- ಮಂಡ್ಯ ಎ.೦೩.ಬಸ್ -ಕಾರ್ ಡಿಕ್ಕಿ: ನಾಲ್ವರು ಸಾವುಮಂಡ್ಯ: ತಾಲ್ಲೂಕಿನ ತೂಬಿನಕೆರೆ ಗ್ರಾಮದ ಸಮೀಪ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಗುರುವಾರ ಕೆಎಸ್‌ಆರ್ ಟಿಸಿ ಐರಾವತ ಬಸ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟರು. ಇವರೆಲ್ಲರು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳುತ್ತಿದ್ದರು.
ಬೆಂಗಳೂರಿನ ಜೆ.ಪಿ. ನಗರದ ವಿದ್ಯುತ್ ಗುತ್ತಿಗೆದಾರ ಸತ್ಯಾನಂದ ರಾಜೀ ಅರಸ್ (59) ಅವರ ಪತ್ನಿ ನಿಶ್ಚಿತಾ ಅರಸ್ (51), ಸಹೋದರ, ಬೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ ರಾಜೇ ಅರಸ್ (62) ಅವರ ಪತ್ನಿ ಸುವೇದಿನಿ ರಾಣಿ (56) ಮೃತಪಟ್ಟವರು.
ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ತೆರಳುವ ಸಂದರ್ಭ, ಕಾರು ಚಾಲಕನಿಗೆ ಗೊಂದಲವಾಗಿ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ ಡಿಕ್ಕಿ ಹೊಡೆಯಿತು. ಸ್ಥಳದಲ್ಲೇ -ಇಬ್ಬರು ಮೃತಪಟ್ಟು, ಆಸ್ಪತ್ರೆಗೆ ಸಾಗಿಸುವಾಗ ಇನ್ನಿಬ್ಬರು ಮೃತಪಟ್ಟರು. ಸುವೇದಿನಿ ರಾಣಿ ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಸತ್ಯಾನಂದರಾಜೇ ಅರಸ್ ಅವರ ಸೋದರಮಾವ ಎನ್.ರಾಜೇ ಅರಸ್ ಅವರ ಅಂತ್ಯಕ್ರಿಯೆಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಸಿಗೂರು ಗ್ರಾಮಕ್ಕೆ ಹೋಗುವಾಗ ಅಪಘಾತವಾಗಿದೆ.
ಮೃತದೇಹಗಳನ್ನು ಮಂಡ್ಯ ಮಿಮ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ಎಲ್ಲ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.