Friday, April 4, 2025
spot_img

ಮಿಮ್ಸ್ ಟೆಂಡರ್ ನಲ್ಲಿ ನಕಲಿ ದಾಖಲೆ ಬಳಕೆ.ಸಾಬೀತಾದ ಆರೋಪ

ಮಿಮ್ಸ್ ಟೆಂಡರ್ ನಲ್ಲಿ ನಕಲಿ ದಾಖಲೆ ಬಳಕೆ.ಸಾಬೀತಾದ ಆರೋಪ

ಮಂಡ್ಯ ಮಿಮ್ಸ್ ಹೊರಗುತ್ತಿಗೆ ಟೆಂಡರ್ ನಲ್ಲಿ ಏಜೆನ್ಸಿಯೊಂದು ನಕಲಿ ದಾಖಲೆ ಬಳಸಿ ಟೆಂಡರ್ ಗಿಟ್ಟಿಸಿರುವ ಕುರಿತು ಮಾಡಿದ್ದ ಆರೋಪಕ್ಕೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಪತ್ರ ನಕಲಿ ದಾಖಲೆ ಬಳಸಿ ಟೆಂಡರ್ ಗಿಟ್ಟಿಸಿರುವುದನ್ನು ಧೃಡೀಕರಿಸಿದೆ.

೨೦೨೨ ೨೩ ನೇ ಸಾಲಿಗೆ ಮಂಡ್ಯ ಮಿಮ್ಸ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿ ಮತ್ತು ಡಿ ದರ್ಜೆಯ ನೌಕರರ ಸೇವೆ ಒದಗಿಸಲು ಟೆಂಡರ್ ನಡೆಸಲಾಗಿತ್ತು.

ಈ ಸಂಧರ್ಭದಲ್ಲಿ ಅರ್ಹ ಏಜೆನ್ಸಿಯಾಗಿ ಆಯ್ಕೆಯಾಗಿದ್ದ ಆರ್ ಅಂಡ್ ಆರ್ ಮ್ಯಾನ್ ಪವರ್ ಏಜೆನ್ಸಿ ಸೇವಾ ಅನುಭವದಲ್ಲಿ ದಾವಣಗೆರೆಯ ಸಚಿವ ಮಲ್ಲಿಕಾರ್ಜುನ ಒಡೆತನದ ಎಸ್ ಎಸ್ ಆಸ್ಪತ್ರೆ ಹಾಗೂ ಅವರದೆ ಒಡೆತನದ ಬಾಪೂಜಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸೇವೆ ಒದಗಿಸಿರುವುದಾಗಿ ಅನುಭವ ಪ್ರಮಾಣ ಪತ್ರ ಸಲ್ಲಿಸಿದ್ದರು.

ಅನುಭವ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆಗಳು ನಕಲಿಯಾಗಿದ್ದು ಈ ಸಂಬಂದ ಅಗತ್ಯ ಪರೀಶೀಲನೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಅಂದಿನ ಮಿಮ್ಸ್ ನಿರ್ದೇಶಕ ಡಾ.ಹರೀಶ್.ಮುಖ್ಯ ಆಡಳಿತಾಧಿಕಾರಿ ವೆಂಕಟಲಕ್ಷ್ಮೀಗೆ ಮೂರು ಬಾರಿ ಮನವಿ ಸಲ್ಲಿಸಿದ್ದರು.ಈ ಸಂಬಂದ ದಾವಣಗೆರೆಯ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಒಡೆತನದ ಆಸ್ಪತ್ರೆಗೆ ಪತ್ರ ಬರೆದು ದಾಖಲೆಗಳ ನೈಜತೆ ಖಚಿತಪಡಿಸಿಕೊಳ್ಳಲು ಕೋರಲಾಗಿತ್ತು.ಡಾ.ಹರೀಶ್

ಆದರೆ ಇದೆಲ್ಲವನ್ನೂ ಗಾಳಿಗೆ ತೂರಿದ್ದ ನಿರ್ದೇಶಕ ಹರೀಶ್ ಮತ್ತು ವೆಂಕಟಲಕ್ಷ್ಮೀ.ಆರ್ ಅಂಡ್ ಆರ್ ಮ್ಯಾನ್ ಪವರ್ ಏಜೆನ್ಸಿಗೆ ಕಾರ್ಯಾದೇಶ ನೀಡಿದ್ದರು.

ಇದರ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿತ್ತು‌.ಲೋಕಾಯುಕ್ತ ತನಿಖಾಧಿಕಾರಿಗಳು ಸಹ ದಾಖಲೆಗಳ ನೈಜತೆಯ ಕುರಿತು ತನಿಖೆ ನಡೆಸುವ ಬದಲು ಏಜೆನ್ಸಿಗೆ ಕ್ಲೀನ್ ಚಿಟ್ ಕೊಡುವಂತೆ ತಮ್ಮ ತನಿಖಾ ವರದಿ ಸಲ್ಲಿಸಿದ್ದರು.

ಸದರಿ ಏಜೆನ್ಸಿ ದಾವಣಗೆರೆಯ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸೇವೆ ಒದಗಿಸಿದ್ದ ಪಕ್ಷದಲ್ಲಿ ಆದಾಯ ತೆರಿಗೆ.ಜಿಎಸ್ ಟಿ ಪಾವತಿ ಮಾಡಿರುವ ದಾಖಲೆಗಳು ಲಭ್ಯವಿರಬೇಕು.ಆದರೆ ಈ ಸಂಬಂದ ದಾಖಲೆಗಳು ಲಭ್ಯವಿಲ್ಲದ ಕಾರಣ ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್ ಟಿ ನಷ್ಟ ಮಾಡಿರುವ ಕುರಿತು ನಾಗಣ್ಣಗೌಡ ವಾಣಿಜ್ಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಿದ್ದರು.

ದೂರಿನನ್ವಯ ತನಿಖೆ ನಡೆಸಿದ ಜಿಎಸ್ ಟಿ ಅಧಿಕಾರಿಗಳು ಏಜೆನ್ಸಿಯು ಸಲ್ಲಿಸಿರುವ ಅನುಭವ ಪತ್ರದ ಅವಧಿಯಲ್ಲಿ ದಾವಣಗೆರೆ ಆಸ್ಪತ್ರೆಯಲ್ಲಿ ಯಾವುದೆ ಹೊರಗುತ್ತಿಗೆ ಸೇವೆ ಒದಗಿಸಿರುವ ಕುರಿತು ಜಿಎಸ್ ಟಿ ಆದಾಯ ತೆರಿಗೆ ಪಾವತಿಯಾಗಿಲ್ಲ ಎಂದು ನಾಗಣ್ಣಗೌಡರಿಗೆ ಹಿಂಬರಹದ ಮೂಲಕ ಧೃಡೀಕರಿಸಿದೆ.

ಇದರಿಂದ ಏಜೆನ್ಸಿಯು ಸಲ್ಲಿಸಿರುವ ಅನುಭವ ಪ್ರಮಾಣ ಪತ್ರದ ಅವಧಿಯಲ್ಲಿ ದಾವಣಗೆರೆಯಲ್ಲಿ ಯಾವುದೆ ಹೊರಗುತ್ತಿಗೆ ಸೇವೆ ಒದಗಿಸಿಲ್ಲವೆಂಬುದು ಧೃಡಪಟ್ಟಿದ್ದು ಈ ನಕಲಿ ದಾಖಲೆಗೆ ಸಹಕರಿಸಿದ್ದ ಡಾ.ಹರೀಶ್ ಹಾಗೂ ವೆಂಕಟಲಕ್ಷ್ಮೀಗೆ ಈಗ ಸಂಕಷ್ಟ ಎದುರಾಗಿದೆ.

ಆಗ್ರಹ:ಸಾಕಷ್ಟು ಬಾರಿ ಈ ಬಗ್ಗೆ ಮನವಿ ನೀಡಿದಾಗ್ಯೂ ನಕಲಿ ದಾಖಲೆ ಸಲ್ಲಿಸಲು ಅವಕಾಶ ನೀಡಿದ ಹಾಲೀ ಚಿಕ್ಕಮಗಳೂರು ಮೆಡಿಕಲ್ ಕಾಲೇಜು ನಿರ್ದೇಶಕರಾದ ಡಾ.ಹರೀಶ್ ರನ್ನು ಹುದ್ದೆಯಿಂದ ವಜಾಗೊಳಿಸಿ ಈ ಪ್ರಕರಣದಲ್ಲಿ ಭಾಗೀಯಾದ ಎಲ್ಲರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದೂರುದಾರ ಎಂ.ಬಿ.ನಾಗಣ್ಣಗೌಡ ಸರಕಾರವನ್ನು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!