ಪರಿಸರ ಮಂಡಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳದ್ದೆ ಕಲರವ!
ಮಂಡ್ಯ: ಆ.೨೮.ಪರಿಸರ ಮಾಲಿನ್ಯ ಮಂಡಳಿ ಸ್ಥಾಪನೆಯಾಗಿ ೫೦ ವರ್ಷ ತುಂಬಿದ ಸಂಧರ್ಭದಲ್ಲಿ ಮಂಡ್ಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸಭಿಕರಾಗಿ ಬಹುತೇಕ ವಿದ್ಯಾರ್ಥಿಗಳನ್ನು ಕರೆತರಲಾಗಿದೆ.

ಮಂಡ್ಯ ವಿವಿ ಆವರಣದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಹುತೇಕ ವಿವಿಧ ಶಾಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಸಭಿಕರಾಗಿ ತುಂಬಿಸಲಾಗಿದೆ.ಅಂಗನವಾಡಿ ಸಹಾಯಕಿಯರ ಮೂಲಕ ಒಂದಿಷ್ಟು ಗ್ರಾಮೀಣ ಮಹಿಳೆಯರನ್ನು ಕಾರ್ಯಕ್ರಮಕ್ಕೆ ತರಲಾಗಿದೆ.ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ತಮಗೂ ಕಾರ್ಯಕ್ರಮಕ್ಕು ಸಂಬಂದವೆ ಇಲ್ಲದಂತೆ ಹರಟೆ ಇತರೆ ಚಟುವಟಿಕೆಯಲ್ಲಿ ಮುಳುಗಿದ್ದರು.ಒಂದು ಹಂತಕ್ಕೆ ಸಚಿವ ಚಲುವರಾಯಸ್ವಾಮಿ ಮಕ್ಕಳ ಗದ್ದಲಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ನಿರೀಕ್ಷೆಯಷ್ಟು ಜನ ಸೇರದ ಕಾರಣ ತಂದಿದ್ದ ಕುರ್ಚಿಗಳು ಕೆಳಗಿಳಿಯದೆ ಲಾರೀಯಲ್ಲೆ ನಿದ್ದೆ ಮಾಡಿದವು.ರಾಜ್ಯಾದ್ಯಂತ ಕೋಟಿಗಟ್ಟಲೆ ಖರ್ಚು ಮಾಡಿ ಆಯೋಜಿಸುತ್ತಿರುವ ಕಾರ್ಯಕ್ರಮಗಳು ಜನರಿಗೂ ಮುಟ್ಟದೆ ತೆರಿಗೆಯ ಪೋಲಾಗುತ್ತಿದ್ದು.ಇನ್ನಾದರೂ ಅಧಿಕಾರಿಗಳು ಪರಿಸರ ಜಾಗೃತಿ ಮೂಡಿಸುವ ರಚನಾತ್ಮಕವಾಗಿ ಕಾರ್ಯಕ್ರಮ ರೂಪಿಸದಿದ್ದರೆ ಇದು ಸರಕಾರಿ ಲೆಕ್ಕದ ಕಾರ್ಯಕ್ರಮವಾಗಿ ವೃಥಾ ಜನರ ತೆರಿಗೆ ಹಣ ಪೋಲಾಗಲಿದೆ.



