ಐಪಿಎಲ್ ಬೆಟ್ಟಿಂಗ್: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ
ಸಿಂಧನೂರು: ತಾಲೂಕಿನ ಉದ್ಭಾಳ ಗ್ರಾಮದ
ಯುವಕನೊಬ್ಬ ಐಪಿಎಲ್ ಬೆಟ್ಟಿಂಗ್‌ನಿಂದ ಸಾಲಕ್ಕೆ ತುತ್ತಾಗಿ
ಮನನೊಂದು ನೇಣು
ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿರುವ ಘಟನೆ
ತಡವಾಗಿ ಬೆಳಕಿಗೆ ಬಂದಿದೆ.
ಉದ್ಭಾಳ ಗ್ರಾಮದ ಮುದಿಬಸವ
(29) ಮೃತ ದುರ್ದೈವಿ. ಈತ
ಐಪಿಎಲ್ ಬೆಟ್ಟಿಂಗ್‌ನಿಂದ ಸಾಲ
ಮಾಡಿಕೊಂಡಿದ್ದ. ಹಣ ಪಾವತಿಸಲಾಗದೆ ಬೆಟ್ಟಿಂಗ್
ಕಟ್ಟಿದವರಿಂದ ಕಿರುಕುಳಕ್ಕೆ ಒಳಗಾಗಿದ್ದ. ಕೊನೆಗೆ
ಮನನೊಂದು ನಗರದ ಗಂಗಾವತಿ ರಸ್ತೆಯಲ್ಲಿರುವ
ಸಾಯಿ ರೆಸಿಡೆನ್ಸಿ ಲಾಡ್ಜ್‌ನಲ್ಲಿ ಫ್ಯಾನ್‌ಗೆ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ
ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಂಡ್ಯದಲ್ಲು ಬೆಟ್ಟಿಂಗ್ ಧಂದೆ:ಮಂಡ್ಯ ಜಿಲ್ಲೆಯಲ್ಲು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಅನುಸರಿಸಿ ವ್ಯಾಪಕವಾಗಿ ಬೆಟ್ಟಿಂಗ್ ಧಂದೆ ನಡೆಯುತ್ತಿದೆ ಎನ್ನಲಾಗಿದೆ.ಈ ಕುರಿತು ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಸದನದಲ್ಲಿ ದನಿ ಎತ್ತಿದ್ದನ್ನು ವಿಪಕ್ಷಗಳು ದನಿಗೂಡಿಸಿ ಬೆಂಬಲಿಸಿದ್ದವು.