ಬೆಂಗಳೂರು: ಸೆ.೧೯.ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಸಹಕಾರಿ ಸೊಸೈಟಿ ರಚಿಸುವ ಸಂಬಂದ ಸಾಧಕ ಬಾಧಕಗಳ ಅಧ್ಯಯನಕ್ಕಾಗಿ ಸರಕಾರ ಸಂಪುಟ ಸಮಿತಿ ರಚಿಸಿ ಆದೇಶ ಹೊರಡಿಸಿದೆ.ಸಮಿತಿಯಲ್ಲಿ ಸಚಿವರಾದ ಸಂತೋಷ್ ಲಾಡ್ ಪ್ರಿಯಾಂಕ್ ಖರ್ಗೆ ಭೈರತಿ ಸುರೇಶ್.ಎಚ್ ಕೆ ಪಾಟೀಲ ದಿನೇಶ್ ಗುಂಡುರಾವ್ ರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.ಸದರಿ ಸಮಿತಿಯು ಹೊರಗುತ್ತಿಗೆ ನೌಕರರ ಸಹಕಾರಿ ಸೊಸೈಟಿ ರಚನೆಯ ಸಾಧಕ ಭಾಧಕಗಳ ಅಧ್ಯಯನ ನಡೆಸಿ ವರದಿ ನೀಡಲಿದೆ.
ವರದಿ ಆಧಾರದ ಮೇಲೆ ಸೊಸೈಟಿ ರಚಿಸಲಾಗುವುದು.
ಬಹುತೇಕ ಹೊರಗುತ್ತಿಗೆ ನೌಕರರು ಹೆಚ್ಚಾಗಿ ಇರುವ ಇಲಾಖೆಗಳ ಸಚಿವರನ್ನೆ ಉಪ ಸಮತಿಯ ಸದಸ್ಯರನ್ನಾಗಿಸಲಾಗಿದೆ.
ಸೊಸೈಟಿ ರಚನೆಯಾದಲ್ಲಿ ಏಜೆನ್ಸಿಗಳ ಬದಲು ಸೊಸೈಟಿಗಳನ್ನೆ ಏಜೆನ್ಸಿಗಳಾಗಿ ಪರಿಗಣಿಸಲಾಗುವುದು.ಸೊಸೈಟಿ ನೌಕರರಿಗೆ ಯಾವುದೆ ನೇರಪಾವತಿ ಖಾಯಂ ಸೇರಿದಂತೆ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ.
ಹೊರಗುತ್ತಿಗೆ ನೌಕರರು ಹೋರಾಟ ತೀವ್ರವಾಗುತ್ತಿದ್ದಂತೆ ನೇರಪಾವತಿ ಮಾಡುವ ಬದಲು ಸರಕಾರ ಸೊಸೈಟಿ ಎಂಬ ಅಡ್ಡದಾರಿ ಹಿಡಿದಿದೆ ಎಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯದ್ಯಕ್ಷ ಎಂ.ಬಿ.ನಾಗಣ್ಣಗೌಡ ಟೀಕಿಸಿದ್ದಾರೆ.