ದುಷ್ಟ ಶಾಸಕ ಯಾರೆಂದು ಗೊತ್ತಿದೆ:ದಳಪತಿಗಳ ವಿರುದ್ಧ ನರೇಂದ್ರ ಸ್ವಾಮಿ ಆಕ್ರೋಶ
ಮಂಡ್ಯ: ಎ.೫.ಮಂಡ್ಯ ಜಿಲ್ಲೆಯಲ್ಲಿ ದುಷ್ಟ ಶಾಸಕ ಯಾರೆಂಬುದು.ಆ ರೀತಿಯ ನಡಾವಳಿಕೆ ಯಾರದ್ದೆಂದು ಎಲ್ಲರಿಗೂ ಗೊತ್ತಿದೆ ಎಂದು ಮಳವಳ್ಳಿ ಶಾಸಕ ಪಿಎಂ ನರೇಂದ್ರ ಸ್ವಾಮಿ ಜ್ಯಾದಳ ಮಾಜಿ ಶಾಸಕ ಸಿಎಸ್ ಪುಟ್ಟರಾಜು ವಿರುದ್ದ ಹರಿಹಾಯ್ದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಕನ್ನಂಬಾಡಿ ಹಾಗೂ ಗಣಿಗಾರಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ದುಷ್ಟತನ ತೋರಿದವರು ಯಾರೆಂದು ಇಡೀ ಜಿಲ್ಲೆಗೆ ತಿಳಿದಿದೆ.ಸ್ವತಃ ಸಂಸದೆ ಸುಮಲತಾ ಅಂಬರೀಶ್ ಸಹ ಈ ಕುರಿತು ನೀಡಿರುವ ಹೇಳಿಕೆಗಳೇ ಸಾಕ್ಷೀಯಾಗಿವೆ ಎಂದರು.ಮಳವಳ್ಳಿಯ ಚುನಾವಣಾ ಪ್ರಚಾರ ಸಭೆಯಲ್ಲಿ ದಳಪತಿಗಳು ತಮ್ಮ ವಿರುದ್ದ ಟೀಕಿಸಿದ ಸಂಬಂದ ಪ್ರತಿಕ್ರಿಯಿಸಿದ ನರೇಂದ್ರ ಸ್ವಾಮಿ.೨೦೦೮ರಲ್ಲಿ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡದಿದ್ದಾಗ ಪಕ್ಷೇತ್ತರನಾಗಿ ಸ್ಪರ್ಧಿಸಿ ಆಯ್ಕೆಯಾಗಿ ನಿಜವಾದ ಕಾಂಗ್ರೆಸ್ ನಾವು ಎಂಬುದನ್ನು ಸಾಬೀತು ಮಾಡಿದೆ.ನಂತರದಲ್ಲಿ ಯಡಿಯೂರಪ್ಪ ಸರಕಾರಕ್ಕೆ ಬೆಂಬಲ ನೀಡಿದೆ.ಆಗಿನ ಸರಕಾರವನ್ನು ಕೆಡವಲು ನಮ್ಮನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಷ್ಟು ಸಭೆಗಳನ್ನು ನಡೆಸಲಾಯಿತು ಎಂಬುದನ್ನು ಪುಟ್ಟರಾಜು ನೆನಪು ಮಾಡಿಕೊಳ್ಳಬೇಕು.ಒಂಬತ್ತು ಶಾಸಕರ ರಾಜೀನಾಮೆ ಕೊಡಿಸಲು ಏನೆಲ್ಲ ನಡೆಸಲಾಯಿತು.ಹದಿನೇಳು ಮಂದಿ ಶಾಸಕರು ಅನರ್ಹಗೊಳ್ಳಲು ಯಾರು ಕಾರಣರು ಎಂಬುದನ್ನು ಈಗ ಬೆಚ್ಚಿ ಹೇಳುವ ಕಾಲ ಬಂದಿದೆ.ಈಗ ಅವರ ಎಲ್ಲ ವಿರೋಧಿಗಳು ಅವರ ಸ್ನೇಹಿತರಾಗಿದ್ದಾರೆ ಎಂದು ಕಟಕಿಯಾಡಿದರು.
೨೦೧೮ರಲ್ಲಿ ನಾವೆಲ್ಲರು ಅತ್ಯಂತ ಹೆಚ್ಚು ಅಂತರದಲ್ಲಿ ಸೋತಾಗ ಭಾರತ್ ಜೋಡೋ ಯಾತ್ರೆ.ಪ್ರಜಾಯಾತ್ರೆ ಹಾಗೂ ಕರೋನಾ ಸಮಯದಲ್ಲು ನಮ್ಮ ಜವಾಬ್ದಾರಿಗಳ ಮೂಲಕ ಜನರ ವಿಶ್ವಾಸಗಳಿಸಿ ವಿಧಾನಸೌಧಕ್ಕೆ ಆರಿಸಿ ಬಂದಿದ್ದೇವೆ ಎಂದು ನರೇಂದ್ರಸ್ವಾಮಿ ಭಾವುಕರಾದರು.
ಪುಟ್ಟರಾಜುರವರು ಎರಡು ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದಾಗ ನಾವು ಮಳವಳ್ಳಿಯಲ್ಲಿ ಕಾಂಗ್ರೇಸ್ ಗೆ ಲೀಡ್ ತಂದುಕೊಟ್ಟಿದ್ದೇವೆ.
ಪುಟ್ಟರಾಜುರವರು ಸಂಸದರಾಗಿ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಆಯ್ಕೆಯಾದರು.ಕಳೆದ ಬಾರಿ ಸ್ವತಃ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಜ್ಯಾದಳ ಶಾಸಕರಿದ್ದರು.ಸಮ್ಮಿಶ್ರ ಸರಕಾರ ಇದ್ದರು ನಮ್ಮನ್ಮು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಲಾಗಿತ್ತು.ಅದೇ ಕಿಚ್ಚು ಅನಿವಾರ್ಯವಾಗಿ ನಿಖಿಲ್ ವಿರುದ್ಧ ನಾವು ಸೆಣಸುವಂತೆ ಮಾಡಿತು ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತ್ತರ ಅಭ್ಯರ್ಥಿಯನ್ನು ಬೆಂಬಲಿಸಿದ ಕಾರಣಗಳನ್ನು ನರೇಂದ್ರ ಸ್ವಾಮಿ ಬಿಚ್ಚಿಟ್ಟರು.
ನಿಖಿಲ್ ಕುಮಾರಸ್ವಾಮಿಗೆ ಮಾಡಿದ ದ್ರೋಹವನ್ನೆ ಇವತ್ತು ಕುಮಾರಸ್ವಾಮಿಗೂ ಮಾಡಲು ನಿಂತಿದ್ದಾರೆಂದು ಪುಟ್ಟರಾಜು ವಿರುದ್ದ ತಿವಿದರು.
ಮುಂದುವರೆದು ಸಣ್ಣ ನೀರಾವರಿ ಸಚಿವರಾಗಿ ಏನು ಸಾಧನೆ ಮಾಡಿದ್ದಿರಿ ಜಿಲ್ಲೆಗೆ ಯಾವ ಕೊಡುಗೆ ಕೊಟ್ಟಿದ್ದಿರಿ.ಬೆಳಕವಾಡಿ ಗ್ರಾಮದ ರಸ್ತೆಗೆ ಮಂಜೂರಾಗಿದ್ದ ಎಂಟುವರೆ ಕೋಟಿ ರೂಪಾಯಿ ಅನುದಾನವನ್ನು ಪಾಂಡವಪುರಕ್ಕೆ ಹೊತ್ತೊಯ್ದಿರಲ್ಲ ನೀವು ಜಿಲ್ಲಾ ಮಂತ್ರಿಯಾ ಎಂದು ಪ್ರಶ್ನಿಸಿದರು.
ಡಿಸಿಸಿ ಬ್ಯಾಂಕಿಗೆ ಪ್ರಥಮ ಬಾರಿಗೆ ಒಬ್ಬ ದಲಿತನಾಗಿ ನಾನು ಆಯ್ಕೆಯಾದೆ.ನನ್ನ ಆಯ್ಕೆಗೆ ಮತ ಚಲಾಯಿಸಿದ ರ್ಶೇಂರಷ್ಟು ಮತದಾರರು ಒಕ್ಕಲಿಗರು.ಆದರೆ ನಾನು ಅಪೆಕ್ಸ್ ಬ್ಯಾಂಕಿಗೆ ಹೋಗುವುದನ್ನು ತಡೆಯುವ ಸಲುವಾಗಿ ಅಡ್ಡಗಾಲು ಹಾಕಲಾಯಿತು.
ಮಳವಳ್ಳಿಯಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಲಾಗಿದೆ.ಈಗ ಅದರ ತನಿಖೆ ಮಾಡಿ ಎನ್ನುವ ಅನ್ನದಾನಿಗಳೇ ಈ ಅಕ್ರಮ ನಡೆದಿರುವುದು ನಿಮ್ಮ ಕಾಲದಲ್ಲೆ ಎಂಬುದು ನೆನಪಿರಲಿ.ಈಗಾಗಲೇ ಎಂಟು ನೂರು ಎಕರೆ ಸರಕಾರಿ ವಶಕ್ಕೆ ಪಡೆಯಲಾಗಿದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ. ಚಿದಂಬರ ಪ್ರಾಣೇಶ್ ಮೊದಲಾದವರಿದ್ದರು