Thursday, December 26, 2024
spot_img

ಬ್ಯಾಂಕುಗಳಲ್ಲಿ ಕನ್ನಡ ಜಾರಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಸೂಚನೆ

 

ಬ್ಯಾಂಕುಗಳಲ್ಲಿ ಕನ್ನಡ ಬಳಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯ ಬ್ಯಾಂಕುಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದ್ದು ಈ ಬಗ್ಗೆ ಗ್ರಾಹಕರು ಸೇರಿದಂತೆ ಕನ್ನಡಪರ ಸಂಘಟನೆಗಳು ದನಿ ಎತ್ತುತ್ತಿದ್ದು.ಬ್ಯಾಂಕುಗಳು ಕನ್ನಡ ಸ್ನೇಹಿಯಾಗಿ ವರ್ತಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಬರೋಡಾ ಬ್ಯಾಂಕ್ ತರಬೇತಿ ಕೇಂದ್ರದಲ್ಲಿ ಬ್ಯಾಂಕ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು ಬ್ಯಾಂಕುಗಳಲ್ಲಿ ಚಲನ್ ಗಳನ್ನು ಕನ್ನಡದಲ್ಲಿ ನೀಡುತ್ತಿಲ್ಲ.ಹೊರರಾಜ್ಯಗಳಿಂದ ನೇಮಕವಾದ ಸಿಬ್ಬಂದಿ ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿಲ್ಲ.ಇದರಿಂದ ಗ್ರಾಹಕರ ಜತೆಗೂ ಬ್ಯಾಂಕ್ ವ್ಯವಹಾರಕ್ಕು ಹಾನಿ ಆಗಿದೆ ಎಂದರು.

ಸಭೆಯ ಆರಂಭಕ್ಕು ಮುನ್ನಾ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ ಭಾಷವಾರು ಆಧಾರದಲ್ಲಿ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಗಿದೆ.ಇಲ್ಲಿನ ಆಡಳಿತ ಹಾಗೂ ಜನರ ಭಾಷೆ ಕನ್ನಡವೆ ಆಗಿದೆ.ಈ ಭಾಷೆಯಲ್ಲಿ ಆಡಳಿತ ಮತ್ತು ಎಲ್ಲವು ಇರಬೇಕಾದುದು ಸಹಜವಾಗಿದೆ.

ಆದರೆ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಚಲನ್ ಗಳೇ ಸಿಗುತ್ತಿಲ್ಲ.ಬದಲಿಗೆ ಇಂಗ್ಲೀಷು ಹಿಂದಿಯಲ್ಲಷ್ಟೆ ಚಲನ್ ಗಳು ಲಭ್ಯವಾಗುವಂತೆ ಮಾಡಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ.ಇದು ಮೊದಲು ತಪ್ಪಬೇಕಿದೆಯೆಂದರು.

ಮುಂದುವರಿದು ಬ್ಯಾಂಕುಗಳಲ್ಲಿ ಖಾತೆ ಆರಂಭ ಮುಚ್ಚುವಿಕೆ ಸಾಲದ ಕರಾರು ಸೇರಿದಂತೆ ಎಲ್ಲ ದಾಖಲೆಗಳನ್ನು ಕನ್ನಡಕ್ಕೆ ತರಬೇಕು.ಇದಕ್ಕೆ ಬೇಕಾದ ನೆರವನ್ನು ಭಾಷಾಂತರ ಅನುವಾದ ಮಂಡಳಿಯಿಂದ ಪಡೆಯಬಹುದಾಗಿದೆ.ಹೊರರಾಜ್ಯಗಳಿಂದ ನೇಮಕವಾದವರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಕನ್ನಡ ಕಲಿಸಲು ಮೆಡಿಕಲ್ ಕಾಲೇಜುಗಳ ಮಾದರಿಯಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸಬೇಕು.ಎಟಿಎಂಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕು.
ಬ್ಯಾಂಕುಗಳಲ್ಲಿ ಹಿಂದಿ ದಿವಸ ಆಚರಣೆ ಕೈಬಿಟ್ಟು ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯವಾಗಬೇಕು.

ಇವೆಲ್ಲವನ್ನು ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆಯೊಳಗೆ ಜಾರಿಗೆ ತರಬೇಕು ಎಂದು ಗಡುವು ನೀಡಿದರು.

ನಂತರ ಜಿಲ್ಲಾಧಿಕಾರಿಗಳು ಈ ಎಲ್ಲ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕ್ ಗಳಲ್ಲಿ ಕನ್ನಡ ಸ್ನೇಹಿ ವಾತಾವರಣ ನಿರ್ಮಿಸುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಜಿಪಂ ಸಿಇಓ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಾದ ಎಸ್ ನಾರಯಣ್.ಎಂ.ಎನ್ ಚಂದ್ರು.ಎಚ್ ಡಿ ಜಯರಾಂ ಸೇರಿದಂತೆ ವಿವಿಧ ಬ್ಯಾಂಕುಗಳ‌ ಅಧಿಕಾರಿಗಳು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!