Tuesday, July 1, 2025
spot_img

ಮಂಡ್ಯ: ಇಂದಿರಾ ಕ್ಯಾಂಟೀನ್ ನಲ್ಲಿ ಬಯೋಮೆಟ್ರಿಕ್ ಅಳವಡಿಕೆಗೆ ಆಗ್ರಹ

:ಜಿಲ್ಲೆಯ ಇಂದಿರಾ ಕ್ಯಾಂಟೀನುಗಳಲ್ಲಿ ಬಯೋ ಮೆಟ್ರಿಕ್ ಅಳವಡಿಸುವಂತೆ ಮನವಿ

ಮಂಡ್ಯ ಮೇ:೬. ಇಂದಿರಾ ಕ್ಯಾಂಟೀನುಗಳಲ್ಲಿ ಬಯೋ ಮೆಟ್ರಿಕ್ ಅಳವಡಿಸಿ ಕ್ಯಾಂಟೀನುಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ತರುವಂತೆ ಇಂದು ನಗರಾಭಿವೃದ್ಧಿ ಕೋಶಕ್ಕೆ  ಕರುನಾಡ ಸೇವಕರು ಸಂಘಟನೆ ಮನವಿ ಮಾಡಿದೆ

ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ನೇತೃತ್ವದಲ್ಲಿ ಮನವಿ ಸಲ್ಲಿಸಿ

oplus_131074

ಸರ್ಕಾರವು ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸಲು ಇಂದಿರಾ ಕ್ಯಾಂಟೀನುಗಳನ್ನು ತೆರೆದಿರುವುದು ಸರಿಯಷ್ಟೇ.

ಸದರಿ ಕ್ಯಾಂಟೀನುಗಳು ಅಸಮರ್ಪಕ ನಿರ್ವಹಣೆ ಜೊತೆಗೆ ಸರಕಾರಕ್ಕೆ ತಪ್ಪು ಹಾಗೂ ಸುಳ್ಳು ಲೆಕ್ಕ ಮಂಡಿಸಿ ಹಣಕಾಸು ಅಕ್ರಮ ಎಸಗುತ್ತಿರುವುದು ಕಂಡು ಬಂದಿರುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ದಿನವೊಂದಕ್ಕೆ ಇಂತಿಷ್ಟು ಗ್ರಾಹಕರಿಗೆ ಆಹಾರ ಒದಗಿಸುವ ಗುರಿಯೊಂದಿಗೆ ಪ್ರತಿ ಗ್ರಾಹಕರಿಗೂ ರಿಯಾಯಿತಿ ದರದಲ್ಲಿ ಆಹಾರ ಒದಗಿಸಲಾಗುತ್ತದೆ. ಇದಕ್ಕಾಗಿ ಸರ್ಕಾರ ಸಬ್ಸಿಡಿ ಸಹ ನೀಡುತ್ತದೆ.

ಆದರೆ ಪ್ರತೀ ಕ್ಯಾಂಟೀನುಗಳಲ್ಲಿ ಆಹಾರ ಸೇವಿಸಿದ ಗ್ರಾಹಕರ ಸಂಖ್ಯೆ ಕುರಿತು ಮಾಹಿತಿ ಸಂಗ್ರಹಿಸಲು ಯಾವುದೆ ನಿರ್ದಿಷ್ಟ ವೈಜ್ಞಾನಿಕ ಮಾನದಂಡಗಳು ಇರುವುದಿಲ್ಲ.

ನಿಯಮಾನುಸಾರ ನಿಯಮಿತವಾಗಿ ನಗರಸಭೆಯ ಆರೋಗ್ಯ ಪರೀವೀಕ್ಷಕರು ಪರಿಸರ ಅಭಿಯಂತರರು ಆಯುಕ್ತರು ಭೇಟಿ ನೀಡಿ ಅಲ್ಲಿನ ಆಗುಹೋಗುಗಳ ತಪಾಸಣೆ ಮಾಡಬೇಕಿದೆ.ಆದರೆ ಈ ಕ್ರಮಗಳು ಔಪಚಾರಿಕವಾಗಿದ್ದು ಹಣಕಾಸು ಅಕ್ರಮಕ್ಕೆ ನಾಂದಿಯಾಡಿವೆ.

ಇದರಿಂದಾಗಿ ಇಂದಿರಾ ಕ್ಯಾಂಟೀನುಗಳಲ್ಲಿ ಆಹಾರ ಸೇವಿಸಿದ ಗ್ರಾಹಕರಿಗೂ ಏಜೆನ್ಸಿಗೆ ಸಂದಾಯವಾಗುತ್ತಿರುವ ಮೊತ್ತಕ್ಕು ಅಜಗಜಾಂತರವಿರುತ್ತದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಇಂದಿರಾ ಕ್ಯಾಂಟೀನುಗಳಲ್ಲಿ ಕಿಯಾಸ್ಕ್ ಮಾದರಿ ಅಳವಡಿಸುವಂತೆ ಇಲ್ಲವೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಅಳವಡಿಸಿ ಇಂದಿರಾ ಕ್ಯಾಂಟೀನುಗಳಲ್ಲಿ ಪಾರದರ್ಶಕತೆ ಹಾಗೂ ಸರ್ಕಾರದ ಬೊಕ್ಕಸ ಲೂಟಿಯಾಗದಂತೆ ಅಗತ್ಯ ಕ್ರಮವಹಿಸುವಂತೆ ಸಂಘಟನೆ ಮನವಿ ಮಾಡಿದೆ

ಈ ಕುರಿತು  ಯೋಜನೆಯ ನಿರ್ವಹಣೆ ಹೊಣೆ ಹೊತ್ತಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರತಾಪ್ ರವರಿಗೆ ಮನವಿ ಸಲ್ಲಿಸಲಾಯಿತು
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಎಂ ಎನ್ ಚಂದ್ರು.ಚಿಕ್ಕಮಂಡ್ಯ ಕೃಷ್ಣಪ್ಪ.ಪದ್ಮಮ್ಮ ಪುಟ್ಟಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.

ಮೈಸೂರು ವಿಭಾಗೀಯ ಅಧ್ಯಕ್ಷರು.
ಕರುನಾಡ ಸೇವಕರು ಸಂಘಟನೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!