ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಇನ್ಮುಂದೆ ಡಿಸಿ ಲಗಾಮು”
ಹುಚ್ಚು ಕುದುರೆಯಂತೆ ಸವಾರಿ ಮಾಡುತ್ತಿದ್ದ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಲಗಾಮು ಹಾಕಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿನ ಆಸ್ಪತ್ರೆಗಳ ಆರೋಗ್ಯ ರಕ್ಷಾ ಸಮಿತಿಗೆ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿಸಿ ಮೆಡಿಕಲ್ ಸೂಪರಿಂಟೆಂಡೆಂಟ್ ಗಳನ್ನು ಸದಸ್ಯ ಕಾರ್ಯದರ್ಶಿಯಾಗಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ನೇಮಕಾತಿಯಿಂದ ಆರೋಗ್ಯ ರಕ್ಷಾ ನಿಧಿಯನ್ನು ಮನಸೋ ಇಚ್ಚೇ ಬಳಸುತ್ತಿದ್ದ ಕಾಲೇಜುಗಳ ನಿರ್ದೇಶಕರ ಮೇಲೆ ಲಗಾಮು ಹಾಕಲು ಸಾಧ್ಯವಾಗಲಿದೆ.
ಸೊಸೈಟಿ ಕಾಯ್ದೆಯಡಿ ನೋಂದಾಯಿತವಾಗಿರುವ ಆರೋಗ್ಯ ರಕ್ಷಾ ಸಮಿತಿಗೆ ತಾಲೂಕು ಆಸ್ಪತ್ರೆಗಳಿಗೆ ಶಾಸಕರು ಅಧ್ಯಕ್ಷರಾಗಿರುತ್ತಾರೆ.
ಜಿಲ್ಲಾಸ್ಪತ್ರೆಯ ಹೊರತು ಪ್ರತ್ಯೇಕ ಮೆಡಿಕಲ್ ಕಾಲೇಜು ಆಸ್ಪತ್ರೆ ಹೊಂದಿರುವ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ.


