ಸೇವೆಯಲ್ಲಿದ್ದಾಗ ಮೃತಪಟ್ಟ ಗುತ್ತಿಗೆ ನೌಕರನ ವಾರಸುದಾರರು ಅನುಕಂಪದ ಉದ್ಯೋಗಕ್ಕೆ ಅರ್ಹರು: ಹೈಕೋರ್ಟ್ – COMPASSIONATE JOB
ಸೇವೆಯಲ್ಲಿದ್ದಾಗಲೇ ಮೃತಪಟ್ಟ ಗುತ್ತಿಗೆ ನೌಕರನ ವಾರಸುದಾರರು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು: ಸರ್ಕಾರದ ಅಧೀನದ ಪ್ರಾಧಿಕಾರಗಳಲ್ಲಿ ಗುತ್ತಿಗೆ ನೌಕರರಾಗಿದ್ದು, ಮೃತಪಟ್ಟ ನಂತರ ಅವರ ವಾರಸುದಾರರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ನೀಡಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.ಬಂಕಾಪುರ ಪಟ್ಟಣ ಪಂಚಾಯತಿಯಲ್ಲಿ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸಿ ಮೃತರಾಗಿದ್ದ ನಿಂಗಪ್ಪ ಬಡಿಗೇರ್ ಎಂಬವರ ವಾರಸುದಾರರು ಅನುಕಂಪದ ಆಧಾರದ ಉದ್ಯೋಗ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.1995ರಿಂದ ಅರ್ಜಿದಾರರ ತಂದೆ ಬಂಕಾಪುರ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿ ನೇಮಕವಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಮೃತಪಡ್ಡಿದ್ದಾರೆ. ಆದರೆ, 1997ರ ಜನವರಿ 2ರಂದು ಗುತ್ತಿಗೆ ನೌಕರರಾಗಿದ್ದವರನ್ನು ಸೇವೆಯಲ್ಲಿದ್ದವರ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಕೋರುವ ಅರ್ಜಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ. ಹೀಗಾಗಿ, ಅರ್ಜಿದಾರರನ್ನು ಅನುಕಂಪದ ಉದ್ಯೋಗದಲ್ಲಿ ನೇಮಕ ಮಾಡಲು ಅರ್ಹರಾಗಿದ್ದಾರೆ ಎಂದು ಪೀಠ ತಿಳಿಸಿದೆ.ಹಿಂಬರಹ ರದ್ದು:ಅಲ್ಲದೇ, ಅರ್ಜಿದಾರರ ತಂದೆ ಮೃತರಾದ 45 ದಿನಗಳಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಮನವಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು 8 ವರ್ಷಗಳ ಕಾಲ ಬಾಕಿ ಉಳಿಸಿಕೊಂಡು ಅಂತಿಮವಾಗಿ ತಿರಸ್ಕರಿಸಲಾಗಿದೆ. ಆದ್ದರಿಂದ ಅರ್ಜಿ ಪುರಸ್ಕರಿಸುತ್ತಿದ್ದು, ಖಾಯಂ ಉದ್ಯೋಗಿಯಲ್ಲ ಎಂಬುದಾಗಿ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿ ಆದೇಶಿಸಿದೆ.ಅಲ್ಲದೆ, ಅರ್ಜಿದಾರರ ಪ್ರಕರಣವನ್ನು ಮರು ಪರಿಶೀಲನೆ ನಡೆಸಿದ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಸಂಬಂಧ ಅಗತ್ಯ ದಾಖಲೆಗಳನ್ನು ಪಡೆದು, ಕಾನೂನು ಪ್ರಕಾರವಾಗಿ ಸೂಕ್ತ ಆದೇಶ ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ನಿಂಗಪ್ಪ ಬಡಿಗೇರ್ ಬಂಕಾಪುರ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ದಿನಗೂಲಿ ಆಧಾರದ ಮೇಲೆ 1995ರಲ್ಲಿ ನೇಮಕವಾಗಿದ್ದರು. ಈ ನಡುವೆ 2012ರ ಮಾರ್ಚ್ 4 ರಂದು ಮೃತಪಟ್ಟಿದ್ದರು. ತಂದೆಯ ಮರಣಾನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಿ 2012ರ ಏಪ್ರಿಲ್ 29ರಂದು ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ:ಮಾಹಿತಿ ಹಂಚಿಕೆ ನಿರ್ಬಂಧ: ಕೇಂದ್ರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಕ್ಸ್ ಕಾರ್ಪ್ಆದರೆ, ಬಂಕಾಪುರ ಪಟ್ಟಣ ಪಂಚಾಯತ್ ಸುಮಾರು 8 ವರ್ಷಗಳು ಕಳೆದರೂ ಯಾವುದೇ ಆದೇಶ ಹೊರಡಿಸಿರಲಿಲ್ಲ. ಅದಾದ ಬಳಿಕ ಅರ್ಜಿದಾರರನ್ನು ಕಾಯಂ ಉದ್ಯೋಗಿಯನ್ನಾಗಿ ನೇಮಕ ಮಾಡಿಲ್ಲ. ಹೀಗಾಗಿ, ಅರ್ಜಿದಾರರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುವುದಿಲ್ಲ ಎಂದು ತಿಳಿಸಿ 2020ರ ಅಕ್ಟೋಬರ್ 6ರಂದು ಹಿಂಬರಹ ನೀಡಿದ್ದರು.ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ”ಸೇವೆಯಲ್ಲಿದ್ದಾಗ ಮರಣ ಹೊಂದಿದ ದಿನಗೂಲಿ ಕಾರ್ಮಿಕರ ವಾರಸುದಾರರಿಗೆ ಅನುಕಂಪದ ನೇಮಕಾತಿಗಳನ್ನು ಪರಿಗಣಿಸಬೇಕು ಎಂಬುದಾಗಿ ಆದೇಶವನ್ನು ಹೊರಡಿಸಿತ್ತು ರಾಜ್ಯ ಸರ್ಕಾರ 1997ರ ಜನವರಿ 2ರಂದು ಸುತ್ತೋಲೆ ಹೊರಡಿಸಿದೆ. ಹೀಗಾಗಿ, ಅರ್ಜಿಯನ್ನು ಅಂಗೀಕರಿಸಬೇಕು” ಎಂದು ಕೋರಿದ್ದರು.