Thursday, March 5, 2026
spot_img

ಲೋಕಾಯುಕ್ತ ಧಾಳಿ:ಮನೆ ಬಾಗಿಲು ತೆಗೆಯದ ಪಾಲಿಕೆ ಅಧಿಕಾರಿ

ಬಾಗಿಲು ತಗಿಯಪ್ಪ ಸ್ವಲ್ಪ
ಯಾರು? ಲೋಕಾಯುಕ್ತ..!
ನಾನು ತಗಿಯಲ್ಲ ಅಂದ್ರೆ ತಗಿಯಲ್ಲ😂

ಹಾಸನದಲ್ಲಿ ಮಹಾನಗರಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸತ್ಯನಾರಾಯಣ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಬೆಳ್ಳಂಬೆಳಗ್ಗೆ ಹಾಸನ ಹಾಗೂ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.

ಅಧಿಕಾರಿಗಳು ಮನೆ ಬಾಗಿಲು ತೆರೆಯದೇ ಒಳಗಡೆ ಕುಳಿತಿದ್ದು, ಲೋಕಾಯುಕ್ತ ಅಧಿಕಾರಿಗಳು ಮನೆ ಬಾಗಿಲು ತೆರೆಯುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.

ಮನೆ ಮೇಲೆ ಹೋಗಲು ಅಧಿಕಾರಿಗಳ ಹರಸಾಹಸಪಡುತ್ತಿದ್ದು, ಜೀಪ್ ಮೇಲೆ ಹತ್ತಿ ಮೊದಲನೆ ಮಹಡಿಗೆ ಹೋಗಿದ್ದಾರೆ. ನಂತರ ಬಾಗಿಲು ಬಡಿದರು ಮನೆಯಿಂದ ಯಾರೂ ಹೊರಗೆ ಬಂದಿಲ್ಲ. ಹೀಗಾಗಿ ಮನೆ ಬಾಗಿಲು ತೆಗೆಯುವುದಕ್ಕೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಕಳೆದ ಅರ್ಧ ಗಂಟೆಯಿಂದ ಅಧಿಕಾರಿ ಮನೆ ಮುಂದೆ ಲೋಕಾಯುಕ್ತ ಅಧಿಕಾರಿಗಳು ಕಾದು ಕುಳಿತಿದ್ದಾರೆ. ಸತ್ಯನಾರಾಯಣ ಅವರು ಹಾಸನ ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಸುರೇಶ್, ಇನ್ಸ್ ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದೆ.

ಹಾಗೆಯೇ ಬಾಗಲಕೋಟೆಯಲ್ಲೂ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ‌ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ ಅವರ ಬೆಂಗಳೂರು ಹಾಗೂ ಬಾಗಲಕೋಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ.

ವಸಂತ ಸಹೋದರ ಭೀಮಸಿಂಗ್ ನಾಯಕ್ ಅವರ ಬಾಗಲಕೋಟೆ ಮನೆ ಮೇಲೆ ದಾಳಿ ನಡೆದಿದೆ. ಭೀಮಸಿಂಗ್ ನಾಯಕ ಬಾಗಲಕೋಟೆ ಡಿಎಆರ್‌ನಲ್ಲಿ ಎಎಸ್‌ಐ ಆಗಿದ್ದಾರೆ. ಬಾಗಲಕೋಟೆಯ ಪೋಸ್ಟಲ್‌ ಕಾಲೋನಿಯಲ್ಲಿರುವ ಭೀಮಸಿಂಗ್ ಮನೆ ಮೇಲೆ ದಾಳಿ ನಡದಿದೆ.

ಹಾಗೆಯೇ ವಸಂತ ನಾಯಕ ಅವರ ಮೂಲ ಗ್ರಾಮ ಬಾಗಲಕೋಟೆ ತಾಲೂಕಿನ ಬಸವನಗರ ತಾಂಡಾದಲ್ಲಿರುವ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆ ಲೋಕಾಯುಕ್ತ ಎಸ್ ಪಿ ಮಾನಿಂಗ್ ನಂದಗಾವಿ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!