Sunday, October 12, 2025
spot_img

87 ನೇ ಸಾಹಿತ್ಯ ಸಮ್ಮೇಳನದಲ್ಲಿ ಭ್ರಷ್ಟಾಚಾರ:ಲೋಕಾ’ಗೆ ದೂರು ಸಲ್ಲಿಕೆ

  1. ಮಂಡ್ಯ .ಆ:೩.ಕಳೆದ ೨೦೨೪ ಡಿಸೆಂಬರ್ ೧೯ರಿಂದ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆ ಹಾಗೂ ನಿರ್ವಹಣೆ ಎಲ್ಲವು ಭ್ರಷ್ಟಚಾರಮಯವಾಗಿದ್ದು ಅಗತ್ಯ ತನಿಖೆ ಎರ್ಪಾಡು ಮಾಡುವಂತೆ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.ಕನ್ನಡ ಪರಂಪರೆಯ ಭಾಗವಾಗಿ ನಾಡು ನುಡಿಯ ಸಲುವಾಗಿ ನಡೆಯುವ ಈ ಸಮ್ಮೇಳನವನ್ನು ಅಧಿಕಾರಿಗಳು ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರು ಹಾಗೂ ಕರ್ನಾಟಕ ಸ್ಟೇಟ್ಸ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವೈಟೈಸ್ ಲಿ ಇವರುಗಳು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆ.ರಾಜ್ಯ ಸರಕಾರದ ಅಡಿಯಲ್ಲಿ ಸ್ಥಾಪಿತವಾಗಿರುವ ಎಂಸಿಎ ಸೂಕ್ತ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಸರಕಾರಕ್ಕೆ ಒದಗಿಸುವ ಗುರಿಯೊಂದಿಗೆ ಸ್ಥಾಪಿತವಾಗಿದೆ.ಆದರೆ ಇಲ್ಲಿ ಬೇಲಿಯೆ ಎದ್ದು ಹೊಲ ಮೇದ ಪ್ರಕರಣ ಇದಾಗಿದ್ದು.

ಶ್ರೀಮತಿ ಜ್ಯೋತಿ.ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಇವರು ವೇದಿಕೆ ಸಮಿತಿಯ ಕಾರ್ಯದರ್ಶಿ ಆಗಿದ್ದಾರೆ.ಮಳವಳ್ಳಿ ಶಾಸಕ ಹಾಲೀ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ವೇದಿಕೆ ಸಮಿತಿ ಅಧ್ಯಕ್ಷರಾಗಿದ್ದು.

ಸಾಹಿತ್ಯ ಸಮ್ಮೇಳನದ ವೇದಿಕೆಗಳಿಗಾಗಿ ೧೭೭೬೦೦ ಚದುರ ಅಡಿ ಜಾಗಕ್ಕೆ ಜರ್ಮನ್ ಹ್ಯಾಂಗರ್ ಪೆಂಡಾಲು ನಿರ್ಮಿಸಿರುತ್ತಾರೆ.ವಾಸ್ತವವಾಗಿ ಮಾರುಕಟ್ಟೆಯಲ್ಲಿ ಜರ್ಮನ್ ಹ್ಯಾಂಗರ್ ಪೆಂಡಾಲು ಚದುರಡಿಗೆ ರೂ ೩೦ ರಿಂದ ೩೫ ರೂಗಳಿಗೆ ಲಭ್ಯವಿದೆ.
ಆದರೆ ಎಂಸಿಎ ಇದೇ ಜರ್ಮನಿ ಹ್ಯಾಂಗರ್ ಪೆಂಡಾಲುಗಳನ್ನು ಚದುರಡಿಗೆ ರೂ ೬೯ ಗಳಂತೆ ಸಾಹಿತ್ಯ ಸಮ್ಮೇಳನಕ್ಕೆ ಪೂರೈಸಿದೆ.ಮಾರುಕಟ್ಟೆಯ ದುಪ್ಪಟ್ಟು ದರಕ್ಕೆ ಎಂಸಿಎ ದರಗಳನ್ನು ವಿಧಿಸಿದ್ದರು ಇದ್ಯಾವುದನ್ನು ಪರೀಶೀಲಿಸದ ವೇದಿಕೆ ನಿರ್ಮಾಣ ಸಮಿತಿಯ ಅಧಿಕಾರಿಗಳು ಎಂಸಿಎ ಯೊಂದಿಗೆ ಶಾಮೀಲಾಗಿ ಎಂಸಿಎ ದರಕ್ಕೆ ಒಪ್ಪಿ ವೇದಿಕೆ ನಿರ್ಮಾಣದ ಹೆಸರಿನಲ್ಲಿ ರೂ ೮.೯೨.೪೯.೮೩೫ ಕೋಟಿ ಹಣವನ್ನು ಎಂಸಿಎ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಅತೀಕುಲ್ಲಾ ಶರೀಫ್ ರವರ ಹತ್ತಿರದ ಸಂಬಂದಿ ಎನ್ನಲಾದ ಮೈಸೂರಿನ ಶರೀಫ್ ಫರ್ನಿಚರ್ ಗೆ ಬಿಡುಗಡೆ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಗಮನಿಸತಕ್ಕ ವಿಷಯವೆಂದರೆ ಇದೇ ಎಂಸಿಎ ೨೦೨೪ ರ ಡಿಸೆಂಬರ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಳವಡಿಸಿದ ಜರ್ಮನ್ ಪೆಂಡಾಲ್ ಗೆ ಚದುರಡಿಗೆ ₹೬೯ ದರ ನೀಡಿದ್ದರೆ.

೨೦೨೫ ಫೆ ೦೭ ರಿಂದ ಫೆ ೨೧ವರೆಗೆ ಮಂಡ್ಯದಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿ ನಡೆಸಿದ ಖಾದಿ ಮತ್ತು ಗ್ರಾಮದ್ಯೋಗ ವಸ್ತು ಪ್ರದರ್ಶನದಲ್ಲಿ ಇದೇ ಎಂಸಿಎ ೧೫ ಸಾವಿರ ಚದುರಡಿ ಜರ್ಮನ್ ಹ್ಯಾಂಗರ್ ಪೆಂಡಾಲ್ ನ್ನು ಹದಿನೈದು ದಿನಗಳಿಗೆ ಅಳವಡಿಸಿದ್ದು ಅದಕ್ಕಾಗಿ ಅದು ಚದುರಡಿಗೆ ನಮೂದಿಸಿದ ದರ ₹೫೫ ಮಾತ್ರ!

ಅಂದರೆ ಸಾಹಿತ್ಯ ಸಮ್ಮೇಳನಕ್ಕಿಂತ ೧೪ ರೂ ಕಡಿಮೆ ಮೊತ್ತ ನಮೂದಿಸಿದೆ.ವಾಸ್ತವದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಮೂರು ದಿನಗಳಿಗೆ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಜರ್ಮನ್ ಹ್ಯಾಂಗರ್ ಪೆಂಡಾಲು ಅಳವಡಿಸುವ ವೆಂಡರ್ ಗಳಿಂದ ದರಪಟ್ಟಿ ಪಡೆಯುವ ಬದಲು ಭ್ರಷ್ಟಾಚಾರ ನಡೆಸುವ ಸಲುವಾಗಿ ಈ ರೀತಿಯ ದುಬಾರಿ ದರ ವಿಧಿಸಿ ವೇದಿಕೆ ನಿರ್ಮಾಣದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡಲಾಗಿದೆ.ಈ ಕುರಿತು ಅಯಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಯಾರೂ ತಕರಾರು ಎತ್ತದೆ.ಮಾರುಕಟ್ಟೆ ದರಗಳನ್ನು ಪರೀಶೀಲಿಸದೆ ದರ ಒಪ್ಪಿರುವುದು ಭ್ರಷ್ಟಚಾರ ನಡೆದಿರುವುದಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮುಂದುವರಿದು ಆಹಾರ ಸಮಿತಿ
ಕೃಷ್ಣಕುಮಾರ್.ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟೀ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಗಳು.ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ.ಹಾಲೀ ಚೆಸ್ಕಾಂ ಅಧ್ಯಕ್ಷರು ಅಂದಿನ ಆಹಾರ ಸಮಿತಿ ಅಧ್ಯಕ್ಷರಾಗಿದ್ದು..ಇಡೀ ಸಾಹಿತ್ಯ ಸಮ್ಮೇಳನದ ಬಹುದೊಡ್ಡ ಮೊತ್ತ ಆಹಾರದ ಹೆಸರಿನಲ್ಲಿ ವ್ಯಯ ಮಾಡಲಾಗಿದೆ.ಸದರಿ ಸದಸ್ಯ ಕಾರ್ಯದರ್ಶಿಗಳು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಸಮ್ಮೇಳನದಲ್ಲಿ ಸರಿ ಸುಮಾರು ನಾಲ್ಕು ವರೆ ಲಕ್ಷ ಮಂದಿಗೆ ಆಹಾರ ಸರಬರಾಜು ಮಾಡಿರುವುದಾಗಿ ಹೇಳಿಕೆ ನೀಡುತ್ತಾರೆ.ವಾಸ್ತವವಾಗಿ ಆಹಾರ ಸಮಿತಿ ಮೂಲಕ ೮.೧೦.೬೪೯ ಮಂದಿ ಸಮ್ಮೇಳನದಲ್ಲಿ ಆಹಾರ ಸ್ವೀಕರಿಸಿದ್ದಾರೆಂದು ಸ್ಕೈ ಬ್ಲೂ ಎಂಬ ಕಂಪನಿಗೆ ₹೬.೭೪.೬೨.೧೮೨ ಕೋಟಿ ರೂಗಳನ್ನು ಪಾವತಿಸಲಾಗಿದೆ.

ಇದರ ನಡುವೆ ಮಂಡ್ಯದ ಅಪೂರ್ವ ವೆಜ್ ಎಂಬ ಕೆಟರಿಂಗ್ ಸಂಸ್ಥೆ ಸಾಹಿತ್ಯ ಸಮ್ಮೇಳನಕ್ಕೆ ತಾನೂ ಆಹಾರ ಪೂರೈಸಿರುವುದಾಗಿ ಪತ್ರಿಕೆಯಲ್ಲಿ ಹೇಳಿಕೊಂಡಿದೆ.ಸದರಿ ಅಪೂರ್ವ ವೆಜ್ ಎಂಸಿಎ ಯ ಅಧಿಕೃತ ವೆಂಡರ್ ಎಂಬುದು ಧೃಡವಾಗಿಲ್ಲ.ಇದರ ಜತೆಗೆ ಆಹಾರ ಸಮಿತಿ ೮.೧೦.೬೪೯ ಮಂದಿ ನಾಲ್ಕು ದಿನಗಳ ಕಾಲ ಊಟ ಮಾಡಿರುವುದಾಗಿ ಅದನ್ನು ಪ್ಲೇಟುಗಳ ಲೆಕ್ಕದಲ್ಲಿ ಲೆಕ್ಕ ಹಾಕಿರುವುದಾಗಿ ಹೇಳಿ ಸ್ಕೈ ಬ್ಲೂ ಎಂಬ ಸಂಸ್ಥೆಗೆ ರೂ ೬.೭೪.೬೨.೧೮೨ ರೂಗಳನ್ನು ಪಾವತಿಸಿದೆ.

ಅಶ್ಚರ್ಯಕರ ಸಂಗತಿ ಎಂದರೆ ಮೊದಲ ದಿನವೆ ಪೋಲಿಸು ಹಾಗೂ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಯೆ ೧೮.೪೮೦ ಮಂದಿ ಬೆಳಗಿನ ತಿಂಡಿ ಸೇವಿಸಿದ್ದಾರೆಂದು ತನ್ನ ಅನುಭಂದದಲ್ಲಿ ದಾಖಲಿಸಿಕೊಂಡಿದೆ.ವಾಸ್ತವವಾಗಿ ಪೋಲಿಸು ಮತ್ತು ಸಾರಿಗೆ ಸಿಬ್ಬಂದಿ ಆ ಪ್ರಮಾಣದಲ್ಲಿ ಸಮ್ಮೇಳನದ ಕೆಲಸಕ್ಕೆ ನಿಯೋಜನೆಗೊಂಡಿದ್ದರೆ ಎಂಬ ಮಾಹಿತಿಯಿಲ್ಲ.ಸಾರಿಗೆ ಇಲಾಖೆ ೧೩೨ ಬಸ್ ಗಳನ್ನು ಮಾತ್ರವೆ ಒದಗಿಸಿದೆ.ಹೀಗಿರುವಾಗ ಸಮಿತಿಯ ಲೆಕ್ಕಚಾರವೇ ರಾಮನ ಲೆಕ್ಕ ಕೃಷ್ಣನ ಲೆಕ್ಕ ಎಂಬುದು ಸ್ಪಷ್ಟವಾಗಿದೆ.ಅಷ್ಟು ಮಾತ್ರವಲ್ಲದೆ ಎಂಟು ಲಕ್ಷ ಮಂದಿ ಮೂರು ದಿನಗಳಲ್ಲಿ ಆ ಸ್ಥಳಕ್ಕೆ ಬರಲು ಸಾಧ್ಯವೆ? ಮುಂದುವರಿದು ನೋಂದಾಯಿತ ಪ್ರತಿನಿಧಿಗಳ ಸಂಖ್ಯೆ ನಾಲ್ಕು ಸಾವಿರ ದಾಟದಿದ್ದರು ೨೩ ಸಾವಿರಕ್ಕು ಅಧಿಕ ನೊಂದಾಯಿತ ಪ್ರತಿನಿಧಿಗಳು ಭಾಗವಹಿಸಿ ಊಟ ಸ್ವೀಕರಿಸಿದ್ದಾರೆಂದು ಲೆಕ್ಕ ಮಂಡಿಸಲಾಗಿದೆ.ಒಟ್ಟಾರೆ ಆಹಾರ ಸಮಿತಿ ಮಂಡಿಸಿರುವ ಲೆಕ್ಕಕ್ಕು ಅಜಗಜಾಂತರವಿದೆ.ಅಲ್ಲದೆ ಉಪಗುತ್ತಿಗೆ ನೀಡುವುದು ೪ಜಿ ನಿಯಮಕ್ಕೆ ವಿರುದ್ದವಾದ ಕಾರ್ಯವಾಗಿದೆ.


ಮುಂದುವರಿದು ಸ್ವಚ್ಚತೆ ಮತ್ತು ನೈರ್ಮಲ್ಯ ಸಮಿತಿಯಲ್ಲಿ ನಗರ ಯೋಜನಾ ನಿರ್ದೇಶಕರಾಗಿದ್ದ ಮಾಯಣ್ಣಗೌಡ ಸದಸ್ಯ ಕಾರ್ಯದರ್ಶಿಯಾದರೂ ಇಡೀ ಪ್ರಕರಣವನ್ನು ನಿಭಾಯಿಸಿದವರು ಈ ಹಿಂದಿನ ಯೋಜನಾ ನಿರ್ದೇಶಕಿ ತುಷಾರಮಣಿ.ಇಡೀ ಸಮ್ಮೇಳನದ ಆವರಣದ ಸ್ವಚ್ಚತೆಗಾಗಿ ೧೦೫೦ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.ಅವರಿಗೆ ದಿನವೊಂದಕ್ಕೆ ೬೩೭ ವೇತನ ನೀಡಲಾಗಿದೆ ಎಂದು ಸ್ವಚ್ಚತೆಗಾಗಿ ₹೩೩.೩೩.೨೯೨ ರೂಗಳನ್ನು ಸ್ಕೈಬ್ಲೂ ಎಂಬ ಸಂಸ್ಥೆಗ ಬಿಡುಗಡೆಗೊಳಿಸಲಾಗಿದೆ.ವಾಸ್ತವವಾಗಿ ಸದರಿ ಸಂಸ್ಥೆ ಆ ಪ್ರಮಾಣದ ಪೌರಕಾರ್ಮಿಕರನ್ನು ಸ್ವಚ್ಚತೆಗಾಗಿ ನಿಯೋಜಿಸಿರಲಿಲ್ಲ.ಅವರಿಗೆ ಯಾವುದೆ ವೇತನವನ್ನು ಸಹ ಪಾವತಿಸಿಲ್ಲ.ಬದಲಿಗೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು ಮಂಡ್ಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಹಾಗೂ ಕಸದ ವಾಹನಗಳನ್ನು ಬಳಸಿ ಸಮ್ಮೇಳನದ ಆವರಣವನ್ನು ಸ್ವಚ್ವಗೊಳಿಸಲಾಗಿದೆ.ಆದಾಗಿಯೂ ಸ್ಕೈಬ್ಲೂ ಸಂಸ್ಥೆ ಸ್ವಚ್ಚತೆ ಹೆಸರಿನಲ್ಲಿ ಈ ಪ್ರಮಾಣದ ಹಣ ಲಪಟಾಯಿಸಿದೆ.

ವಸತಿ ಸಮಿತಿಗೆ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಸದಸ್ಯ ಕಾರ್ಯದರ್ಶಿಯಾಗಿದ್ದು.ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪರಿಷತ್ ಪದಾಧಿಕಾರಿಗಳು ವಿದೇಶಿ ಗಣ್ಯರು ಜನ ಪ್ರತಿನಿಧಿಗಳು ಆಹ್ವಾನಿತರು.ನೊಂದಾಯಿತ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆಗಾಗಿ ಒಟ್ಟು ರೂ ೧.೯೭.೫೬.೭೪೩ ಕೋಟಿ ಹಣವನ್ನು ಮರಳಿ ಸ್ಕೈ ಬ್ಲೂ ಇವೆಂಟ್ ಮ್ಯಾನೇಜ್ ಮೆಂಟ್ ಎಂಬ ಸಂಸ್ಥೆಗೆ ನೀಡಲಾಗಿದೆ.ಅತ್ಯಂತ ಪ್ರವಾಸಿಗರು ಹೆಚ್ಚಿರುವ ವೇಳೆಯಲ್ಲು ಇರದಷ್ಟು ದುಬಾರಿ ದರಗಳನ್ನು ಹೋಟೆಲ್ ಗಳಿಗೆ ಪಾವತಿಸಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ.ವಾಸ್ತವದಲ್ಲಿ ಈ ಹೋಟೆಲ್ ಗಳಲ್ಲಿ ಉಳಿದಿದ್ದ ಗಣ್ಯರು ಯಾರು? ಆ ಕುರಿತು ಯಾವುದೆ ದಾಖಲೆ ನಿರ್ವಹಣೆ ಮಾಡದೆ ಕೋಟಿಗಟ್ಟಲೆ ಹಣವನ್ನು ಸ್ಕೈ ಬ್ಲೂ ಸಂಸ್ಥೆಗೆ ನೀಡಲಾಗಿದೆ.ಉದಾಹರಣೆಗೆ ಮಂಡ್ಯದ ಅಮರಾವತಿ ಹೋಟೆಲ್ ನಲ್ಲಿ ರೂ ₹೮೪೫೪ ರೂ ದರದಲ್ಲಿ ಸೂಟ್ ರೂಂ ಬಾಡಿಗೆ ನೀಡಲಾಗಿದೆ.ಇದರಲ್ಲಿ ತಂಗಿದ್ದವರು ಸೋಫಾ ಡ್ಯಾಮೇಜು ಮಾಡಿದ್ದಾರೆಂದು ಅದರ ವೆಚ್ಚ ೪೪೪೯ ರೂಗಳನ್ನು ಭರಿಸಲಾಗಿದೆ.ಜತೆಗೆ ಈ ರೂಮಿನಲ್ಲಿ ಉಳಿದಿದ್ದವರ ಊಟದ ವೆಚ್ಚ ₹೭೫೯೫೬ ಭರಿಸಲಾಗಿದೆ.ಜಿಲ್ಲಾಡಳಿತ ತನಗೆ ದತ್ತವಾದ ಅಧಿಕಾರ ಬಳಸಿ ಹೋಟೆಲ್ ಗಳ ಬಾಡಿಗೆ ದರವನ್ನು ಅರ್ಧಕ್ಕೆ ನಿಗದಿಪಡಿಸುವ ಅವಕಾಶವನ್ನು ನಿರಾಕರಿಸುವ ಜತೆಗೆ ದುಬಾರಿ ದರ ನೀಡಲಾಗಿದೆ.ಈ ರೂಮುಗಳಲ್ಲಿ ವಾಸ್ತವ್ಯವಿದ್ದವರ ಕುರಿತು ಯಾವುದೆ ವಹಿ ನಿರ್ವಹಣೆಯಾಗದಿರುವುದು ಅತ್ಯಂತ ಸಂಶಯಾಸ್ಪದವಾಗಿದೆ.ಮೈಸೂರಿನಲ್ಲಿ ದಿನವೊಂದಕ್ಕೆ ರೂ ೫೮ ಸಾವಿರ ಬಾಡಿಗೆ ದರದ ಹೋಟೆಲ್ ಗಳಲ್ಲಿ ಉಳಿದಿದ್ದ ಗಣ್ಯ ಮಾನ್ಯರು ಯಾರು? ಎಂಬುದು ಬಹಿರಂಗವಾಗಬೇಕಿದೆ.

ಇದಲ್ಲದೆ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ವೆಚ್ಚಕ್ಕಾಗಿ ಎರಡುವರೆ ಕೋಟಿ ರೂಪಾಯಿ ಹಣ ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಷಿ ಸಕಾಲಕ್ಕೆ ಲೆಕ್ಕ ಸಲ್ಲಿಸದ ಜತೆಗೆ ಈ ಹಗರಣಕ್ಕೆ ನೇರ ಮತ್ತು ಪರೋಕ್ಷ ಭಾಗೀಯಾಗಿದ್ದಾರೆ.

ಎಂಸಿಎ ಸೂಕ್ತ ದರದಲ್ಲಿ ಸರಕಾರಕ್ಕೆ ತನ್ನ ವೆಂಡರುಗಳ ಮೂಲಕ ಗುಣಾತ್ಮಕ ಸೇವೆ ಒದಗಿಸುವ ಸಲುವಾಗಿ ೪ ಜಿ ವಿನಾಯತಿ ನೀಡಲಾಗುತ್ತದೆ.ಆದರೆ ಈ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು. ಸ್ಕೈ ಬ್ಲೂ ನಂತ ಬೇನಾಮಿ ಸಂಸ್ಥೆಗಳನ್ನು ಹುಟ್ಟು ಹಾಕಿ.ಎಂಸಿಎ ವ್ಯವಸ್ಥಾಪಕ ಅತೀಕುಲ್ಲಾ ಷರೀಫ್.ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಮತ್ತು ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಇತರರು ಸೇರಿ ಈ ಹಗರಣ ನಡೆಸಿ ಸರಕಾರದ ಕಣ್ಣಿಗೆ ಮಣ್ಣೇರೆಚಿ ಕೋಟಿಗಟ್ಟಲೆ ಹಣ ಲೂಟಿ ಭ್ರಷ್ಟಚಾರ ನಡೆಸಿದ್ದಾರೆ.ಎಂಸಿಎ ವ್ಯವಸ್ಥಾಪಕ ಅತೀಕುಲ್ಲಾ ಷರೀಫ್ ಈ ಪ್ರಕ್ರಿಯೆಯಲ್ಲಿ ತಾನೂ ಪೋಸ್ಟ್ ಮ್ಯಾನ್ ಪಾತ್ರ ವಹಿಸಿರುವುದಾಗಿ ಕೋಶಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ದರವನ್ನು ಮಾರುಕಟ್ಟೆ ದರದೊಂದಿಗೆ ಹೋಲಿಸಿ ಅಂತಿಮಗೊಳಿಸಬೇಕಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಾಹಿತ್ಯ ಸಮ್ಮೇಳನದಂತ ನಾಡು ನುಡಿ ವಿಚಾರದಲ್ಲು ನಾಲಿಗೆ ಚಾಚಿರುವವರ ಕುರಿತು ಪ್ರಕರಣ ದಾಖಲಿಸಿ ಅಗತ್ಯ ತನಿಖೆ ಎರ್ಪಡಿಸುವಂತೆ ದೂರು ನೀಡಲಾಗಿದೆ.

ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ.ಮುದ್ದೇಗೌಡ.ಆಟೋ ಘಟಕದ ವೆಂಕಟೇಶ್ ಶಿವರಾಮ್ ಮನು ಬೂದನೂರು ಸೇರಿದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!