ಮೈಸೂರು: ತಾಲ್ಲೂಕಿನ ಮೀನಾಕ್ಷಿಪುರದ ಬಳಿ
ಕೃಷ್ಣರಾಜಸಾಗರ (ಕೆಆರ್‌ಎಸ್) ಹಿನ್ನೀರಿಗೆ ಇಳಿದಿದ್ದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಮಿಮ್ಸ್) ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟರು.
ಹಾವೇರಿಯ ಕೃಷ್ಣ (21), ಪಿರಿಯಾಪಟ್ಟಣ ತಾಲ್ಲೂಕು ಅನಿವಾಳು ಗ್ರಾಮದ ಪ್ರಶಾಂತ್ (21) ಹಾಗೂ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿಯ ಸಿದ್ದೇಶ್ (22) ಮೃತರು. ಮೂವರೂ 2ನೇ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಎಂದು ಇಲವಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಮಧ್ಯಾಹ್ನ 1.30ರ ಸುಮಾರಿಗೆ ನೀರಿಗೆ ಇಳಿದಿದ್ದು, ಈಜು ಬಾರದೇ ಮುಳುಗಿದ್ದಾರೆ. ಮುಳುಗುತಜ್ಞರ ನೆರವಿನಿಂದ ಶವಗಳನ್ನು ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ಹೇಳಿದ್ದಾರೆ.