ಮಂಡ್ಯ:ಎ.೧೦.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ವಿರುದ್ದ
ಮಂಡ್ಯದಲ್ಲಿ ದೂರು
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ಹರಡಿ ಮುಖ್ಯಮಂತ್ರಿಗಳ ತೇಜೊವಧೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ವ್ಯಕ್ತಿಯ ವಿರುದ್ದ ಅಗತ್ಯ ಕ್ರಮಕ್ಕೆ ಕೋರಿ ಚಲುವರಾಯಸ್ವಾಮಿ ಹಿತೈಷಿಗಳ ಬಳಗದ ಜಿಬಿ ನವೀನ್ ಕುಮಾರ್ ಮಂಡ್ಯ ಪೋಲಿಸ್ ವರಿಷ್ಟರಿಗೆ ದೂರು ದಾಖಲಿಸಿದ್ದಾರೆ.
Boralinga Boralinga ಎಂಬ ಫೇಸ್ ಬುಕ್ ಖಾತೆಯಲ್ಲಿ ಇಂದ್ರಪ್ರಸ್ಥ ಎಂಬ ಬೇನಾಮಿ ಖಾತೆಯಿಂದ ಪೋಸ್ಟ್ ವೊಂದನ್ನು ಷೇರ್ ಮಾಡಿದ್ದು
ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮಸೀದಿಗಳಿಗೆ ಮಾತ್ರ ಕುಡಿಯುವ ನೀರು ಎಂದು ಟ್ಯಾಂಕರುಗಳಿಗೆ ಫಲಕ ಅಳವಡಿಸಿರುವ ಪೋಸ್ಟರ್ ಹಂಚಲಾಗಿದೆ.
ಈ ರೀತಿಯ ಯಾವುದೆ ಪೋಸ್ಟರ್ ಇಲ್ಲದಿದ್ದರು ಹಿಂದೂಗಳನ್ನು ಗಲಭೆಗೆ ಪ್ರಚೋದಿಸುವ ಸಲುವಾಗಿ ಈ ರೀತಿಯ ಪೋಸ್ಟರ್ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.ಇದರಿಂದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಾರತಮ್ಯ ಮಾಡುತ್ತಿದ್ದಾರೆಂದು ಅವರ ಚಾರಿತ್ರ್ಯವಧೆ ಮಾಡುವುದು.ಹಾಗೂ ಹಿಂದೂ ಮುಸ್ಲಿಂ ಗಲಭೆಗೆ ಪ್ರಚೋದನೆ ನೀಡುವುದು ಇದರ ಉದ್ದೇಶವಾಗಿರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದೇ ಮಾದರಿಯಲ್ಲಿ krishna HB ಎಂಬುವವರು ಸಹ ಇದೇ ಪೋಸ್ಟನ್ನು ಗುಲಾಮರ ಅಪ್ಪ ಎಂಬ ಸಾಮಾಜಿ ಖಾತೆಯಿಂದ ಷೇರ್ ಮಾಡಿರುತ್ತಾರೆ.ಇವರು ಸಹ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಉದ್ದೇಶ ಹೊಂದಿದ್ದು ಈ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಈ ಮೇಲಿನ ವ್ಯಕ್ತಿಗಳ ವಿರುದ್ದ ಅಗತ್ಯ ಕ್ರಮವಹಿಸುವಂತೆ ನವೀನ್ ಕುಮಾರ್ ಮಂಡ್ಯ ಜಿಲ್ಲಾ ಅಪರ ಪೋಲಿಸ್ ವರಿಷ್ಟಾಧಿಕಾರಿ ಗಂಗಧರ ಸ್ವಾಮಿಯವರಿಗೆ ದೂರಿನ ಪ್ರತಿ ನೀಡಿದ್ದಾರೆ.ದೂರಿ ಸ್ವೀಕರಿಸಿದ ಅಪರ ಪೋಲಿಸ್ ವರಿಷ್ಟಾಧಿಕಾರಿಗಳು ಸೈಬರ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.