ಮಂಡ್ಯ ಉಕ್ಕಿ ಹರಿಯುತ್ತಿರುವ ಮ್ಯಾನ್ ಹೋಲ್ ಗಳು.ನಿದ್ದೆಗೆ ಜಾರಿತೆ ನಗರಸಭೆ?
ಮಂಡ್ಯ ನಗರದಲ್ಲಿ ಮ್ಯಾನ್ ಹೋಲ್ ಗಳು ಉಕ್ಕಿ ರಸ್ತೆಯಲ್ಲೆ ಹರಿಯುತ್ತಿದ್ದು.ನಗರಸಭೆ ಇದಕ್ಕು ತನಗೂ ಯಾವುದೆ ಸಂಬಂದವಿಲ್ಲದಂತೆ ಕೂತಿದೆ.ನಾಗರೀಕರು ಸಹ ಮೂಗು ಬಾಯಿ ಮುಚ್ಚಿಕೊಂಡು ತಮ್ಮ ಪಾಡಿಗಿದ್ದಾರೆ.

ಮಂಡ್ಯ ನಗರದ ಕಲಾ ಮಂದಿರದ ಬಳಿ ನಗರಸಭೆ ಸನಿಹದಲ್ಲೇ ಮ್ಯಾನ್ ಹೋಲು ರಸ್ತೆಯಲ್ಲೆ ಹರಿಯುತ್ತಿದೆ.ಸಾರ್ವಜನಿಕರು ಮಲಮಿಶ್ರಿತ ಗಲೀಜಿನಲ್ಲೆ ನಡೆದಾಡುತ್ತಿದ್ದಾರೆ.
ಅಶೋಕ ನಗರದ ಮೂರನೇ ಮುಖ್ಯರಸ್ತೆ (ಥರ್ಡ್ ಮೇನ್ ರೋಡ್) ಯ ಕಾವೇರಿ ನರ್ಸಿಂಗ್ ಹೋಂ ಎದುರು ಮ್ಯಾನ್ ಹೋಲು ಬಾಯಿ ತೆರೆದು ರಸ್ತೆಯತ್ತ ಮಲಮಿಶ್ರಿತ ನೀರು ಸಾಗಿದೆ.

ವಿವೇಕಾನಂದ ರಸ್ತೆಯ ಆಂದೋಲನಾ ಬಸ್ ನಿಲ್ದಾಣದ ಬಳಿ ಕಳೆದ ಮೂರು ದಿನಗಳಿಂದ ಮ್ಯಾನ್ ಹೋಲ್ ಕಕ್ಕಸ್ಸು ಮಿಶ್ರಿತ ನೀರು ರಸ್ತೆಯಲ್ಲೆ ಹರಿದಿದೆ.ಬನ್ನೂರು ಭಾಗದ ಪ್ರಯಾಣಿಕರು ಮಲಮಿಶ್ರಿತ ನೀರಿನ ಮೇಲೆಯ ಬಸ್ ಗಾಗಿ ಕಾಯುತ್ತಿದ್ದಾರೆ.
ಸನಿಹದಲ್ಲೆ ಡಯಾಗ್ನೋಸ್ಟಿಕ್ ಸೆಂಟರ್ ಇದ್ದು ಸಾವಿರಾರು ನಾಗರೀಕರು ಕಕ್ಕಸ್ಸು ನೀರಿನಲ್ಲೆ ನಿಲ್ಲುವಂತಾಗಿದೆ.ಅಸಹ್ಯ ವಾಸನೆ ತಾಳಲಾರದೆ ವೃದ್ದರು ಮಕ್ಕಳು ಗರ್ಭಿಣಿಯರು ಇತ್ತ ಕಾಲಿರಿಸದಂತಾಗಿದೆ.
ಕಾರಣ ಏನು?
ಯಾವುದೆ ಮಳೆ ಇಲ್ಲದಿದ್ದರೂ ಮ್ಯಾನ್ ಹೋಲ್ ಗಳು ಉಕ್ಕಿ ಹರಿಯಲು ಕಾರಣಗಳೇನು ಎಂಬ ಪ್ರಶ್ನೆ ಸಹಜವಾಗಿಯೆ ನಾಗರೀಕರನ್ನು ಕಾಡುತ್ತಿದೆ.

ವಿವೇಕಾನಂದಾ ರಸ್ತೆಗೆ ಅಂಟಿಕೊಂಡಿರುವ ಮಲ್ನಾಡ್ ಬಾರ್ ಅಂಡ್ ರೆಸ್ಟೋರೆಂಟಿನ ತ್ಯಾಜ್ಯವೆ ಈ ರೀತಿಯಲ್ಲಿ ಮ್ಯಾನ್ ಹೋಲು ಉಕ್ಕಲು ಕಾರಣವೆಂದು ಇಲ್ಲಿನ ಆಟೋ ಚಾಲಕರು ಅಭಿಪ್ರಾಯಪಡುತ್ತಾರೆ.
ಥರ್ಡ್ ಮೇನ್ ರೋಡಿನ ಅಶೋಕ ನಗರದಲ್ಲಿ ಬಹುಮಹಡಿಗಳ ಅಪಾರ್ಟ್ಮೆಂಟ್ ಗೆ ಅವಕಾಶ ನೀಡಿದ ಪರಿಣಾಮ ಸಾಮರ್ಥ್ಯಕ್ಕಿಂತ ಕೊಳಚೆ ನೀರು ಹರಿಯುತ್ತಿದೆ.ಇದರ ಪರಿಣಾಮ ಮಂಡ್ಯ ನಗರದಲ್ಲಿ ಮ್ಯಾನ್ ಹೋಲ್ ಗಳು ಉಕ್ಕಿ ಹರಿಯಲು ಕಾರಣವಾಗಿವೆ.
ನಿದ್ರೆಗೆ ಜಾರಿತೇ ನಗರಸಭೆ; ನಗರಸಭೆಯ ಅಧಿಕಾರಿಗಳು ಇದ್ಯಾವುದರ ಅರಿವಿಲ್ಲದಂತೆ ವರ್ತಿಸುತ್ತಿದ್ದು ನಾಗರೀಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಅಧಿಕಾರಿಗಳು ಇಡೀ ಮಂಡ್ಯ ನಗರದ ಪ್ರಮುಖ ರಸ್ತೆಗಳು ಕಕ್ಕಸುಮಯವಾದರೂ ತಮಗೂ ಇದಕ್ಕು ಸಂಬಂದವಿಲ್ಲದಂತೆ ನಿದ್ರೆಗೆ ಜಾರಿದಂತಿದೆ.