*ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯಗೊಳ್ಳಲಿದ್ದು, ವಾರ್ಡ್ ವಾರು ಕ್ಷೇತ್ರ ವಿಂಗಡನೆ ಕಾರ್ಯ ಪೂರ್ಣಗೊಳಿಸಿ: ಡಾ.ಕುಮಾರ*
ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವುದರಿಂದ ನಗರ ಸ್ಥಳೀಯ ಸಂಸ್ಥೆಗಳನ್ನು 2011 ರ ಜನಗಣತಿ ಅನ್ವಯ ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡನೆ ಮಾಡುವ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2011 ರ ಜನಗಣತಿ ಪ್ರಕಾರ ಹಾಗೂ ಈ ಹಿಂದೆ ನಿಗದಿಪಡಿಸಿರುವ ಗಡಿರೇಖೆಗೆ ಅನುಗುಣವಾಗಿ ಅಧಿಸೂಚನೆಯನ್ನು ತಾಳೆ ಮಾಡಿಕೊಂಡು ಗಡಿ ರೇಖೆ ಗುರುತಿಸಲು ಸಂಭಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯ ನಗರಸಭೆಯ ನಗರ ಸ್ಥಳೀಯ ಸಂಸ್ಥೆಗಳ ಅವಧಿ ನವೆಂಬರ್ 2 ಕ್ಕೆ ಮುಕ್ತಾಯಗೊಳ್ಳುತ್ತದೆ, ಅಕ್ಟೋಬರ್ 23 ಕ್ಕೆ ಪುರಸಭೆಗಳಾದ ಮದ್ದೂರು, ಮಳವಳ್ಳಿ, ಪಾಂಡವಪುರದ ಅವಧಿ ಮುಕ್ತಾಯಗೊಳ್ಳುತ್ತದೆ, ಅಕ್ಟೋಬರ್ 31 ಕ್ಕೆ ಕೆ.ಆರ್.ಪೇಟೆ, ನವೆಂಬರ್ 6 ಕ್ಕೆ ಶ್ರೀರಂಗಪಟ್ಟಣ, ನವೆಂಬರ್ 5 ಕ್ಕೆ ನಾಗಮಂಗಲ ಹಾಗೂ ನವೆಂಬರ್ 4 ಕ್ಕೆ ಪಟ್ಟಣ ಪಂಚಾಯಿತಿಯಾದ ಬೆಳ್ಳೂರಿನ ನಗರ ಸ್ಥಳೀಯ ಸಂಸ್ಥೆಗಳ ಅವಧಿಯು ಮುಕ್ತಾಯಗೊಳ್ಳಲಿದೆ ಎಂದು ಸಭೆ ಮಾಹಿತಿ ನೀಡಿದರು.
ವಾರ್ಡ್ ವಾರು ಮೀಸಲಾತಿ ನಿಗದಿ ಪಡಿಸುವ ಪೂರ್ವ ಅಧಿಕಾರಿಗಳು ಗಡಿರೇಖೆಯ ಗುರುತಿಸಿ ನಿಗದಿಪಡಿಸಬೇಕು, ಸಾರ್ವಜನಿಕರಿಂದ ಏನಾದರೂ ಆಕ್ಷೇಪಗಳಿದ್ದರೆ ಆಲಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದರು.
ವಾರ್ಡ್ ವಾರು ಗಡಿ ರೇಖೆಯನ್ನು ಸೂಚಿಸಿರುವ ಕರಡು ಅಧಿಸೂಚನೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪ್ರಕಟ ಮಾಡಲಾಗಿದ್ದು ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ಸಂಭಂದ ಪಟ್ಟ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ ಎಂದು ಹೇಳಿದರು.
ಮದ್ದೂರು ಪುರಸಭೆ ಈಗಾಗಲೇ ನಗರಸಭೆಯಾಗಿ ಉನ್ನತೀಕರಣಗೊಂಡಿದ್ದು 9 ಗ್ರಾಮಗಳು 4 ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಗೊಂಡಿರುತ್ತದೆ ಆದ್ದರಿಂದ ಸಂಭಂದ ಪಟ್ಟ ಗ್ರಾಮಗಳನ್ನು ನಗರಸಭಾ ಪರಿಧಿಯ ಒಳಗಡೆ ತೆಗೆದುಕೊಳ್ಳಲು ಗಡಿ ರೇಖೆಯನ್ನು ಗುರುತಿಸು ಸೂಚಿಸಿದರು.
ಸಭೆಯಲ್ಲಿ ನಕರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಪಂಪ ಶ್ರೀ, ಕಾರ್ಯನಿರ್ವಾಹಕ ಎಂಜಿನಿಯರ್ ಪ್ರತಾಪ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್, ನೋಡಲ್ ಅಧಿಕಾರಿ ಸೌಮ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.