ಮಂಡ್ಯ:ಸಂಫಪರಿವಾರದ ಶೋಭಾಯಾತ್ರೆಗೆ ಕೆಂಗೇರಿ ರೆಬೆಲ್ ಮಠದ ಸ್ವಾಮಿ ಆಗಮನ
ಸಂಘಪರಿವಾರದ ಅಂಗ ಸಂಘಟನೆಗಳು ಎ ೧೨ರಂದು ರಾಮನ ಹೆಸರಿನಲ್ಲಿ ಆಯೋಜಿಸಿರುವ ಶೋಭಾಯಾತ್ರೆಗೆ ಕೆಂಗೇರಿಯ ಒಕ್ಕಲಿಗರ ರೆಬೆಲ್ ಮಠ ಎಂದೆ ಕರೆಸಿಕೊಳ್ಳುವ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮಿ ಆಗಮಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸಂಘಪರಿವಾರದ ಬಾಲಾಜಿ ಚಿಕ್ಕಬಳ್ಳಿ ನಿಶ್ಚಲಾನಂದಾ ಆಗಮನವನ್ನು ಖಚಿತಪಡಿಸಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿ ರಾಷ್ಟಧ್ವಜ ಹಾರಿಸಲಾಗಿದೆ.ಇದರಿಂದ ಹಿಂದೂ ಸಮಾಜಕ್ಕೆ ಅಪಮಾನವಾಗಿದೆ ಮರಳಿ ಅಲ್ಲಿ ಹನುಮ ಧ್ವಜ ಹಾರಿಸುವುದು.ವಕ್ಫ್ ಹೆಸರಿನಲ್ಲಿ ರೈತರ ಭೂಮಿ ವಶವಾಗುವುದನ್ನು ತಡೆಯಲು ಹಾಗೂ ಹಿಂದೂ ಸಮಾಜವನ್ನು ಒಗ್ಗೂಡಿಸಲು ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣದ ವಿಎಚ್ ಪಿ ಮುಖಂಡ ಭಾನುಪ್ರಕಾಶ್ ಶರ್ಮಾ.ಚಕ್ರವರ್ತಿ ಸೂಲಿಬೆಲೆ ಭಾಗವಹಿಸುತ್ತಿದ್ದಾರೆ.ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕರುಗಳಿಗೂ ಸಹ ಅಹ್ವಾನ ನೀಡಲಾಗಿದೆ ಎಂದರು.
ಶೋಭಾಯಾತ್ರೆಯು ಡಿಜೆ ಯೊಂದಿಗೆ ನಗರದ ವಿವಿಧ ರಸ್ತೆಯಲ್ಲಿ ಇಪ್ಪತ್ತು ಸಾವಿರ ರಾಮಭಕ್ತರೊಂದಿಗೆ ಚಲಿಸಿ ಮಂಡ್ಯ ವಿವಿ ಆವರಣದಲ್ಲಿ ಸಮಾವೇಶಗೊಳ್ಳಲಿದೆ ಎಂದು ತಿಳಿಸಿದರು.