Siddaramaiah ರವರೇ
ಮೆಟ್ರೊ ದರ ಏರಿಕೆ ಬಗ್ಗೆ ನಿಮ್ಮ ಪೆಸ್ಬುಕ್ ಅಕೌಂಟ್ ನಲ್ಲಿ ನಿಮ್ಮ ಕಡೆಯ ವಾದವನ್ನು ರಾಜ್ಯದ ಜನರ ಮುಂದೆ ಇಟ್ಟಿರುವುದು ಒಳ್ಳೆಯ ಬೆಳವಣಿಗೆ.
1. ನಮ್ಮ ಮೆಟ್ರೊ ಗೆ ರಾಜ್ಯ ಮತ್ತು ಒಕ್ಕೂಟ ಸರ್ಕಾರ (50:50) ಸಮಪಾಲು ಇದೆ ಎಂದು ನೀವೇ ಹೇಳುತ್ತಿದ್ದಿರಿ. ಕರ್ನಾಟಕ ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿ ಎರಡನೇ ಸ್ತಾನದಲ್ಲಿ ಇದೆ. ಇದರ ಅರ್ತ ಒಕ್ಕೂಟ ಸರ್ಕಾರದ 50 ರಸ್ಟು ಬಂಡವಾಳ ಕೂಡ ರಾಜ್ಯದಿಂದ ಸಂಗ್ರಹವಾದ ತೆರಿಗೆ ದುಡ್ಡಿನಿಂದಲೇ ಹಾಕಿರೋದು. ಲಾಜಿಕ್ ಪ್ರಕಾರ 100 ರಸ್ಟು ಬಂಡವಾಳ ಕೇವಲ ಬೆಂಗಳೂರಿನ ಜನರದು ಮಾತ್ರವಲ್ಲ ಏಳು ಕೋಟಿ ಕನ್ನಡಿಗರ ಬಂಡವಾಳ.
2. ನಮ್ಮದೇ ಬಂಡವಾಳ ಹಾಕಿ ಮೆಟ್ರೊ ಮಾಡಿಕೊಂಡ ಮೇಲೆ ಆ ಮೆಟ್ರೊ ದ ನಿರ್ವಹಣೆ ಮತ್ತು ದರ ನಿಗದಿಯ ಅದಿಕಾರ ರಾಜ್ಯ ಸರ್ಕಾರದ್ದೆ ಆಗಿರಬೇಕಿತ್ತು. ಆದರೆ ಆ ಅದಿಕಾರವನ್ನು ನೀವು ಅಂದರೆ ರಾಜ್ಯ ಸರ್ಕಾರ ಒಕ್ಕೂಟ ಸರ್ಕಾರಕ್ಕೆ ಬಿಟ್ಟು ಕೊಟ್ಟದ್ದು ಏಕೆ. ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿ ಅಲ್ಲವೇ.
3. ನಿಮ್ಮ ವಿವರಣೆಯ ಪ್ರಕಾರ ಮೆಟ್ರೊ ನಿರ್ವಹಣೆಯಲ್ಲಿ ರಾಜ್ಯದ ಅದಿಕಾರಿಗಳು ಇದ್ದಾರೆ. ಈ ಅದಿಕಾರಿಗಳು ದರ ಏರಿಕೆ ಮಾಡುವಾಗ ಏಕೆ ಪ್ರತಿಬಟಿಸಲಿಲ್ಲ. ಪ್ರತಿಬಟನೆ ಮಾಡಿದ್ದರೆ ಅದನ್ನು ಏಕೆ ರಾಜ್ಯದ ಜನರ ಗಮನಕ್ಕೆ ತರಲಿಲ್ಲ.
4. ನೀವು ಏಕೆ ಇದುವರೆಗೂ ಒಕ್ಕೂಟ ಸರ್ಕಾರದ ಕೇಂದ್ರಿಕರಣದ ವಿರುದ್ಧ ತಮ್ಮ ಪ್ರತಿಬಟನೆಯನ್ನು ದಾಕಲಿಸಿಲ್ಲ.
5. ನಮ್ಮದೇ ಬಂಡವಾಳದಲ್ಲಿ ಮೆಟ್ರೊ ಕಾಮಗಾರಿ ಮಾಡಿ ಈಗ ನಮ್ಮ ಕೈಯಲ್ಲಿ ಏನೂ ಇಲ್ಲ ಎಲ್ಲ ಒಕ್ಕೂಟ ಸರ್ಕಾರದ್ದು ಅಂತ ನೀವು ಹೇಳುವುದಾದರೆ ನೀವು ಏಕೆ ರಾಜ್ಯದ ಮುಕ್ಯಮಂತ್ರಿ ಆಗಿ ಮುಂದುವರೆಯಬೇಕು.
6. ನೀವು ನಿಜವಾಗಿಯೂ ರಾಜ್ಯದ ಜನರ ಹಿತ ಕಾಪಾಡುವವರು ಆದರೆ ಈ ಕ್ಶಣದಲ್ಲೆ ಮೆಟ್ರೊ ನಿರ್ವಹಣೆಯನ್ನು ರಾಜ್ಯದ ಸರ್ಕಾರದ ಕೆಳಗೆ ತರಬೇಕು. ನಮ್ಮದೇ ಬಂಡವಾಳವನ್ನು ಹಾಕಿ ಒಕ್ಕೂಟ ಸರ್ಕಾರಕ್ಕೆ ನಮ್ಮ ಜುಟ್ಟು ಕೊಟ್ಟಿದ್ದು ನೀವು ಅಂದರೆ ರಾಜ್ಯ ಸರ್ಕಾರ ಮಾಡಿರುವ ಗನಗೋರ ತಪ್ಪು ಅಲ್ಲವೇ.
ಮೆಟ್ರೊ ದರ ಏರಿಕೆ ವಿಚಾರದಲ್ಲಿ ನೀವು ಅಂದರೆ ರಾಜ್ಯ ಸರ್ಕಾರ ಮೊದಲ ತಪ್ಪಿತಸ್ತರು. ಆದ್ದರಿಂದ ಅದಸ್ಟು ಬೇಗ ಆಗಿರುವ ತಪ್ಪನ್ನು ತಿದ್ದಿಕೊಂಡು ದರ ಏರಿಕೆಯನ್ನು ಇಳಿಸಿ. ನಮ್ಮದು ಏನಿಲ್ಲ ಎಲ್ಲ ಒಕ್ಕೂಟ ಸರ್ಕಾರದ್ದು ಅಂತ ನೀವು ಅನ್ನುವುದಾದರೆ ದಯವಿಟ್ಟು ರಾಜೀನಾಮೆ ಕೊಟ್ಟು ಬುಡಿ. ಯಾರು ಒಕ್ಕೂಟ ಸರ್ಕಾರದ ಕೇಂದ್ರಿಕರಣದ ವಿರುದ್ದ ಹೋರಾಟ ಮಾಡುತ್ತಾರೆ ಅಂತಹವರನ್ನು ನಾವು ರಾಜ್ಯದ ಮುಕ್ಯಮಂತ್ರಿ ಮಾಡಿಕೊಳ್ಳುತ್ತೇವೆ.