ಮಂಡ್ಯ::ಎ.೨೨.ಧಾರವಾಡದಲ್ಲಿ ನಡೆದ ಹಿಂದೂ ಯುವತಿ ಬರ್ಬರ ಹತ್ಯೆ ಪ್ರಕರಣ ಇದೊಂದು ಲವ್ ಜಿಹಾದ್ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.
ನಗರದ ಜೆಸಿ ವೃತ್ತದಲ್ಲಿ ಜಮಾವಣೆಗೊಂಡು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರ ಹತ್ಯೆ ಖಂಡನೀಯ. ಜೀವ ಅಮೂಲ್ಯ, ಇಂತಹ ಕೃತ್ಯ ಮಾಡಿರುವ ಆರೋಪಿಗೆ ಗಲ್ಲುಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ನೇಹಾ ಯುವತಿಯ ಕೊಲೆ ಹಿಂದೆ ಲವ್ ಜಿಹಾದ್ ಇದ್ದು ಕೂಡಲೇ ಕೊಲೆಗಾರನಿಗೆ ಗಲದಲುಯ ಶಿಕ್ಷೆ ಆಗಲಿ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಆಗ್ರಹಿಸಿರುವುದು ಪ್ರತಿಭಟನೆಗೆ ದೊಡ್ಡ ಶಕ್ತಿ ಬಂದಿದೆ ಎಂದರು.
ಇAಥ ಘಟನೆಗಳಿಗೆ ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯೇ ಕಾರಣ.. ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ ಹಾಡಹಗಲೇ ಹತ್ಯೆ ಆಗಿರೋದು ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದರು.
ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ, ಹುಬ್ಬಳ್ಳಿ ಗಲಭೆ ಪ್ರಕರಣ, ರಾಮೇಶ್ವರ ಸ್ಫೋಟ, ದೇಶ ವಿರೋಧಿ ಘೋಷಣೆ, ಮುಸ್ಲಿಂ ಲೀಗ್ ಧ್ವಜ ಹೀಗೆ ಸಾಲು ಸಾಲು ಸಮಾಜಘಾತಕ, ದೇಶದ್ರೋಹಿ ಘಟನೆ ನಡೆದಿವೆ. ಆದರೆ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಮತಕ್ಕಾಗಿ ತುಷ್ಟೀಕರಣ ಮಾಡುತ್ತಿದೆ. ಈಗ ನಡೆದಿರುವ ಹತ್ಯೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ರೈತ ಮೋರ್ಚಾ ಅಧ್ಯಕ್ಷ ಅಶೋಕ್ಜಯರಾಂ, ಮುಖಂಡರಾದ ಚಂದಗಾಲು ಶಿವಣ್ಣ, ಸಿದ್ದರಾಮಯ್ಯ, ಮಂಗಳಾ, ಪುಟ್ಟಮ್ಮ, ರಮೇಶ್ವಿಶ್ವಕರ್ಮ,. ಶಿವಕುಮಾರ್ ಆರಾದ್ಯ, ಕೇಶವ, ಅಶೋಕ್ ಮಳವಳ್ಳಿ, ಶ್ರೀಧರ್, ಸಿ.ಟಿ.ಮಂಜುನಾಥ್ ಮತ್ತಿತರರಿದ್ದರು.