.
ಮಂಡ್ಯ ನಗರದಲ್ಲಿ ಹಾದು ಹೋಗುವ ಬೆಂಗಳೂರು ಮೈಸೂರು ಹೆದ್ದಾರಿಯುದ್ದಕ್ಕು ಒತ್ತುವರಿಯಾಗಿರುವ ಪಾದಚಾರಿ ಮಾರ್ಗವನ್ನು ತೆರವುಗೊಳಿಸಿ ನಂತರ ಕಾಮಗಾರಿ ನಡೆಸುವಂತೆ ಕನ್ನಡಪರ ಸಂಘಟನೆಗಳ ನಿಯೋಗ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಅಪರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ನಿಯೋಗ.ಮಂಡ್ಯ ನಗರದಲ್ಲಿ ಹಾದುಹೋಗಿರುವ ಬೆಂಗಳೂರು ಮೈಸೂರು ಹೆದ್ದಾರಿಯ ನಿರ್ಮಾಣ ಹಾಗೂ ಪಾದಚಾರಿ ಮಾರ್ಗದ ನವೀಕರಣ ಮಾಡಲಾಗುತ್ತಿದೆ.ಈ ಸಂಧರ್ಭದಲ್ಲಿ ನಿಯಮಾನುಸಾರ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸದೆ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ.ಅದರಲ್ಲು ಮಂಡ್ಯ ನಗರದ ಪ್ರಮುಖ ಭಾಗವಾದ ನಂದಾ ವೃತ್ತದಿಂದ ಮಹವೀರ ವೃತ್ತದವರೆಗೆ ಪಾದಚಾರಿ ಮಾರ್ಗ ಇಕ್ಕಾಟ್ಟಾಗಿದ್ದು ಜನಸಂದಣಿಯಿಂದ ಕೂಡಿರುತ್ತದೆ.ಇಲ್ಲಿನ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮವಹಿಸುವಂತೆ ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಅಗತ್ಯ ಒತ್ತಡ ಹೇರಿದ ನಂತರ ಪಾದಚಾರಿ ಮಾರ್ಗದ ಒತ್ತುವರಿ ಸ್ಥಳ ಗುರುತಿಸಿ ಬಲಾಢ್ಯರ ಲಾಭಿಗೆ ಮಣಿದು ತಟಸ್ಥರಾಗಿದ್ದಾರೆ.ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ಮಹಿಳಾ ಕಾಲೇಜು ಕಲ್ಲುಕಟ್ಟಡದ ಸಾವಿರಾರು ವಿದ್ಯಾರ್ಥಿನಿಯರು ಇಕ್ಕಟ್ಟಾದ ಪಾದಚಾರಿ ಮಾರ್ಗವನ್ನೆ ಬಳಸುವಂತಾಗಿದೆ.ಈ ಭಾಗದಲ್ಲಿ ಸಾಕಷ್ಟು ಬ್ಯಾಂಕ್ ಹೋಟೆಲ್ ಮದ್ಯದಂಗಡಿಗಳು ಇದ್ದು ಮೆಡಿಕಲ್ ಕಾಲೇಜು ರೈಲು ನಿಲ್ದಾಣ ಇದ್ದು ಸಾರ್ವಜನಿಕರ ಓಡಾಟ ಹೆಚ್ಚಾಗಿರುತ್ತದೆ.ಒತ್ತುವರಿ ಮಾಡಿಕೊಂಡಿರುವವರ ಮೇಲೆ ಯಾವುದೆ ದಾಕ್ಷಿಣ್ಯವಿಲ್ಲದೆ ಕ್ರಮ ಜರುಗಿಸಿ ವಿಶಾಲ ಪಾದಚಾರಿ ಮಾರ್ಗ ರೂಪಿಸಬೇಕೆಂದು ಮನವಿ ನೀಡಿದರು.
ಮುಂದುವರಿದು ಮನವಿಯಲ್ಲಿ
ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿ ಅನಗತ್ಯ ಅವೈಜ್ಞಾನಿಕ ಉಬ್ಬುಗಳನ್ನು ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆ ಒಡ್ಡಲಾಗಿದೆ.ಗಣಂಗೂರು ಬಳಿ ಪ್ರಾಣಿಗಳ ರಸ್ತೆ ದಾಟುವಿಕೆಗಾಗಿ ನಿರ್ಮಿಸಿರುವ ಸೇತುವೆ ಅಪೂರ್ಣವಾಗಿದೆ.ಇದರ ಪರಿಣಾಮ ಜಿಂಕೆ ಸೇರಿದಂತೆ ಹಲವು ವನ್ಯಜೀವಿಗಳು ರಸ್ತೆ ಅಪಘಾತಕ್ಕೆ ಬಲಿಯಾಗಿವೆ.ಹೆದ್ದಾರಿಯುದ್ದಕ್ಕು ಅಗತ್ಯ ಶೌಚಾಲಯ.ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ.ಅನಗತ್ಯ ರಸ್ತೆ ಉಬ್ಬುಗಳಿಂದ ಪ್ರಯಾಣ ಸುಧೀರ್ಘವಾಗಿದೆ.ಹಲವೆಡೆ ತಡೆಗೋಡೆಗಳನ್ನು ನಿರ್ಮಿಸಿಲ್ಲ.ಈ ಎಲ್ಲ ಕೊರತೆಗಳನ್ನು ಬಗೆಹರಿಸದೆ ಟೋಲ್ ಸಂಗ್ರಹಿಸುವುದು ಕಾನೂನುಬದ್ದ ಲೂಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಹೆದ್ದಾರಿಯ ಸಮಸ್ಯೆಗಳ ಇತ್ಯರ್ಥಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಒಂದು ಸಭೆ ಎರ್ಪಡಿಸುವಂತೆ ನಿಯೋಗ ಒತ್ತಾಯಿಸಿತು.ಮನವಿಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಶಿವನಂದಾಮೂರ್ತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.ನಗರಸಭೆ.ಉಪವಿಭಾಗಾಧಿಕಾರಿ.ತಹಶೀಲ್ದಾರರ ಜಂಟೀ ಸಭೆ ಆಯೋಜಿಸಲು ಒಪ್ಪಿಗೆ ಸೂಚಿಸಿದರು.ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ಡಿ ಜಯರಾಮು.ಅಟೋ ವೆಂಕಟೇಶ್. ಸೋಮಶೇಖರ.ಮುದ್ದೇಗೌಡ.ಸ್ವಂತಮನೆ ನಮ್ಮ ಹಕ್ಕು ಸಂಘಟನೆಯ ಸತೀಶ್ ಬಿ.ಕೆ.ರೈತಸಂಘದ ತಾಲೂಕು ಅಧ್ಯಕ್ಷ ಬೂದನೂರು ಪುಟ್ಟಸ್ವಾಮಿ.ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಸೇರಿದಂತೆ ಹಲವರು ನಿಯೋಗದಲ್ಲಿದ್ದರು.


