ಮಂಡ್ಯ: ಚುನಾವಣಾ ತರಬೇತಿ: ಗೈರಾದ 51 ಜನರಿಗೆ ನೋಟೀಸ್ ಜಾರಿ ಮಾಡಲು ಜಿಲ್ಲಾಧಿಕಾರಿಗಳಿಂದ ಆದೇಶ*
ಲೋಕಸಭಾ ಸಾರ್ವತ್ರಿಕ ಚುನಾವಣೆ ಗೆ ಸಂಬಂಧಿಸಿದಂತೆ ಏಪ್ರಿಲ್ 7 ರಂದು (ಇಂದು) ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿ( PRO & APRO) ಗಳಿಗೆ ಮೊದಲ ಹಂತದ ತರಬೇತಿಯನ್ನು ಎಲ್ಲಾ ತಾಲ್ಲೂಕುಗಳಲ್ಲಿ ಆಯೋಜಿಸಲಾಗಿತ್ತು.
ತರಬೇತಿಗೆ 51 ಜನ ಗೈರು ಹಾಜರಾಗಿದ್ದು, ಗೈರು ಹಾಜರಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಆದೇಶಿಸಿದ್ದಾರೆ
ಇನ್ನು 5 ದಿನದೊಳಗಾಗಿ ಗೈರು ಹಾಜರಾದವರ ವಿರುದ್ಧ ಆರ್.ಪಿ ಆಕ್ಟ್ ಪ್ರಜಾ ಪ್ರತಿನಿಧ್ಯ ಕಾಯ್ದೆ1951 ಕಲಾಂ 134 ರಂತೆ ಕಾನೂನು ರೀತ್ಯ ಶಿಸ್ತು ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.