ಮಂಡ್ರ್ಯ:ಜೂ.೧೨. ಸಾರ್ವಜನಿಕ ಸ್ಥಳದಲ್ಲಿ ನಿಯಮಬಾಹಿರವಾಗಿ ಅಳವಡಿಸಿದ್ದ ಫ್ಲೆಕ್ಸ್ ತೆರವುಗೊಳಿಸಿದ ಹಾವೇರಿ ನಗರಸಭೆಯ ಪೌರಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೇ ನಡೆಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿ ಪೌರ ನೌಕರರ ರಕ್ಷಣೆಗಾಗಿ ಪೌರ ನೌಕರರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಮುಖೇನಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ.
ಈ ಪ್ರಕರಣದಲ್ಲಿ ಭಾಗೀಯಾದ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಅನ್ವಯಿಸಬೇಕು.ಇದಲ್ಲದೆ ರಾಜ್ಯದ ಉದ್ದಗಲಕ್ಕೂ ಪೌರ ನೌಕರರ ಮೇಲೆ ದಿನನಿತ್ಯ ಹಲ್ಲೇಗಳು ನಡೆಯುತ್ತಿದ್ದು ನೌಕರರಿಗೆ ಯಾವುದೆ ರಕ್ಷಣೆ ಇಲ್ಲವಾಗಿದೆ.
ಯಾವುದೆ ನಗರದ ಸ್ವಚ್ಚತೆ.ಬೀದಿ ದೀಪದ ಅವ್ಯವಸ್ಥೆ ನಿವೇಶನಗಳ ಅಳತೆ ಪ್ಲಾಸ್ಟಿಕ್ ವಶ.ಅಕ್ರಮ ಕಟ್ಟಡ.ಅಕ್ರಮ ಫ್ಲಕ್ಸ್ ತೆರವು ಎಲ್ಲ ಪ್ರಕ್ರಿಯೆಗಳಲ್ಲಿ ಪೌರ ನೌಕರರನ್ನು ಮುಂಚೂಣಿಯಲ್ಲಿ ತೊಡಗಿಸಲಾಗುತ್ತದೆ.ಪರಿಣಾಮ ಸಾರ್ವಜನಿಕರು ಯಾವುದೆ ಕಾನೂನಿನ ಭಯವಿಲ್ಲದೆ ಏಕಾಏಕೀ ಪೌರನೌಕರರ ಮೇಲೆ ಹಲ್ಲೇ ನಡೆಸುತ್ತಾರೆ.
ಈ ಸಂಧರ್ಭಗಳಲ್ಲಿ ಸ್ಥಳೀಯ ಒತ್ತಡ ಪ್ರಭಾವದ ಕಾರಣಕ್ಕೆ ಹಲ್ಲೇ ನಡೆಸಿದವರ ಮೇಲೆ ಯಾವುದೆ ಕ್ರಮವಾಗುವುದಿಲ್ಲ.
ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಸಹ ನೌಕರರನ್ನು ಅವಾಚ್ಯವಾಗಿ ನಿಂದಿಸುವುದು ಹಲ್ಲೇ ಮಾಡುವುದು.ಸಾರ್ವಜನಿಕವಾಗಿ ಅವಹೇಳನ ಮಾಡುವುದು ಸರ್ವೇಸಾಮಾನ್ಯವಾಗಿದೆ.ಇದರಿಂದಾಗಿ ಪೌರನೌಕರರು ಅಭದ್ರತೆಯಲ್ಲೆ ಕರ್ತವ್ಯ ನಿರ್ವಹಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೌರನೌಕರರ ಸುರಕ್ಷೆ ಖಾತ್ರಿಗೊಳಿಸಲು ಮುಂದಿನ ಅಧಿವೇಶನದಲ್ಲಿ ಪೌರನೌಕರರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿದರು.
ಈ ಕಾಯ್ದೆಯು ಹಲ್ಲೇ ನಿಂದನೆ ನಡೆಸುವ ವ್ಯಕ್ತಿಗಳ ವಿರುದ್ದ ಕ್ರಮಗಳನ್ನು ಖಾತ್ರಿಗೊಳಿಸಬೇಕು.ಫ್ಲೆಕ್ಸ್ ಅಳವಡಿಕೆ ಹಾಗೂ ತೆರವಿನ ಸಂಬಂದ ಅಗತ್ಯ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು.ಇಲ್ಲದಿದ್ದಲ್ಲಿ ಇದು ಅನಗತ್ಯ ಸಂಘರ್ಷಕ್ಕೆ ದಾರಿ ಮಾಡುತ್ತದೆ.
ಪೌರ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು.ಬಾಕೀ ಇರುವ ಪೌರಕಾರ್ಮಿಕರ ಹುದ್ದೆಗಳ ಭರ್ತಿ ಮಾಡಬೇಕು.ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತಂದು ಸೇವಾ ಭದ್ರತೆ ಒದಗಿಸಬೇಕು.ಹೊರಗುತ್ತಿಗೆ ಕಸದ ಚಾಲಕರು ಲೋಡರ್ಸ್ ಕ್ಲೀನರ್ಸ್ ಹಾಗೂ ನೀರುಗಂಟಿಗಳಿಗೂ ಪೌರಕಾರ್ಮಿಕರ ಮಾದರಿಯಲ್ಲಿ ಐದು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಒದಗಿಸುವಂತೆ ಕೋರಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಆರೋಗ್ಯ ವಿಮೆ ಜಾರಿಗೆ ಸ್ಥಳದಲ್ಲಿದ್ದ ನಗರಸಭೆ ಆಯುಕ್ತೆ ಪಂಪಾಶ್ರೀಗೆ ಸೂಚನೆ ನೀಡಿ ಹೊರಗುತ್ತಿಗೆ ನೌಕರರಿಗೂ ಆರೋಗ್ಯ ವಿಮೆ ಜಾರಿಗೆ ಸೂಚನೆ ನೀಡಿದರು.
ಇದಕ್ಕು ಮುನ್ನಾ ನಗರಸಭೆ ಎದುರು ಜಮಾಯಿಸಿದ್ದ ಪೌರಕಾರ್ಮಿಕರು.ಹೊರಗುತ್ತಿಗೆ ನೌಕರರು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಗೆ ಮನವಿ ನೀಡಿದರು.ಈ ಸಂಬಂದ ಪೌರಾಡಳಿತ ಸಚಿವರಿಗೆ ಪತ್ರ ಬರೆದು ಪೌರಕಾರ್ಮಿಕರ ರಕ್ಷಣೆಗೆ ಅಗತ್ಯಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಪರಿಸರ ಅಭಿಯಂತರ ರುದ್ರೇಗೌಡ.ನೇರಪಾವತಿ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್ ನಾಗರಾಜು ಖಾಯಂ ಪೌರಕಾರ್ಮಿಕರ ಸಂಘದ ಮುತ್ತಾಲಯ್ಯ.ನಂಜುಂಡ.ಮಹದೇವ.ಲಿಂಗಮಯ್ಯ
ರಾಜೇಶ್.ಶಿವು.ಲೋಕನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.