ಮಂಡ್ಯ ಮೆಡಿಕಲ್ ಕಾಲೇಜಿನ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಅಡ್ವೋಕೇಟ್ ಮಧ್ಯಪ್ರವೇಶಿಸಲು ಉಸ್ತುವಾರಿ ಸಚಿವರಿಗೆ ಮನವಿ
ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ೧೯ ಎಕರೆ ಭೂಮಿ ತಮಿಳು ಕಾಲೋನಿ ಸೇರಿದಂತೆ ಹಲವರು ಒತ್ತುವರಿ ಮಾಡಿಕೊಂಡಿದ್ದು.ಈ ಸಂಬಂದ ರಾಜ್ಯ ಹೈಕೋರ್ಟಿನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ರಾಜ್ಯ ಸರಕಾರದ ಪರವಾಗಿ ಅಡ್ವೋಕೇಟ್ ಜನರಲ್ ರನ್ನು ಮಧ್ಯಪ್ರವೇಶ ಮಾಡಿಸುವಂತೆ ಉಸ್ತುವಾರಿ ಸಚಿವ ಎನಗ ಚಲುವರಾಯಸ್ವಾಮಿಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಸಲ್ಲಿಸಿದೆ.
ನಗರದ ಜಿಪಂ ಕಚೇರಿ ಬಳಿ ಉಸ್ತುವಾರಿ ಸಚಿವರನ್ನು ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಮ್ ನೇತೃತ್ವದಲ್ಲಿ ಭೇಟಿ ಮಾಡಿ.ತಮಿಳು ಕಾಲೋನಿ ಸೇರಿದಂತೆ ಮೆಡಿಕಲ್ ಕಾಲೇಜಿಗೆ ಸೇರಿದ ಭೂಮಿಯ ಒತ್ತುವರಿ ತೆರವುಗೊಳಿಸಲು ರಾಜ್ಯ ಹೈಕೋರ್ಟಿನ ದ್ವಿಸದಸ್ಯ ಪೀಠ ಆದೇಶ ಮಾಡಿ ಹತ್ತು ವರ್ಷಗಳೇ ಕಳೆದಿವೆ.(WP 15637) ಆದರೂ ಈವರೆಗೂ ಒತ್ತುವರಿ ತೆರವುಗೊಳಿಸಿಲ್ಲ.
ಪರಿಣಾಮ ಮಂಡ್ಯ ಮೆಡಿಕಲ್ ಕಾಲೇಜಿಗೆ ಸಿಗಬಹುದಾಗಿದ್ದ ೫೦ ಹೆಚ್ಚುವರಿ ಮೆಡಿಕಲ್ ಸೀಟುಗಳನ್ನು ನೀಡಲು ರಾಷ್ಟ್ರೀಯ ಮೆಡಿಕಲ್ ಕೌನ್ಸಿಲ್ ನಿರಾಕರಿಸಿದೆ.
ಇದಲ್ಲದೆ ಮೆಡಿಕಲ್ ಕಾಲೇಜು ವಾತಾವರಣ ದಿನೇ ದಿನೇ ಕಿಷ್ಕಿಂಧೆಯಾಗುತ್ತಿದೆ.
ತಮಿಳು ವಾಸಿಗಳು ರಾಜ್ಯ ಹೈಕೋರ್ಟಿನಲ್ಲಿ ಏಕಪೀಠದೆದುರು ಹೊಸದೊಂದು ಪ್ರಕರಣ ದಾಖಲಿಸಿದ್ದು (WP 18622/2023)ರಾಜ್ಯ ಹೈಕೋರ್ಟ್ ತೆರವುಗೊಳಿಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಎರಡು ವರ್ಷ ಕಳೆದಿದೆ.ಈ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಅಗತ್ಯ ಪ್ರಕ್ರಿಯೆ ನಡೆಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತುರ್ತುಸ್ಥಿತಿ ಮನವರಿಕೆ ಮಾಡಿ ಒತ್ತುವರಿ ತೆರವುಗೊಳಿಸಲು ಈ ಪ್ರಕರಣದಲ್ಲಿ ಅಡ್ವೋಕೇಟ್ ಜನರಲ್ ರನ್ನು ಮಧ್ಯಪ್ರವೇಶ ಮಾಡಲು ಅಗತ್ಯ ಕ್ರಮವಹಿಸುವಂತೆ ಕೋರಿದರು.ಈ ಸಂಧರ್ಭದಲ್ಲಿ ಕರವೇ ಆಟೋಘಟಕದ ಸೋಮಶೇಖರ. ವೆಂಕಟೇಶ್. ಶೋಷಿತರ ಒಕ್ಕೂಟದ ರಾಜೇಂದ್ರ ಸಿಂಗ್ ಬಾಬು ಮೊದಲಾದವರಿದ್ದರು.


