- ಜೂ 16ರಂದು ಮಂಡ್ಯದಲ್ಲಿ ಕುಮಾರಸ್ವಾಮಿಗೆ ನಾಗರೀಕ ಸನ್ಮಾನ
ಮಂಡ್ಯ: ಜೂ೧೪.ಜೂನ್ ೧೬ರಂದು ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಜೆ ೫ಗಂಟೆಗೆ ನಾಗರೀಕ ಸನ್ಮಾನ ಹಮ್ಮಿಕೊಳ್ಳಲಾಗಿದೆಯೆಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಒಂದು ಲಕ್ಷಕ್ಕು ಹೆಚ್ಚು ಮಂದಿ ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆಯಿದೆ.ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಒಟ್ಟುಗೂಡಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಲಿದೆಯೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ.ಜಿಲ್ಲೆಯಲ್ಲಿ ಲಭ್ಯವಿರುವ ಸರಕಾರಿ ಜಾಗಗಳು ಹಾಗೂ ಜಾರಿಗೆ ತರಬಹುದಾದ ಕೈಗಾರಿಕೆಗಳ ಕುರಿತು ಕುಮಾರಸ್ವಾಮಿಯವರು ನಮ್ಮೊಂದಿಗೆ ಚರ್ಚಿಸಿದ್ದಾರೆ ಎಂದರು.ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಅನ್ನದಾನಿ.ಸುರೇಶ್ ಗೌಡ.ಜ್ಯಾದಳದ ಜಿಲ್ಲಾಧ್ಯಕ್ಷ ಡಿ ರಮೇಶ್.ಹಾಗೂ ರಾಮಚಂದ್ರ ಶಾಸಕ ಎಚ್ ಟಿ ಮಂಜು ಉಪಸ್ಥಿತರಿದ್ದರು