Saturday, December 21, 2024
spot_img

ಮಂಡ್ಯ:ಫಲಿಸದ ಕೈ’ ತಂತ್ರ .ಜ್ಯಾದಳ ಬಿಜೆಪಿ ತೆಕ್ಕೆಗೆ ನಗರಸಭೆ

ಮಂಡ್ಯ :-ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಜಾತ್ಯತೀತ ಜನತಾದಳ – ಬಿಜೆಪಿ ಮೈತ್ರಿಕೂಟ ಮಂಡ್ಯ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿವೆ.
ನಗರಸಭೆಯಲ್ಲಿ ಮೊದಲ ಅವಧಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್ ಎರಡನೇ ಅವಧಿಯಲ್ಲಿಯೂ ಮಿತ್ರ ಪಕ್ಷ ಬಿಜೆಪಿ ಬೆಂಬಲದಿಂದ ಅಧಿಕಾರದ ಗದ್ದುಗೆ ಅಲಂಕರಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ನಾಗೇಶ್.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಎಂ ಸಿ ಅರುಣ್ ಕುಮಾರ್ ಆಯ್ಕೆಯಾಗಿದ್ದು. ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ನಡೆಸಿದ ಪ್ರಯತ್ನ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದೆ.
ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಾತ್ಯತೀತ ಜನತಾದಳದಿಂದ ಸದಸ್ಯ ನಾಗೇಶ್, ಕಾಂಗ್ರೆಸ್ ಪಕ್ಷದಿಂದ ಎಚ್ಎಸ್ ಮಂಜು ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದರು, ಬಿಸಿಎಂ ಎ ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಸದಸ್ಯ ಎಂ ಸಿ ಅರುಣ್ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಜಾಕೀರ್ ಪಾಷಾ ಮತ್ತು ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು.


ಅಧ್ಯಕ್ಷ ಸ್ಥಾನಕ್ಕೆಮಂಡ್ಯ ನಗರದ ಒಂದನೇ ವಾರ್ಡ್ ಸದಸ್ಯ ನಾಗೇಶ್ ಮತ್ತು ಎಚ್.ಎಸ್ ಮಂಜು ನಡುವೆ ಸ್ಪರ್ಧೆ ಏರ್ಪಟ್ಟು ನಾಗೇಶ್ – 19 ಮತ ಪಡೆದು ಅಧ್ಯಕ್ಷ ಗದ್ದುಗೆ ಅಲಂಕರಿಸಿದರೆ ಎಚ್ಎಸ್ ಮಂಜು – 18 ಮತ ಮತ ಪಡೆದು ಪರಾಭವ ಗೊಂಡರು.


ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಎಂ ಸಿ ಅರುಣ್ ಕುಮಾರ್ 19 ಮತ ಪಡೆದು ಆಯ್ಕೆಯಾಗಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಖುದ್ದು ಹಾಜರಿದ್ದು ಮೈತ್ರಿಕೂಟವನ್ನು ಗೆಲುವಿನ ದಡ ಸೇರಿಸಿದ್ದು, ಶಾಸಕ ಗಣಿಗ ರವಿಕುಮಾರ್ ಕಾಂಗ್ರೆಸ್ ಪಕ್ಷವನ್ನ ಅಧಿಕಾರದ ಗದ್ದುಗೆ ತರಲು ವಿಫಲರಾಗಿದ್ದಾರೆ.
ನಗರಸಭೆಯಲ್ಲಿ 35 ಚುನಾಯಿತ ಸದಸ್ಯರಿದ್ದು, ಜೆಡಿಎಸ್ ನ 18 ಸದಸ್ಯರ ಪೈಕಿ ಮೂವರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರಿಂದ ಸದಸ್ಯರ ಸಂಖ್ಯೆ 15ಕ್ಕೆ ಕುಸಿದಿತ್ತು, ಕಾಂಗ್ರೆಸ್ ಹತ್ತು ಸದಸ್ಯರನ್ನು ಹೊಂದಿದ್ದು ಈ ಪೈಕಿ ಟಿ.ಕೆ ರಾಮಲಿಂಗಯ್ಯ ಜೆಡಿಎಸ್ ನತ್ತ ಮುಖ ಮಾಡಿದ್ದರು ಇದರಿಂದ ಕಾಂಗ್ರೆಸ್ ನ ಬಲ 9ಕ್ಕೆ ಕುಗ್ಗಿತ್ತು, ಐವರು ಪಕ್ಷೇತರರು ಜೊತೆಗೂಡಿ ಜೆಡಿಎಸ್ ನ ಮೂವರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು, ಬಿಜೆಪಿ ಪಕ್ಷದ ಇಬ್ಬರು ಸದಸ್ಯರು ಮಿತ್ರ ಪಕ್ಷ ಜೆಡಿಎಸ್ ಜೊತೆಗೂಡಿದ್ಧರು.
ಇದೀಗ ಜೆಡಿಎಸ್ ಪಕ್ಷಕ್ಕೆ ಪಕ್ಷದ 15 ಸದಸ್ಯರು, ಬಿಜೆಪಿ ಇಬ್ಬರು ಸದಸ್ಯರು, ಕಾಂಗ್ರೆಸ್ ಪಕ್ಷದ ಟಿ.ಕೆ ರಾಮಲಿಂಗಯ್ಯ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ ಚಲಾಯಿಸಿದ್ದು ಅಧಿಕಾರದ ಗದ್ದುಗೆ ಹಿಡಿಯಲು ಸಹಕಾರಿಯಾಗಿದೆ.
ಅದೇ ರೀತಿ ಕಾಂಗ್ರೆಸ್ ಪಕ್ಷದ ಪರ ಪಕ್ಷದ 9 ಸದಸ್ಯರು, ಐವರು ಪಕ್ಷೇತರರು, ಜೆಡಿಎಸ್ ನ ಮೂವರು ಹಾಗೂ ಶಾಸಕ ಗಣಿಗ ರವಿ ಕುಮಾರ್ ಮತ ಚಲಾಯಿಸಿದ್ದರೂ ಒಂದು ಮತದಿಂದ ಕಾಂಗ್ರೆಸ್ ಪರಾಭವಗೊಂಡಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!