ಮಂಡ್ಯ : ದಕ್ಷಿಣ ಶಿಕ್ಷಕರ ಚುನಾವಣೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಮೊದಲ ಗೆಲುವು ದೊರಕಿದೆ
ಮೈತ್ರಿ ಅಭ್ಯರ್ಥಿ ವಿವೇಕಾನಂದಗೆ.
ಜ್ಯಾದಳದ ಅಭ್ಯರ್ಥಿ ವಿವೇಕಾನಂದಾ 10823 ಮತಗಳನ್ನು ಪಡೆದರೆ
ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6201 ಮತಗಳು ದೊರಕಿವೆ.
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಗೆ 84 ಮತಗಳು ದೊರಕಿದ್ದು.ಮೈತ್ರಿ ಅಭ್ಯರ್ಥಿ ವಿವೇಕಾನಂದಾ
*4622 ಮತಗಳ ಭಾರಿ ಅಂತರಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಪಡೆದಿದ್ದಾರೆ.
1049 ಕುಲಗೆಟ್ಟ ಮತಗಳು:ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಕರ ಚುನಾವಣೆಯಲ್ಲಿ ಕ್ರಮವಾಗಿ ಮತ ಚಲಾಯಿಸುವಲ್ಲಿ ಎಡವಿ ಬಿದ್ದಿದ್ದಾರೆ.ಇಲ್ಲಿ ಚಲಾವಣೆಯಾಗಿರುವ ಮತಗಳ ಪೈಕಿ 1049 ಮತಗಳು ಕುಲಗೆಟ್ಟಿವೆ.ಸರಿಯಾಗಿ ಮತ ಚಲಾಯಿಸಲು ಬಾರದ ಶಿಕ್ಷಕರು ಇಷ್ಟು ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಅಪಮೌಲ್ಯಗೊಳಿಸಿದ್ದಾರೆ.ಇಂತಹ ಶಿಕ್ಷಕರು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಅದೇನನ್ನು ಕಲಿಸುತ್ತಾರೆ.ಇನ್ನೆಂತಹ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ ಎಂಬುದು ನಿಜಕ್ಕು ಕಳವಳಕಾರಿಯಾಗಿದೆ.
ಅಭ್ಯರ್ಥಿಗಳು ಕೊಟ್ಟ ಮದ್ಯದ ಎಫೆಕ್ಟಿಗೆ ಕೈ ನಡುಗಿ ಈ ಪ್ರಮಾಣದಲ್ಲಿ ಮತಗಳು ಕುಲಗೆಟ್ಟಿವೆ ಎಂದು ನೆಟ್ಟಿಗರು ಲೇವಡಿಯಾಡಿದ್ದಾರೆ