ಮುಖಂಡ ಎಸ್ ಪಿ ಸ್ವಾಮಿ ನಕಲಿ ರಸಗೊಬ್ಬರ ತಯಾರಿಸಿ ಸಿಕ್ಕಿ ಬಿದ್ದಿರುವುದು ನಾಚಿಕೆಗೇಡು ಎಂದು ರೈತ ಸಂಘದ ಕುರುಬೂರು ಶಾಂತಕುಮಾರ್ ಖಂಡನೆ ವ್ಯಕ್ತಪಡಿಸಿದ್ದಾರೆ.


 
                                    