ಬೆಟ್ಟಿಂಗ್ .ಜೂಜೂ ಸಾಲಭಾಧೆ:ಯುವಕ ರೈಲುಹಳಿಗೆ ತಲೆಕೊಟ್ಟು ಆತ್ಮಹತ್ಯೆ
ಮಂಡ್ಯ:ನ.1 ಸಾಲದ ಭಾಧೆಗೆ ಸಿಲುಕಿದ್ದ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ನಗರದ ಹೊರವಲಯದ ಹಳೇ ಬೂದನೂರು ಗ್ರಾಮದ ಬಳಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕ ತ್ಯಾಗ(30) ಹಳೇ ಬೂದನೂರು ನಿವಾಸಿ ಎಂದು ಗುರುತಿಸಲಾಗಿದೆ.ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್.ಇಸ್ಪೀಟು ಜೂಜಿಗೆ ಬಲಿಯಾಗಿದ್ದ ಯುವಕ ಒಂದುವರೆ ಕೋಟಿಗೂ ಹೆಚ್ಚಿನ ವ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಬೆಟ್ಟಿಂಗ್ ಧಂಧೆಕೋರರು.ಇಸ್ಪೀಟು ಅಡ್ಡಗಳ ಮಾಫಿಯಾದವರು ಮತ್ತು ಸಾಲಗಾರರ ಕಿರುಕುಳ ತಾಳಲಾರದೆ ಇಂದು ಸಂಜೆ ಬೂದನೂರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ರೈಲ್ವೆ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಸಬಾದಲ್ಲಿ ಜೂಜೂ ಐಪಿಎಲ್ ಧಂಧೆ ದರ್ಬಾರ್:ಮಂಡ್ಯ ತಾಲೂಕಿನ ಕಸಬಾ ಹೋಬಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ವ್ಯಾಪಕವಾಗಿದ್ದು.ಇಲ್ಲಿನ ಗದ್ದೆ ಬಯಲುಗಳಲ್ಲಿ ವ್ಯಾಪಕ ಜೂಜು ಅಡ್ಡೆಗಳನ್ನು ನಡೆಸಲಾಗುತ್ತಿದೆ.ಈ ಧಂಧೆಗಳನ್ನು ನಿರ್ವಹಿಸಲು ಪ್ರತ್ಯೇಕ ಗುಂಪುಗಳು ಸೃಷ್ಟಿಯಾಗಿದ್ದು.ಇವರ ಬೆಂಬಲಕ್ಕೆ ರಾಜಕೀಯ ನಾಯಕರು ಇರುವುದರಿಂದ ನೂರಾರು ಯುವಕರು ಈ ಧಂದೆಗೆ ಬಲಿಯಾಗುತ್ತಿದ್ದಾರೆ. ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ಈ ಗ್ರಾಮಗಳಲ್ಲಿ ಇಸ್ಪೀಟು ಧಂಧೆಗೆ ಬೆಂಗಳೂರು ಮೈಸೂರು ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ ಜೂಜೂಕೋರರು ಅಗಮಿಸುತ್ತಿದ್ದು.ಹಳೇ ಮೈಸೂರು ಭಾಗದಲ್ಲಿ ಇಸ್ಪೀಟು ಧಂಧೆಗೆ ಕುಖ್ಯಾತಿ ಯಾಗಿದೆ. ಈಗಾಗಲೆ ನೂರಾರು ಯುವಕರು ಈ ಧಂಧೆಗೆ ಬಲಿಯಾಗಿದ್ದು ತಮ್ಮ ಪಿತ್ರಾರ್ಜಿತ ಆಸ್ತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ.ಪೋಲಿಸ್ ಠಾಣೆಗಳಿಗೆ ನಿತ್ಯ ಪ್ರಸಾದ ಸಲ್ಲಿಕೆಯಾಗುತ್ತಿರುವುದರಿಂದ ಅವರು ಸಹ ಮುಗುಮ್ಮಾಗಿದ್ದಾರೆ ಎನ್ನಲಾಗಿದೆ.
ಈ ಹಿಂದಿನ ಎಸ್ಪಿ ಯತೀಶ್ ಕುಮಾರ್ ಖಡಕ್ ಧೋರಣೆಯಿಂದ ಬಾಲ ಮುಚ್ಚಿಕೊಂಡಿದ್ದ ಧಂಧೆಕೋರರು ಮತ್ತೆ ಎದ್ದು ನಿಂತಿದ್ದಾರೆ.ಹಳೇ ಬೂದನೂರಿನಲ್ಲಿ ಬೀಗ ಜಡಿದಿದ್ದ ಎರಡು ಇಸ್ಪೀಟು ಕ್ಲಬ್ ಗಳು ಮತ್ತೆ ತಮ್ಮ ಧಂಧೆ ಶುರು ಮಾಡಿಕೊಂಡಿವೆ ಎನ್ನಲಾಗಿದೆ
.ನೂತನ ಎಸ್ಪಿ ಪರಶುರಾಮ್ ಬಾಲದಂಡಿ ಇನ್ನಾದರೂ ಐಪಿಎಲ್ ಜೂಜೂ ಧಂಧೆಗೆ ಕಡಿವಾಣ ಹಾಕುವರೆ ನೋಡಬೇಕಿದೆ.