ಜೂ ೨೬ರಿಂದ ಮೆಡಿಕಲ್ ಕಾಲೇಜು ಉಳಿಸಲು ಕನ್ನಡಿಗರ ಜಾಗೃತಿ ಆಂದೋಲನಾ
ಮಂಡ್ಯ:ಜೂ.೧೯.ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೮ ಎಕರೆ ಭೂಮಿ ಉಳಿಸಲು ಜೂ೨೬ರಿಂದ ಕನ್ನಡಿಗರ ಜಾಗೃತಿ ಆಂದೋಲನಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು
ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯಲ್ಲಿ ತಮಿಳು ಕಾಲೋನಿ ನಿರ್ಮಿಸಲಾಗಿದೆ. ಈ ನಿವಾಸಿಗಳಿಗಾಗಿ ಮಂಡ್ಯ ಕೆರೆ ಅಂಗಳದ ವಿವೇಕಾನಂದ ಬಡಾವಣೆಯಲ್ಲಿ ರಾಜೀವ್ ಆವಾಸ್ ಯೋಜನೆಯಡಿ ೩೮ ಕೋಟಿ ವೆಚ್ಚದಲ್ಲಿ ೫೭೬ ಮನೆಗಳನ್ನು ನಿರ್ಮಿಸಲಾಗಿದೆ.
ಈ ತಮಿಳು ಕಾಲೋನಿ ನಿವಾಸಿಗಳಿಗೆ ನಾಲ್ಕು ಬಾರಿ ಮನೆಗಳನ್ನು ನಿರ್ಮಿಸಿಕೊಟ್ಟರು ಅಲ್ಲಿಗೆ ತೆರಳದೆ ಮಂಡ್ಯ ಮೆಡಿಕಲ್ ಕಾಲೇಜು ಅಭಿವೃದ್ದಿಯಾಗದಂತೆ ತಡೆ ಒಡ್ಡುತ್ತಲೆ ಬಂದಿದ್ದಾರೆ.ಆ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ತಮಿಳು ಕಾಲೋನಿ ನಿವಾಸಿಗಳು ಸವಾಲೊಡ್ಡುತ್ತಲೆ ಬಂದಿದ್ದು ಈ ಕುರಿತು ಕನ್ನಡಿಗರನ್ನು ಜಾಗೃತಿಗೊಳಿಸಲಾಗುವುದು ಎಂದರು.
ಮೊದಲ ಹಂತದಲ್ಲಿ ನಗರದ ೩೫ ವಾರ್ಡುಗಳಲ್ಲಿ ಬೈಕ್ ಹಾಗೂ ತೆರೆದ ವಾಹನದ ಮೂಲಕ ತೆರಳಿ ಒಂದು ಲಕ್ಷ ಕರಪತ್ರ ಹಂಚಿ ಮೆಡಿಕಲ್ ಕಾಲೇಜು ಅಭಿವೃದ್ದಿಗೆ ಕೈ ಜೋಡಿಸುವಂತೆ ಕನ್ನಡಿಗರಲ್ಲಿ ಮನವಿ ಮಾಡಲಾಗುವುದು.ನಗರದಾದ್ಯಂತ ಪೋಸ್ಟರ್ ಹಾಗೂ ಸ್ಟಿಕ್ಕರ್ ಗಳನ್ನು ಸಹ ಅಳವಡಿಸಿ ಮೆಡಿಕಲ್ ಕಾಲೇಜು ಆಸ್ಪತ್ರೆ ವಿಸ್ತರಣೆ ಹಾಗೂ ಅಭಿವೃದ್ದಿಯ ಮಹತ್ವವನ್ನು ಜಾಗೃತಿಗೊಳಿಸಲಾಗುವುದು ಎಂದರು.
ಮುಂದುವರೆದು ಎರಡನೇ ಹಂತದಲ್ಲಿ ಮಂಡ್ಯ ಗ್ರಾಮಾಂತರ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು.
ಈ ನಡುವೆ ತಮಿಳು ಕಾಲೋನಿ ನಿವಾಸಿಗಳಿಗಾಗಿ ನಿರ್ಮಿಸಿದ ಮನೆಗಳನ್ನು ಅನ್ಯರ ಪಾಲು ಮಾಡಿ ತಮಿಳು ಕಾಲೋನಿ ನಿವಾಸಿಗಳನ್ನು ಆಸ್ಪತ್ರೆ ಸ್ಥಳದಲ್ಲೆ ಉಳಿಸಿ ಓಟ್ ಬ್ಯಾಂಕ್ ರಾಜಕಾರಣ ಮಾಡುವ ಪ್ರಯತ್ನ ಸಾಗಿದೆ.ಇದರ ಭಾಗವಾಗಿ ನಿನ್ನೆ ದಿನ ವಿವೇಕಾನಂದ ಬಡಾವಣೆಯಲ್ಲಿ ತಮಿಳರಿಗೆ ನಿರ್ಮಿಸಿರುವ ಮನೆಗಳನ್ನು ಅನಧಿಕೃತವಾಗಿ ವಶಕ್ಕೆ ಪಡೆಯುವ ಪ್ರಯತ್ನ ನಡೆಸಲಾಗಿದೆ.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಕೋನ ಇಲ್ಲದ ರಾಜಕೀಯ ನಾಯಕರಿಂದಾಗಿ ಮೈಶುಗರ್ ಗೆ ಸೇರಿದ ಸಾವಿರಾರು ಎಕರೆ.ಅಸಿಟೇಟ್ ಕಾರ್ಖಾನೆಗೆ ಸೇರಿದ ೧೨೫ ಎಕರೆ ಕಳೆದುಕೊಂಡಿದ್ದೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮೆಡಿಕಲ್ ಕಾಲೇಜಿಗೆ ಸೇರಿದ ೧೮ ಎಕರೆ ಭೂಮಿಯನ್ನು ಪರರ ಪಾಲಾಗಿಸುವ ಪ್ರಯತ್ನ ನಡೆದಿದೆ.ಇದಕ್ಕೆ ಜಿಲ್ಲೆಯ ಜನರು ಅವಕಾಶ ಕೊಡುವುದಿಲ್ಲ.ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ರಾಜಕೀಯ ಪಕ್ಷಗಳು ಸಂಘಟನೆಗಳು ಈ ಆಂದೋಲನಕ್ಕೆ ಕೈ ಜೋಡಿಸುವಂತೆ ಕೋರಿದರು.
ಈಗಲೂ ಸಹ ತಮಿಳು ಕಾಲೋನಿ ನಿವಾಸಿಗಳು ಜಿಲ್ಲೆಯ ಅಭಿವೃದ್ದಿಗೆ ತಡೆಯೊಡ್ಡದೆ ತಮಗಾಗಿ ನಿರ್ಮಿಸಿರುವ ಮನೆಗಳಿಗೆ ಸ್ವಯಂಪ್ರೇರಿತವಾಗಿ ಸ್ಥಳಾಂತರಗೊಳ್ಳುವಂತೆ ಕೋರುತ್ತೇವೆ.
ಇದರಿಂದ ಮಂಡ್ಯ ನಗರದಲ್ಲಿ ಟ್ರಾಮಾಕೇರ್.ಮಲ್ಟೀ ಸ್ಪೆಶಾಲಿಟಿ ಆಸ್ಪತ್ರೆ. ಹೃದ್ರೋಗ ಆಸ್ಪತ್ರೆ ನಿರ್ಮಾಣ ಸಾಧ್ಯವಾಗಲಿದ್ದು ಜಿಲ್ಲೆಯ ೨೫ ಲಕ್ಷ ನಾಗರೀಕರಿಗೆ ಅನುಕೂಲವಾಗಲಿದೆ.ಮಂಡ್ಯ ನಗರವು ಪ್ರಮುಖ ಜಿಲ್ಲಾ ಕೇಂದ್ರವಾಗಿ ರೂಪುಗೊಳ್ಳಲಿದೆ.ಈಗಾಗಲೇ ಸ್ಥಳವಕಾಶದ ಕೊರತೆಯಿಂದ ೧೦೦ ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಬಿ ಹೊಸೂರು ಕಾಲೋನಿಗೆ ಸ್ಥಳಾಂತರಗೊಂಡಿದೆ ಎಂಬುದನ್ನು ಜಿಲ್ಲೆಯ ಜನರು ಅರಿಯಬೇಕಿದೆ ಎಂದರು.
*ಮನೆಗಳನ್ನು* *ನಿರ್ಮಿಸಿ* :ಮಂಡ್ಯ ನಗರದಲ್ಲಿನ ಬಡವರಿಗಾಗಿ ಶಾಸಕ ರವಿಕುಮಾರ್ ಗಣಿಗರವರು ೫ ಸಾವಿರ ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ.ಶಾಸಕರ ಪ್ರಯತ್ನಕ್ಕೆ ಉಸ್ತುವಾರಿ ಸಚಿವರುಹಾಗೂ ಜಿಲ್ಲಾಡಳಿತ ಸಹ ಕೈ ಜೋಡಿಸಿ ಮಂಡ್ಯ ನಗರವನ್ನು ವಸತಿರಹಿತರ ನಗರವಾಗಿ ರೂಪಿಸಬೇಕೆಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಮುದ್ದೇಗೌಡ.ಶಿವರಾಂ.ಜೋಸೆಫ್.ಚನ್ನಪ್ಪನ ದೊಡ್ಡಿ ನಾಗಣ್ಣ.ಆಟೋ ವೆಂಕಟೇಶ್. ಪ್ರವೀಣ್ ಉಪಸ್ಥಿತರಿದ್ದರು.