Tuesday, July 8, 2025
spot_img

ಮಂಡ್ಯ ಜಿಲ್ಲೆಯಲ್ಲಿ ಬೆಟ್ಟಿಂಗ್ ದಂದೆಗೆ ಕಡಿವಾಣ ಗೃಹಮಂತ್ರಿ ಎಚ್ಚರಿಕೆ


ಅಕ್ರಮ ಮರಳು ಗಣಿಗಾರಿಕೆ: ಆರೋಪಿಗಳ ಜೊತೆ ಕೈಜೋಡಿಸಿದರೆ ಸಹಿಸುವುದಿಲ್ಲ- ಗೃಹ ಮಂತ್ರಿ

ಮಂಡ್ಯ: ‘ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆ ಹಾವಳಿ ಹೆಚ್ಚಾಗಿ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೆ.ಆರ್. ಪೇಟೆ, ಬಾಳು, ಕೊಪ್ಪ ಭಾಗದಲ್ಲಿ ಹೆಚ್ಚಾಗಿದೆ. ಗಸ್ತು ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ಅಂಥವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಸೂಚನೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ, ಅಧಿಕಾರಿಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಅಕ್ರಮ ಮರಳು ಗಣಿಗಾರಿಕೆ ದಂಧೆಗೆ ನಮ್ಮವರೇ ಸಹಕರಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾವಹಿಸ ಬೇಕು. ಆರೋಪಿಗಳ ಜೊತೆ ಪೊಲೀಸರು ಕೈಜೋಡಿಸುವುದು ಕಂಡು ಬಂದರೆ ಸಹಿಸುವುದಿಲ್ಲ. ಇದು ಮುಂದುವರಿ ಸುವುದು ಕಂಡು ಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸ ಬೇಕು’ ಎಂದು ಸೂಚನೆ ನೀಡಿದರು.

‘ಡ್ರಗ್ಸ್‌ ದಂಧೆ ಕಡಿವಾಣಕ್ಕೆ ಹೊಸ ಕಾನೂನು’

‘ಡ್ರಗ್ಸ್ ಚಟುವಟಿಕೆಗಳು ಕಂಡು ಬಂದರೆ ಅಯಾ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡುಗುವ ರೌಡಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ. ನಿಮಗೆ, ಲಾಠಿ, ಗನ್ ಸುಮ್ಮನೆ ನೀಡಿಲ್ಲ. ಸಂದರ್ಭ ಬಂದಾಗ ಬಳಸಿ. ನಿಮ್ಮೊಂದಿಗೆ ಸರ್ಕಾರ ನಿಲ್ಲುತ್ತದೆ’ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

ಪರಿಹರಿಸುವ ಕೆಲಸ ಮಾಡಬೇಕು. ಅನ್ಯಾಯಕ್ಕೆ ಒಳಗಾದವರ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ.ಸಮಾಜದಲ್ಲಿ ಯಾರು ನ್ಯಾಯ ಕೇಳಿಕೊಂಡು ಠಾಣೆಗೆ ಬರುತ್ತಾರೆ.ಅವರ ಪರ ನಿಲ್ಲಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

‘ನೊಂದವರಿಗೆ, ಬಡವರಿಗೆ ರಕ್ಷಣೆ ನೀಡುವುದು ಮತ್ತು ನ್ಯಾಯ

‘ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಸದನದಲ್ಲಿ ತಿಳಿಸಿದ್ದೇವೆ. ಇದಕ್ಕೆ ಬದ್ಧವಾಗಿ ಪೊಲೀಸ್ ಇಲಾಖೆ ಕೆಲಸ ಮಾಡಬೇಕಿದೆ. ಡ್ರಗ್ಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಇದರ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ಕಾನೂನು ಜಾರಿಗೆ ತರುತ್ತೇವೆ’ ಎಂದು ಹೇಳಿದರು. ನಮ್ಮ ಸರ್ಕಾರದ ಬದ್ಧತೆ, ಜಾತಿ, ಧರ್ಮ, ಪಕ್ಷ ನೋಡುವುದು ಸರಿಯಲ್ಲ. ಪೊಲೀಸ್ ಸರ್ಕಾರದ ಮುಖ. ರಾಜ್ಯದಲ್ಲಿ ಪೊಲೀಸರು ಉತ್ತಮವಾಗಿ ಕರ್ತವ್ಯನಿರ್ವಹಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪೊಲೀಸರಿಗೆ ಗೊತ್ತಿರಬೇಕು’ ಎಂದು ಸೂಚಿಸಿದರು.

:ಪೊಲೀಸ್ ಅಂದರೆ ಕಾನೂನು, ಕಾನೂನಿಗೆ ಗೂಂಡಾಗಳು ಹದರ ಬೇಕು. ದ್ವಿಚಕ್ರ ವಾಹನಗಳಲ್ಲಿ ಗಸ್ತು ತಿರುಗಿದರೆ ಘಟನೆಗಳು ಏನೆಂಬುದು ಗೊತ್ತಾಗುವುದಿಲ್ಲ. ವಸ್ತು ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿ ಅರಿಯ  ನಿರಂತರವಾಗಿ ಸಂಪರ್ಕದಲ್ಲಿದ್ದು ಮಾಹಿತಿ ಸಂಗ್ರಹಿಸಬೇಕು’ ಎಂದು ಹೇಳಿದರು.

ದಕ್ಷಿಣ ವಲಯ ಐ ಜಿ ಪಿ ಎಂ. ಬಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲದಂಡಿ ಮಲ್ಲಿಕಾರ್ಜುನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿವೈಎಸ್ಪಿಗಳು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!