ನಿರ್ದೇಶಕರ ದ್ವಂದ್ವ ಉತ್ತರ:ಹೋರಾಟದ ಎಚ್ಚರಿಕೆಯ ಘೋಷಣೆ
ಹೋರಾಟಗಾರರು ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಎತ್ತಿದ ಪ್ರಶ್ನೆಗಳಿಗೆ ಮಿಮ್ಸ್ ನಿರ್ದೇಶಕ ಡಾ.ನರಸಿಂಹ ಮೂರ್ತಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ದ್ವಂದ್ವ ಉತ್ತರ ಸಬೂಬು ಹೇಳಿದ್ದು ಪ್ರತಿಭಟನನಿರತ ಹೋರಾಟಗಾರರನ್ನು ಕೆರಳಿಸಿತು.ಏಕಾಏಕೀ ಚಿಕಿತ್ಸಾ ದರ ಏರಿಸಲಾಗಿದೆ.ದರ ಏರಿಕೆ ಹಿಂಪಡೆಯಿರಿ ಎಂದು ಒತ್ತಾಯಿಸಿದಾಗ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹಾರಿಕೆಯ ಉತ್ತರ ನೀಡಿದರು.ಮಿಮ್ಸ್ ಗೆ ಸೇರಿದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲು ಅಗತ್ಯ ವಕೀಲರನ್ನು ನೇಮಿಸಿಕೊಳ್ಳುವಂತೆ ಒತ್ತಾಯಿಸಿದಾಗ.ಈಗಾಗಲೇ ವಕೀಲರನ್ನು ನೇಮಿಸಲಾಗಿದೆ ಎಂದು ಮರುಘಳಿಗೆಯಲ್ಲೆ ವಕೀಲರನ್ನು ನೇಮಿಸಿಕೊಳ್ಳಲಾಗುತ್ತಿದೆಯೆಂದು ದ್ವಂದ್ವ ಉತ್ತರ ನೀಡಿದರು. ಆಸ್ಪತ್ರೆಗೆ ಸರಬರಾಜು ಆಗುವ ರಿಏಜೆಂಟ್ ರಾಸಯನಿಕಗಳ ಒಪ್ಪಂದ ಆಸ್ಪತ್ರೆ ಪಾಲಿಗೆ ದುಬಾರಿ ಹಾಗೂ ನಷ್ಟದಾಯಕ ಎಂದು ಸ್ವತಃ ನಿರ್ದೇಶಕರೆ ತಾವೇ ವರದಿ ನೀಡಿ ಕಡೇಗೆ ಅಶ್ಚರ್ಯಕರವಾಗಿ ರಿಏಜೆಂಟ್ ಒಪ್ಪಂದದಿಂದ ಯಾವುದೆ ನಷ್ಟವಿಲ್ಲವೆಂದು ಸರಕಾರಕ್ಕೆ ವರದಿ ಸಲ್ಲಿಸಿದ್ದಿರಿ.ಧಿಡೀರನೆ ಈ ರೀತಿಯ ನಿಲುವು ಬದಲಿಸಿ ಮಿಮ್ಸ್ ಗೆ ನಷ್ಟವುಂಟು ಮಾಡಿದ್ದಿರಿ ಎಂದು ಹೋರಾಟಗಾರರು ತರಾಟೆಗೆ ತೆಗೆದುಕೊಂಡರು.
ನಕಲಿ ದಾಖಲೆ ಸಲ್ಲಿಸಿದ ಮಿಮ್ಸ್ ಹಣ ಲಪಟಾಯಿಸಿದ ಎರಡು ಏಜೆನ್ಸಿಗಳ ವಿರುದ್ದ ಹಾಗೂ ಇದರಲ್ಲಿ ಭಾಗೀಯಾದ ಅಧಿಕಾರಿಗಳ ವಿರುದ್ದ ಯಾವುದೆ ಕ್ರಮವಾಗಲಿ ಕನಿಷ್ಟ ನೋಟಿಸ್ ಆಗಲಿ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಇವು ನನ್ನ ಅವಧಿಯಲ್ಲಿ ನಡೆದ ಪ್ರಕರಣಗಳಲ್ಲ ಎಂದು ನುಣುಚಿಕೊಳ್ಳಲು ಪ್ರಯತ್ನಿಸಿದ ನಿರ್ದೇಶಕರಿಂದ ಯಾವುದೆ ಸ್ಪಷ್ಟ ಹಾಗೂ ಜಾರಿ ಸಾಧ್ಯ ತೀರ್ಮಾನಗಳು ಹೊರಬೀಳದಿದ್ದುದು ಹೋರಾಟಗಾರರನ್ನು ಕೆರಳಿಸಿತು.
ಕಡೇಗೆ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ನಮ್ಮ ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರ ನೀಡಿ.ಮುಂದಿನ ಹದಿನೈದು ದಿನಗಳೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ಅನಿರ್ದಿಷ್ಟವಧಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು.)