ರೋ(ಸಿಂ)ಹಿಣಿ ಲೂಟಿ!….
ಕೊರೊನಾ ಸಂದರ್ಭದಲ್ಲಿ ಮೈಸೂರು ನಗರ ಪಾಲಿಕೆಯಿಂದ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಮತ್ತು ಸರ್ಕಾರದ ಹಣ ದುರುಪಯೋಗ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.
ತಮ್ಮ ವಿರುದ್ಧದ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ರೋಹಿಣಿ ಸಿಂಧೂರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.
ಏನಿದು ಪ್ರಕರಣ.
ಮೈಸೂರು ಮಹಾನಗರ ಪಾಲಿಕೆಯ ಈ ಬಟ್ಟೆ ಬ್ಯಾಗ್ ಖರೀದಿ ಪ್ರಕರಣವು ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ ಘಟನೆ.
ಸುಮಾರು 14 ಲಕ್ಷ ಬಟ್ಟೆ ಬ್ಯಾಗ್‌ಗಳನ್ನು ತಲಾ 10 ರಿಂದ 13 ರೂಪಾಯಿ ದರದಲ್ಲಿ ಖರೀದಿಸಲು ಉದ್ದೇಶಿಸಲಾಗಿತ್ತು. ಆದರೆ, ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಇವುಗಳನ್ನು ಖರೀದಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (KTPP Act) ಅಡಿಯಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸದೆ, ನೇರವಾಗಿ ಖರೀದಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಸರ್ಕಾರದ ಅಥವಾ ಪಾಲಿಕೆಯ ಕೌನ್ಸಿಲ್‌ನ ಪೂರ್ವಾನುಮತಿ ಪಡೆಯದೆ ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಿದರು.
ಸಿಂಹಿಣಿ, ಸಿಂಗಂ, ಸಿಂಹ ಅಂತೆಲ್ಲಾ ಪೋಸು ಕೊಡುವ ಅಸಲಿ ಮುಖ ಬಯಲಿಗೆ ಬರುತ್ತಿದೆ. ಹಿಂದೆ ಈ ವಿಚಾರವಾಗಿ
ಪಾರದರ್ಶಕ ತನಿಖೆಯನ್ನು ಈಗಿನ ಲೋಕಾಯುಕ್ತ ತನಿಖೆ ಮಾಡಲೂ ಸಾಧ್ಯವೇ ಎಂಬುದು ಈಗ ಪ್ರಶ್ನೆ.


