Monday, April 6, 2026
spot_img

ಸರ್ಕಾರಿ ಕಚೇರಿಗಳಲ್ಲಿ ‘ಲೋಕಾಯುಕ್ತ ಸಹಾಯವಾಣಿ ಕಡ್ಡಾಯ:ಮು.ಕಾ ಆದೇಶ

ಸರ್ಕಾರದ ಎಲ್ಲಾ ಕಛೇರಿಗಳಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಾಯವಾಣಿ ಸಂಖ್ಯೆಯನ್ನೊಳಗೊಂಡ ಪ್ರದರ್ಶನ ಫಲಕಗಳನ್ನು ಅಳವಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ

 

ದಾವಣಗೆರೆ: ರಾಜ್ಯ ಸರ್ಕಾರದ ಎಲ್ಲಾ ಕಛೇರಿಗಳಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಾಯವಾಣಿ ಸಂಖ್ಯೆಯನ್ನೊಳಗೊಂಡ ಪ್ರದರ್ಶನ ಫಲಕಗಳನ್ನು ಅಳವಡಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ದಿನಾಂಕ: 30-03-2026 ರಂದು ಸುತ್ತೋಲೆ ಹೊರಡಿಸಿದ್ದಾರೆ.

*ಸುತ್ತೋಲೆಯಲ್ಲಿರುವ ಸೂಚನೆಗಳೇನು*

ಸರ್ಕಾರದ ದಿನಾಂಕ:13-08-2024 ರ ಸುತ್ತೋಲೆಯಲ್ಲಿ ಲೋಕಾಯುಕ್ತ ಸಂಸ್ಥೆಯ ರಚನೆ ಕಾರ್ಯವ್ಯಾಪ್ತಿ, ವಿಳಾಸಗಳು, ಕಾರ್ಯನಿರ್ವಹಣಾ ರೀತಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖೆ/ ಕಛೇರಿ/ ಸಂಸ್ಥೆ/ ಪಾಲಿಕೆ/ ನಗರಸಭೆ/ ನಿಗಮ ಮಂಡಳಿಗಳ ಪ್ರವೇಶ ದ್ವಾರ ಹಾಗೂ ಸದರಿ ಕಛೇರಿಗಳಿಗೆ ಬರುವ ಸಾರ್ವಜನಿಕರಿಗೆ ಮುಕ್ತವಾಗಿ ಕಾಣುವಂತಹ ತೆರೆದ ಸ್ಥಳಗಳಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಹಾಯವಾಣಿ ಸಂಖ್ಯೆಗಳಾದ 080-22375014 ಮತ್ತು 080-22011298 Toll Free from Mobile Phones-18004255320 ಹಾಗೂ ಸಿ.ಯು.ಜಿ. ಸಿಮ್‌ ಗಳ ಸಂಖ್ಯೆ ಮತ್ತು ಆಯಾ ಜಿಲ್ಲೆಯಲ್ಲಿರುವ ಲೋಕಾಯುಕ್ತ ಜಿಲ್ಲಾ ಪೋಲೀಸ್ ಠಾಣೆಯ ಸ್ಥಿರ ದೂರವಾಣಿ ಸಂಖ್ಯೆ ಮತ್ತು ಪೋಲೀಸ್ ಅಧಿಕಾರಿಗಳ ಸಿ.ಯು.ಜಿ. ಸಿಮ್ ಗಳ ಮಾಹಿತಿಯನ್ನೊಳಗೊಂಡ ಫಲಕಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.

*2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸು ಏನು*

2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಮೊದಲನೇ ವರದಿಯ ಚಾಪ್ಟರ್-2ರಲ್ಲಿನ ಕ್ರಮ ಸಂಖ್ಯೆ:112ರಲ್ಲಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಬಹುದಾದ ಫಲಕಗಳ ಕುರಿತು ಶಿಫಾರಸ್ಸು ಮಾಡಿರುತ್ತದೆ.
ಅದರಂತೆ, ಎಲ್ಲಾ ಸರ್ಕಾರಿ ಇಲಾಖೆಗಳು/ಸಂಸ್ಥೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಕೆಳಕಂಡ ನಮೂನೆಯಂತೆ ಪ್ರದರ್ಶನ ಫಲಕದಲ್ಲಿ ಪ್ರದರ್ಶಿಸತಕ್ಕದ್ದೆಂದು ಸೂಚಿಸಲಾಗಿದೆ:-

* “ಲಂಚವನ್ನು ನೀಡಬೇಡಿ. ಕಚೇರಿಯಲ್ಲಿ ಲಂಚವನ್ನು ಕೇಳಿದರೆ ಅಥವಾ ಈ ಕಚೇರಿಯಲ್ಲಿ ಭ್ರಷ್ಟಾಚಾರವಿರುವ ಬಗ್ಗೆ ತಮಗೆ ಮಾಹಿತಿಯಿದ್ದರೆ ಅಥವಾ ತಾವು ಈ ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದರೆ, ಈ ಇಲಾಖಾ ಮುಖ್ಯಸ್ಥರಲ್ಲಿ ಅಥವಾ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳಲ್ಲಿಯೂ ದೂರನ್ನು ಸಲ್ಲಿಸಬಹುದು.

* “DO NOT PAY BRIBES. IF ANYBODY OF THIS OFFICE ASKS FOR BRIBE OR IF YOU HAVE ANY INFORMATION ON CORRUPTION IN THIS OFFICE OR IF YOU ARE A VICTIM OF CORRUPTION IN THIS OFFICE, YOU CAN COMPLAIN TO THE HEAD OF THIS DEPARTMENT OR OFFICERS OF KARNATAKA LOKAYUKTA.”

*ರಾಜ್ಯ ಸರ್ಕಾರದ ಇಲಾಖೆಗಳಿಗೆ ಸಿಎಸ್ ನೀಡಿದ ಸೂಚನೆಗಳೇನು*

ಸುತ್ತೋಲೆಯಲ್ಲಿ ನಮೂದಿಸಲಾದ ಮೇಲ್ಕಂಡ ಸಂದೇಶವನ್ನು ಪ್ರದರ್ಶಿಸುವುದಲ್ಲದೇ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಮತ್ತು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕೇಂದ್ರ ಕಛೇರಿ ಹಾಗೂ ಸಂಬಂಧಪಟ್ಟ ಜಿಲ್ಲಾ ಲೋಕಾಯುಕ್ತ ಕಛೇರಿಯ ಅಧಿಕಾರಿಗಳ ಪದನಾಮ, ಪೂರ್ಣ ವಿಳಾಸ, ಸ್ಥಿರ ದೂರವಾಣಿ ಸಂಖ್ಯೆ, ಸಹಾಯವಾಣಿ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ಪ್ರದರ್ಶಿಸತಕ್ಕದ್ದು. ಈ ಸಂಬಂಧದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕೇಂದ್ರ ಕಛೇರಿಯ ಹಾಗೂ ಜಿಲ್ಲಾ ಲೋಕಾಯುಕ್ತ ಕಛೇರಿಗಳಿಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಪಟ್ಟಿಯನ್ನು ಸುತ್ತೋಲೆಯೊಂದಿಗೆ ಲಗತ್ತಿಸಿ ಸರ್ಕಾರದ ಎಲ್ಲಾ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಸರ್ಕಾರದ ಕಾರ್ಯದರ್ಶಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿದೆ.

ಸುತ್ತೋಲೆಯಲ್ಲಿ ನೀಡಿರುವ ಸೂಚನೆಯಂತೆ ಕ್ರಮವಹಿಸಲು ಹಾಗೂ ಅವರ ಆಡಳಿತ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖಾ ಮುಖ್ಯಸ್ಥರು/ನಿಗಮ/ಮಂಡಳಿ/ಸ್ವಾಯತ್ತ ಸಂಸ್ಥೆಗಳಿಗೆ ಈ ಸಂಬಂಧ ಸೂಚನೆಗಳನ್ನು ನೀಡುವಂತೆಯೂ ಸಹ ಸುತ್ತೋಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸೂಚನೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!