Saturday, December 21, 2024
spot_img

ಮಂಡ್ಯದಲ್ಲಿ ಮಧ್ಯಾಹ್ನವೇ ಭಾರೀ ಸದ್ದು.ಭೂಕಂಪವೇ.ಕಲ್ಲುಗಣಿಖೋರರು ಸಿಡಿಸಿದ ಬಾಂಬಾ!

ಮಧ್ಯಾಹ್ನಕ್ಕೆ ಮಂಡ್ಯದಲ್ಲಿ ಭಾರೀ ಸದ್ದು.ಭೂಕಂಪವೆ?ಕಲ್ಲುಗಣಿಖೋರರು ಸಿಡಿಸಿದ ಬಾಂಬಾ!

ಮಂಡ್ಯ: ಫೆ.೨೪.ಇಂದು ಮಧ್ಯಾಹ್ನ ಮಂಡ್ಯ ನಗರದಾದ್ಯಂತ ಕೇಳಿ ಬಂದ ಭಾರೀ ಸದ್ದಿಗೆ ಮಂಡ್ಯ ಜನತೆ ಬೆಚ್ಚಿ ಬಿದ್ದಿದ್ದಾರೆ.ಮಧ್ಯಾಹ್ನ ೨.೨೦ಕ್ಕೆ ಕೇಳಿಸಿದ ಈ ಸದ್ದಿಗೆ ನಗರದ ಜನ ಒಮ್ಮೆಗೆ ಕಂಪಿಸಿದರು.ಹಕ್ಕಿಗಳು ಅಡ್ಡಾದಿಡ್ಡಿ‌ಹಾರಾಡಲು ಶುರುವಾಗುತ್ತಿದ್ದಂತೆ ಯಾವುದೋ ಟಿಸಿ ಸ್ಪೋಟವಾಗಿರಬಹುದೆಂದು ಅಂದುಕೊಂಡರು.ಆದರೆ ಯಾವಾಗ ಮನೆಯೊಳಗಿನ ಪಾತ್ರೆಗಳು ಅಲುಗಲು ಶುರುವಾಯಿತೋ ಥಟ್ಟನೆ ಬೆಚ್ಚಿ ಆಕಾಶದತ್ತ ನೋಡಿದರು.ಕೆಲದಿನಗಳಿಂದ ಕನ್ನಂಬಾಡಿ ಸುತ್ತಲಿನ ಕಲ್ಲು ಗಣಿಖೋರರು ಅಪಾರವಾದ ಕಲ್ಲು ಗಣಿ ದೋಚಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಲೆ ಇದ್ದಾರೆ.ಕನ್ನಂಬಾಡಿ ಸುತ್ತಮುತ್ತಲಿನ ಇಪ್ಪತ್ತು ಕಿಮಿ ವ್ಯಾಪ್ತಿಯಲ್ಲಿ ಯಾವುದೆ ಗಣಿಗಾರಿಕೆ ನಡಸದಂತೆ ಹೈಕೋರ್ಟ್ ಸಹ ಆದೇಶ ನೀಡಿದೆ. ಇದನ್ನು ಮೀರಿ ಗಣಿಗಾರಿಕೆ ನಡೆಸಲು ಇಲ್ಲಿನ ಗಣಿ ಮಾಫಿಯಾ ಎಲ್ಲ ಪಕ್ಷಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು.ಇದಕ್ಕಾಗಿ ಪೂನಾದಿಂದ ತಂಡವೊಂದನ್ನು ಕರೆಸಿ ಕನ್ನಂಬಾಡಿ ಸುತ್ತ ಪರೀಕಾರ್ಥ ಸ್ಪೋಟ ನಡೆಸಿ ಕನ್ನಂಬಾಡಿಗೆ ಯಾವುದೆ ಆಪಾಯ ಇಲ್ಲ ಎಂಬುದನ್ನು ನಿರೂಪಿಸುವ ಪ್ರಯತ್ನದಲ್ಲಿದೆ.ಈ ನಡುವೆ ಇವತ್ತಿನ ಸದ್ದಿಗೆ ಪರೀಕಾರ್ಥ ಪ್ರಯೋಗದ ಭಾಗವಾಗಿ ಸಿಡಿಸಿದ ಸ್ಪೋಟಕ ಕಾರಣವೆ ಎಂಬ ಅನುಮಾನವು ನಗರದಲ್ಲಿ ಹರಡಿದ್ದು ಜಿಲ್ಲಾಡಳಿತ ಈ ಕುರಿತು ನೀಡುವ ಸ್ಪಷ್ಟನೆಗೆ ನಾಗರೀಕರು ಕಾದು ಕುಳಿತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!