Wednesday, February 5, 2025
spot_img

ಮಂಡ್ಯ:ಪ್ರವಾಸಿಗರಿಂದ ಹಣ ವಸೂಲು ಮಾಡುತ್ತಿದ್ದ ಮೂವರು ಪೋಲಿಸರು ಅಮಾನತ್ತು

 

*ಪ್ರವಾಸಿವಾಹನಗಳಿಂದ ಸುಲಿಗೆ*
*ಮೂರುಪೊಲೀಸ್ ಪೇದೆಗಳ ಅಮಾನತು*
ಮಂಡ್ಯ;ಪ್ರವಾಸಿಗರ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಮುಖ್ಯ ಪೇದೆ ಸೇರಿದಂತೆ ಮೂವರು ಪೊಲೀಸ್ ಪೇದೆ ಗಳನ್ನು ಅಮಾನತ್ತು ಮಾಡಿ ಜಿಲ್ಲಾ ವರಿಷ್ಠಾಧಿ ಕಾರಿಗಳು ಆದೇಶಹೊರಡಿಸಿದ ಘಟನೆ ಮಂಡ್ಯದಲ್ಲಿಂದು ಜರುಗಿದೆ.
ಶ್ರೀರಂಗಪಟ್ಟಣ ತಾಲ್ಲೂಕು ಕೆಆರ್‌ಎಸ್ ಪೊಲೀಸ್ ಠಾಣಿಯಮುಖ್ಯಪೇದೆ ಪುರುಷೋತ್ತಮ್ ಹಾಗೂ ಪೇದೆಗಳಾದ ಪೇದೆ ಅನಿಲ್ ಕುಮಾ‌ರ್ ಹಾಗೂ ಪ್ರಭಸ್ವಾಮಿ ಅಮಾನತ್ತು ಗೊಂಡವರು.
ಈ ಮೂವರು ಕೆಅರ್‌ಎಸ್‌ ವೀಕ್ಷಣೆಗಾಗಿ ಬರುವ ಪ್ರವಾಸಿಗರ ವಾಹನಗಳಿಂದ ಅದರಲ್ಲೂ ಹೆಚ್ಚಾಗಿ ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆಡೆಗಳಿಂದ ಬರುತ್ತಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಚಾಲತಾಣದಲ್ಲಿ ಹಣ ವಸೂಲಿ ಕುರಿತು ವೀಡಿಯೋ ಹರಿ ಬಿಟ್ಟಿದ್ದರು. ಜೊತೆಗೆ ಸಾರ್ವಜನಿಕರು ಸಹ ಹಿರಿಯ ಪೊಲೀಸ್ ಅಧಿಕಾರಿ ಗಳಿಗೆ ದೂರು ನೀಡಿದ್ದರು, ಈ ಸಂಬಂಧ ಮಂಡ್ಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಈ ಮೂವರನ್ನು ಅಮಾನತ್ತು ಗೊಳಿಸಿ ಆದೇಶ ಹೊರಡಿಸಿ ದ್ದಾರೆ.
ವಸೂಲಿಯಲ್ಲಿ ‘ಸಿದ್ದ’ ಹಸ್ತರಾಗಿ ಸಾವಿನ ಮನೆಯಲ್ಲೂ ವಸೂಲಿ‌ ಮಾಡುತ್ತಾ ಠಾಣೆ ಯಲ್ಲಿ‌ಕುಳಿತಿರುವ ಕೆಲವು ಸರ್ಕಲ್ ಇನ್ಸ್‌ಪೆಕ್ಟರ್ ಮೇಲೂ ಕ್ರಮವಾಗುವುದಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ‌ ಸಾರ್ವಜನಿಕರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!