ಪಾಂಡವಪುರ : ಹೊಂಡಾ ಆಕ್ಟೀವ್ ಬೈಕ್ ಗೆ ಇನ್ನೋವಾ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಳ್ಳಾಳೆ ಸಮೀಪ ಭಾನುವಾರ ನಡೆದಿದೆ.
ತಾಲೂಕಿನ ನಾರಾಯಣಪುರ ಗ್ರಾ.ಪಂ ಸದಸ್ಯ ಹಾಗೂ ಡೇರಿ ಕಾರ್ಯದರ್ಶಿ,ವಳಗೆರೆದೇವರಹಳ್ಳಿ ನಿವಾಸಿ ರಾಮಕೃಷ್ಣ ಎಂಬಾತ ಮೃತ ವ್ಯಕ್ತಿ.
ಪಾಂಡವಪುರ ತಾಲೂಕಿನ ಬೆಳ್ಳಾಳೆ ಸಮೀಪ ರೈಸ್ ಮಿಲ್ ಬಳಿ ಎರೆಗೌಡನಹಳ್ಳಿಗೆ ತಿರುವುಪಡೆದುಕೊಳ್ಳುವಾಗ ಇನ್ನೋವಾ ಕಾರು ಡಿಕ್ಕಿಯಾಗಿ ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೃತ ರಾಮಕೃಷ್ಣ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.