ಕಾವೇರದ ಕಾವೇರಿ ಕಣಿವೆ.ಮಂಡ್ಯ ಲೋಕಸಭಾ ಕ್ಷೇತ್ರದ ಸದ್ಯದ ಕತೆ
ಕಳೆದ ಲೋಕಸಭಾ ಚುನಾವಣೆಯ ಕಾಲಕ್ಕೆ ಮಂಡ್ಯ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು.ಸ್ವತಃ ಅಂದಿನ ಮುಖ್ಯಮಂತ್ರಿಗಳ ಮಗ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದದ್ದು ಒಂದೆಡೆಯಾದರೆ ಪಕ್ಷೇತ್ತರವಾಗಿ ಕಣಕಿಳಿದಿದ್ದ ಸುಮಲತಾ ಅಂಬರೀಶ್ ಸ್ಪರ್ಧೆ ಮಂಡ್ಯವನ್ನು ಇಂಡ್ಯಾದ ಮಟ್ಟಕ್ಕೆ ಪ್ರಚಾರಕ್ಕೆ ಕೊಂಡೊಯ್ದಿತ್ತು.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಬೀಳಿಸಲು ಬಿಜೆಪಿ ಮಂಡ್ಯ ಕ್ಷೇತ್ರದ ಫಲಿತಾಂಶವನ್ನು ಸೆಮಿಫೈನಲ್ ಆಗಿ ಪರಿಗಣಿಸಿತ್ತು.
ಅಂದುಕೊಂಡತೆಯೆ ಫಲಿತಾಂಶ ಹೊರಬೀಳುತ್ತಿದ್ದಂತೆ ದೇವೆಗೌಡರು ತುಮಕೂರಿನಲ್ಲಿ ಮಂಡ್ಯದಲ್ಲಿ ನಿಖಿಲ್ ಸೋಲನ್ನಪ್ಪಿದ್ದರು. ಕುಮಾರಸ್ವಾಮಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸರಕಾರ ಕೆಡವಲು ಮೀಡಿಯಾ ಮತ್ತು ಬಿಜೆಪಿ ಜಂಟೀ ಕಾರ್ಯಚರಣೆ ನಡೆಸುತ್ತಿದ್ದವು.ಈ ಸೋಲು ಆಪರೇಷನ್ ಕಮಲಕ್ಕೆ ನಾಂದಿಯಾಡಿತು.ಕುಮಾರಸ್ವಾಮಿ ಸರಕಾರವನ್ನು ಬಿಜೆಪಿ ಪತನಗೊಳಿಸಿತು.
ಅಂದಿನ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಮಂಡ್ಯ ಕ್ಷೇತ್ರದಲ್ಲಿ ಮಾತಿಗೆ ಮಾತು. ಸೇರಿಗೆ ಸವ್ವಾಸೇರು ಎಂಬಂತೆ ನಡೆದು ಇಡೀ ಲೋಕಸಭಾ ಕ್ಷೇತ್ರ ಅಕ್ಷರಶಃ ರಣ ಕದನವಾಗಿತ್ತು.ಸಿನಿಮಾ ನಟರಾದ ದರ್ಶನ್ ಯಶ್ ಆಗಮನ ಕಣಕ್ಕೆ ಗ್ಲಾಮರ್ ತಂದುಕೊಟ್ಟಿತ್ತು.ಆದರೆ ಈ ಐದು ವರ್ಷಗಳಲ್ಲಿ ಮಂಡ್ಯ ಹಾದುಹೋಗುವ ಕಾವೇರಿಯಲ್ಲಿ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಗಿದೆ.ಅಂತೆಯೆ ಮಂಡ್ಯದ ರಾಜಕಾರಣದಲ್ಲು ಸಾಕಷ್ಟು ಬದಲಾವಣೆಗಳಾಗಿವೆ.ಐದು ವರ್ಷದ ಆಡಳಿತದ ಅವಧಿಯುದ್ದಕ್ಕು ದಳಪತಿಗಳೊಂದಿಗೆ ಸಂಘರ್ಷ ನಡೆಸಿದ ಸುಮಲತಾ ಅಂಬರೀಶ್ ಈಗ ಕುಮಾರಸ್ವಾಮಿ ಪಾಲಿಗೆ ಅಕ್ಕಾ ಆಗಿದ್ದಾರೆ.ನಾಮಪತ್ರ ಸಲ್ಲಿಕೆಯ ಸಂಧರ್ಭದಲ್ಲಿ ಯಾರನ್ನು ಬಾಂಬೆಕಳ್ಳ ಎಂದು ಚಪ್ಪಲಿ ತೂರಲಾಯಿತೋ ಅದೇ ನಾರಯಣಗೌಡ ಈಗ ಬಿಜೆಪಿ ಜ್ಯಾದಳ ಮೈತ್ರಿ ಪರ ಪ್ರಚಾರ ಮಾಡುವಂತಾಗಿದೆ.ಸ್ವತಃ ಕುಮಾರಸ್ವಾಮಿ ಸರಕಾರ ಕೆಡವಿದ ಬಿಜೆಪಿ ಈಗ ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದೆ.ಆಪರೇಷನ್ ಕಮಲಕ್ಕೆ ಬಲಿಯಾಗಿ ಸರಕಾರ ಕೆಡವಲು ಕಾರಣವಾಗಿದ್ದ ಹಳ್ಳೀಹಕ್ಕೀ ಎಚ್ ವಿಶ್ವನಾಥ್ ಜ್ಯಾದಳ ಗೂಡಿಗೆ ಮರಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಓಡಾಡಿದ್ದ ಇಂಡುವಾಳು ಸಚ್ಚಿದಾನಂದ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.ಮದ್ದೂರಿನ ಸಾದೊಳಲು ಸ್ವಾಮಿ ಸಹ ಕುಮಾರಸ್ವಾಮಿ ಪಡಶಾಲೆಗೆ ಬಂದು ನಿಂತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯವೆದ್ದು ಜ್ಯಾದಳ ಅಭ್ಯರ್ಥಿಗೆ ಮುಳುಗು ನೀರು ತಂದ ಕೆಎಸ್ ವಿಜಯಾನಂದ ಮರಳಿ ತೆನೆ ಹೊತ್ತಿದ್ದಾರೆ.ಸುಮಲತಾ ಅಂಬರೀಶ್ ಪರ ಹೋರಾಟಕ್ಕೆ ಸ್ವಾಭಿಮಾನದ ಕಿಡಿ ಹಚ್ಚಿದ ಡಾ.ರವೀಂದ್ರ. ಚಲುವರಾಯಸ್ವಾಮಿಯೊಂದಿಗೆ ಮುನಿಸಿಕೊಂಡು ನೈಜ ಕಾಂಗ್ರೇಸಿಗರು ಅಂಥ ಹೊಸದೊಂದು ಹಣಾಹಣಿಗೆ ವೇದಿಕೆ ಸಿದ್ದ ಮಾಡುತ್ತಿದ್ದಾರೆ.ಇದು ಸಹ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಲಿದೆ.
ಇಂಥ ಹೊತ್ತಿನಲ್ಲಿ ಕುಮಾರಸ್ವಾಮಿ ಜ್ಯಾದಳ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಮಂಡ್ಯಕ್ಕೆ ಬರುವಾಗಲೆ ಕುಮಾರಸ್ವಾಮಿ ಅನುಮತಿ ಪಡೆದೆ ಮಂಡ್ಯದಲ್ಲಿ ಕಣಕಿಳಿಯುವ ತೀರ್ಮಾನ ಮಾಡಿದ್ದು.ಕುಮಾರಸ್ವಾಮಿ ಸ್ಪರ್ಧಿಸಿದರೆ ತಾನು ಕೈ ಅಭ್ಯರ್ಥಿಯಾಗಲಾರೆ ಎಂದಿದ್ದ ಚಂದ್ರುಗೆ ಮಂಡ್ಯಕ್ಕೆ ತಾನೂ ಬರುವುದಿಲ್ಲವೆಂದೆ ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದರು.ಎಲ್ಲರೊಂದಿಗೂ ಸಮಾನ ವ್ಯವಹಾರಿಕ ನಂಟು ಹೊಂದಿರುವ ಚಂದ್ರು ಈ ಭರವಸೆಯ ಮೇಲೆಯೆ ಚುನಾವಣೆಗೂ ಮುಂಚೆ ಕ್ಷೇತ್ರ ಪ್ರವಾಸ ಶುರು ಮಾಡಿದ್ದರು ಎಂಬುದು ಕೈ ಅಂತರಿಕ ವಲಯದ ಚರ್ಚೆ.ಚಂದ್ರು ಸ್ಪರ್ಧೆ ಬಿಗಿಯಾಗುತ್ತಿದ್ದಂತೆ ಎಚ್ಚೆತ್ತ ದಳಪತಿಗಳು ಪುಟ್ಟರಾಜು ಬದಲು ಕುಮಾರಸ್ವಾಮಿಯನ್ನೆ ಅಭ್ಯರ್ಥಿಯಾಗಿಸಿದರು.
ಮಂಡ್ಯದಲ್ಲಿ ಚುನಾವಣೆ ಎಂದರೆ ಮಾತು.ಮಾತಿಗೆ ಮಾತು ಇರಲೇಬೇಕು. ಆದರೆ ಈ ಸಾರಿ ಕುಮಾರಸ್ವಾಮಿ ವಿರುದ್ದ ಯಾವುದೆ ಟೀಕೆ ಟಿಪ್ಪಣಿ ಮಾಡದೆ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ನಡೆಸುವುದು ಚಲುವರಾಯಸ್ವಾಮಿ ಲೆಕ್ಕಾಚಾರ. ಕಳೆದ ಲೋಕಸಭಾ ಚುನಾವಣೆಯ ಕಾಲಕ್ಕೆ ಸುಮಲತಾ ಅಂಬರೀಶ್ ಮೇಲೆ ಮುಗಿಬಿದ್ದ ಪರಿಣಾಮ ನೋಡಿಯಾಗಿತ್ತಲ್ಲ.ಅದೇ ಕಾರಣಕ್ಕೆ ಕೈ ನಾಯಕರು ಕುಮಾರಸ್ವಾಮಿ ವಿರುದ್ದ ಯಾವುದೆ ಟೀಕೆ ಟಿಪ್ಪಣಿ ಆಗದಂತೆ ನೋಡಿಕೊಂಡರು.ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು.ಮದ್ದೂರು ಶಾಸಕ ಉದಯ್ ಕದಲೂರು ಮಾತುಗಳು ಕಿಡಿಹಚ್ಚಿದ್ದು ಸುಳ್ಳಲ್ಲ.ಮಳವಳ್ಳಿಯ ನರೇಂದ್ರ ಸ್ವಾಮಿಯ ಮಾತುಗಳು ಸಹ ಕೈ ಅಭ್ಯರ್ಥಿಗೆ ಬಿಸಿತುಪ್ಪವಾಗಿದೆ.
ನಾಮಪತ್ರ ಸಲ್ಲಿಸಿ ಐದು ದಿನಗಳು ಕಳೆದರು ಜಿಲ್ಲೆಯಲ್ಲಿ ಕುಮಾರಸ್ವಾಮಿ ಯಾವುದೆ ಸಭೆ ಪ್ರಚಾರ ನಡೆಸಿಲ್ಲ.ಸ್ಟಾರ್ ಚಂದ್ರು ಅಲ್ಲಲ್ಲಿ ರೋಡ್ ಷೋ ನಡೆಸುತ್ತಾ ಸಾಗಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರ ಕಾವೇರದಿರಲು ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಸಭ್ಯರೆ ಆದರೂ ಕ್ಷೇತ್ರದಲ್ಲಿ ಜನಸಂಪರ್ಕ ಅಷ್ಟಕಷ್ಟೆ.ಅದಲ್ಲದೆ ವಾಗ್ಮೀಯೇನು ಅಲ್ಲದ ಚಂದ್ರು ಮತದಾರರೊಂದಿಗೆ ಸಂವಹನ ಎರ್ಪಡಿಸಿಕೊಳ್ಳುವಲ್ಲಿ ಇನ್ನು ಪ್ರಾಥಮಿಕ ಹಂತದಲ್ಲಿದ್ದಾರೆ.ಕೈನಲ್ಲಿ ಇಡೀ ಲೋಕಸಭಾ ಕ್ಷೇತ್ರಕ್ಕೆ ಒಪ್ಪುವಂತ ನಾಯಕತ್ವದ ಕೊರತೆಯಿದೆ. ಸದ್ಯ ಅಹಿಂದ ಮತಗಳು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪರವಾಗಿ ಧ್ರುವೀಕರಣವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದ ಪೈಕಿ ಏಳರಲ್ಲಿ ಕೈ ಶಾಸಕರೆ ಇದ್ದಾರೆ.ಗ್ಯಾರಂಟಿ ಯೋಜನೆಗಳು.ಕೈ ಅಭ್ಯರ್ಥಿ ಬೀಡು ಬೀಸಾಗಿ ಫಂಡಿಂಗ್ ಮಾಡುವ ಭರವಸೆ ಕಾಂಗ್ರೇಸ್ ನ ಆತ್ಮವಿಶ್ವಾಸಕ್ಕೆ ಕಾರಣವಾಗಿವೆ.
ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ನಾಯಕನಾಗಿರುವುದು.ಬೂತ್ ಮಟ್ಟದಲ್ಲಿ ಬಲವಾದ ಜ್ಯಾದಳ ಪಕ್ಷ ಸಂಘಟನೆ.ಬಿಜೆಪಿಯ ಬೆಂಬಲ ಜ್ಯಾದಳಕ್ಕೆ ಅನುಕೂಲಕರವಾಗಿದೆ.ಒಕ್ಕಲಿಗ ಸಮುದಾಯದ ಮತಗಳನ್ನು ಒಗ್ಗೂಡಿಸುವಲ್ಲಿ ಜ್ಯಾದಳ ಸಹ ನಿರತವಾಗಿದೆ.ಸದ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಒಂದು ಸಣ್ಣ ಮಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಮುಂದಿದ್ದಾರೆ.
ಜ್ಯಾದಳದ ಮುನ್ನಡೆಯನ್ನು ಕೈ ಅಭ್ಯರ್ಥಿ ಮೆಟ್ಟುವರೆ ಇಲ್ಲವೆ ಹಿಂದಕ್ಕೆ ಅಟ್ಟಲ್ಪಡುವರೆ ಎಂಬುದು ಯುಗಾದಿ ನಂತರದ ವಿದ್ಯಮಾನಗಳು ನಿರ್ಧರಿಸಲಿವೆ