Saturday, December 21, 2024
spot_img

ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಜಾರಿ:ಪೌರಾಡಳಿತ ನಿರ್ದೇಶಕ ಕವಳಕಟ್ಟೆ ವಿಶ್ವಾಸ

ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಜಾರಿ:ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕಾವಳಕಟ್ಟೆ ವಿಶ್ವಾಸ

ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಸ್ಥಳೀಯ ಸಂಸ್ಥೆಗಳಿಂದಲೆ ವೇತನ ಪಾವತಿಸುವಂತೆ ನೇರಪಾವತಿ ಜಾರಿಗೆ ಹಣಕಾಸು ಇಲಾಖೆ ಅನುಮೋದನೆ ನೀಡುವ ಸಾಧ್ಯತೆಯಿದೆಯೆಂದು ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕಾವಳಕಟ್ಟೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸ್ವತಂತ್ರ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘ. ಹೊರಗುತ್ತಿಗೆ ನೌಕರರನ್ನು ಸೊಸೈಟಿ ಮೂಲಕ ವೇತನ ನೀಡುವ ಕಾರ್ಮಿಕ ಇಲಾಖೆಯ ಪ್ರಸ್ತಾಪ ವಿರೋಧಿಸಿ ಹಾಗೂ ಹಣಕಾಸು ಇಲಾಖೆಯಲ್ಲಿರುವ ಹೊರಗುತ್ತಿಗೆ ನೌಕರರ ನೇರಪಾವತಿ ಕಡತಕ್ಕೆ ಅನುಮೋದನೆ ನೀಡುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ನೌಕರರ ಸೇವಾಭದ್ರತೆ ದೃಷ್ಟಿಯಿಂದ ನೇರಪಾವತಿ ಜಾರಿಗೆ ಹಣಕಾಸು ಇಲಾಖೆಗೆ ಕಡತ ಮಂಡಿಸಲಾಗಿದೆ.ಕಡತ ಅನುಮೋದನೆಯಾಗಿ ನಗರ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ಸಹಾಯಕರಿಗೆ ಕಸದ ವಾಹನ ಚಾಲಕರಿಗೆ ಸ್ಥಳೀಯ ಸಂಸ್ಥೆಗಳಿಂದಲೆ ನೇರಪಾವತಿ ಜಾರಿಯಾಗುವ ಸಾಧ್ಯತೆಯಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಡಿಯುವ ನೀರು.ಸ್ವಚ್ಚತೆ ನಗರ ಸ್ಥಳೀಯ ಸಂಸ್ಥೆಗಳ ಆದ್ಯತೆಯಾಗಿದ್ದು.ಈ ವಿಭಾಗದಲ್ಲಿ ದುಡಿಯುವ ನೌಕರರ ಹಿತಾಸಕ್ತಿ ಕಾಪಾಡಲು ಪೌರಾಡಳಿತ ನಿರ್ದೇಶನಾಲಯ ಬದ್ದವಾಗಿದೆಯೆಂದರು.

ರಾಜ್ಯದ ಹಲವೆಡೆ ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ ವೇತನ ಸಿಗುವುದಿಲ್ಲ.ಈ ಕುರಿತು ಅಗತ್ಯ ಕ್ರಮವಹಿಸಲಾಗುವುದು.ಸಂಕಷ್ಟ ಭತ್ಯೆ ಜಾರಿ ಸಂಬಂದ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು.ಕಾರ್ಮಿಕ ಇಲಾಖೆ ಸೊಸೈಟಿ ರಚಿಸಿ ಆ ಮೂಲಕ ಹೊರಗುತ್ತಿಗೆ ನೌಕರರಿಗೆ ವೇತನ ನೀಡುವ ಕ್ರಮಕ್ಕೆ ಪೌರಾಡಳಿತ ನಿರ್ದೇಶನಾಲಯ ಸಮ್ಮತ ತೋರುವುದಿಲ್ಲವೆಂದು ಪ್ರತಿಭಟನಾನಿರತ ಹೊರಗುತ್ತಿಗೆ ನೌಕರರಿಗೆ ಆಶ್ವಾಸನೆ ನೀಡಿದರು.

ಇದಕ್ಕು ಮುನ್ನಾ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಕಾರ್ಮಿಕರ ಸೊಸೈಟಿ ರಚಿಸಿ ಹೊರಗುತ್ತಿಗೆ ನೌಕರರ ವೇತನ ಪಾವತಿಸುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ರ ಬೀದರ್ ಮಾದರಿ ಈಗಾಗಲೇ ವೈಫಲ್ಯ ಹೊಂದಿದೆ.ಜವಾಬ್ದಾರಿಯುತ ಸರಕಾರವಾಗಿ ಗುತ್ತಿಗೆ ಪದ್ದತಿ ರದ್ದು ಮಾಡಿ ಕಾರ್ಮಿಕರ ಹಿತ ಕಾಯಬೇಕಾದ ಸರಕಾರವೇ ಸೊಸೈಟಿ ರಚನೆ ಹೆಸರಲ್ಲಿ ಹಿಂಬಾಗಿಲಿನಿಂದ ತಾನೇ ಗುತ್ತಿಗೆ ಏಜೆನ್ಸಿಯಾಗಲು ಹೊರಟಿದೆಯೆಂದು ತೀವ್ರವಾಗಿ ಟೀಕಿಸಿದರು.

ಯಾವುದೆ ಕಾರಣಕ್ಕು ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ಸೊಸೈಟಿ ಮಾದರಿಗೆ ತರದೆ ಹಣಕಾಸು ಇಲಾಖೆ ಮುಂದಿರುವ ನೇರಪಾವತಿ ಕಡತಕ್ಕೆ ಅನುಮೋದನೆ ನೀಡುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಮಂಜುನಾಥ್ ಯಾವುದೆ ಇಲಾಖೆಯ ಹೊರಗುತ್ತಿಗೆ ನೌಕರರನ್ನು ಬಲವಂತವಾಗಿ ಸೊಸೈಟಿ ಮಾದರಿಗೆ ತರುವ ಯಾವುದೆ ಪ್ರಸ್ತಾಪವಿಲ್ಲ.ಅಯಾ ಇಲಾಖೆಗಳು ಪ್ರಸ್ತಾವ ಸಲ್ಲಿಸಿದಲ್ಲಿ ಮಾತ್ರ ಕಾರ್ಮಿಕರ ಸೊಸೈಟಿ ಮೂಲಕ ವೇತನ ನೀಡಲಾಗುವುದು.ಹೊರಗುತ್ತಿಗೆ ನೌಕರರ ಆಗ್ರಹಗಳನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗಮನಕ್ಕೆ ತರಲಾಗುವುದೆಂದರು.
ಪ್ರತಿಭಟನೆಯ ನಂತರ ಪೌರಾಡಳಿತ ನಿರ್ದೇಶನಾಲಯದಲ್ಲಿ ನಿರ್ದೇಶಕರು.ಹಿರಿಯ ಅಧಿಕಾರಿಗಳು ಮತ್ತು ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಸಲಾಯಿತು.ಸಭೆಯಲ್ಲಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಸಕಾಲಕ್ಕೆ ವೇತನ ಪಾವತಿಯಾಗದಿರುವುದು.ಸಂಕಷ್ಟ ಭತ್ಯೆ ಜಾರಿ ಸಂಬಂದ ರಾಜ್ಯಾದ್ಯಂತ ಏಕಪ್ರಕಾರವಾದ ಮಾರ್ಗದರ್ಶಿ ಸೂತ್ರಗಳಿಲ್ಲದಿರುವುದು.ಬಾಕೀ ಉಳಿದಿರುವ ಪೌರಕಾರ್ಮಿಕರ ನೇಮಕಾತಿ.ಹಣಕಾಸು ಇಲಾಖೆ ಮುಂದಿನ ನೇರಪಾವತಿ ಕಡತದ ಸ್ಥಿತಿಗತಿ ಕುರಿತು ಚರ್ಚೆಗಳು ನಡೆದವು.ಈ ಎಲ್ಲ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಕ್ರಮಗಳನ್ನು ರೂಪಿಸುವುದಾಗಿ ನಿರ್ದೇಶಕರು ಸಭೆಗೆ ತಿಳಿಸಿದರು

ಎಐಸಿಸಿಟಿಯು ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಣ್ಣ.ನಾಗರಾಜ್ ಪೂಜಾರ್  ಕೇಶವ ನಾಯಕ್  .ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ವಿರೇಶ್.ಬೆಳಗಾವಿ ವಿಭಾಗ ಸಂಚಾಲಕ ರಾಜೂ ಎಂ ಹೊಸಮನಿ.ಕಲ್ಯಾಣ ಕರ್ನಾಟಕ ವಿಭಾಗ ಸಂಚಾಲಕ ಸಿದ್ರಾಮ ಪಾಟೀಲ.ಮಧ್ಯ ಕರ್ನಾಟಕ ಸಂಚಾಲಕ ನವೀನ್.ಶಿವರಾಜು.ಕರಾವಳಿ ವಿಭಾಗ ಸಂಚಾಲಕ ಅಣ್ಣಪ್ಪ ಕಾರೇಕಾಡು ಬೆಂಗಳೂರು ವಿಭಾಗ ಸಂಚಾಲಕ ಪುಟ್ಟಸ್ವಾಮಿ.ನೆಲಮಂಗಲ ನಾಗೇಶ್ ದುಗ್ಗೇಶ್ ದಾವಣಗೆರೆ.ಸವದತ್ತಿ ಯಲ್ಲಪ್ಪ.ಗವೀಂದ್ರ ಯಾದಗಿರಿ.ತಿಪ್ಪಣ್ಣ ರಾಯಚೂರು.ಚಿತ್ರದುರ್ಗ ನವೀನ್ ಉಡುಪಿ ವಿನಯ್ ಮಂಡ್ಯ ಕರುನಾಡ ಸೇವಕರು ಸಂಘದ ಅಧ್ಯಕ್ಷ ಚಂದ್ರು.ರಾಜ್ಯ ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘದ ಮಾರುತಿ ಕಂಠೀ.ಬಾಲಾಜಿ ಹುಗ್ಗೀ.ವೆಂಕಟಲಕ್ಷ್ಮೀ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗೀಯಾಗಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!